ನೀನೊಂದು ವಿಶ್ ಮಾಡ್ತಿಯ ಅನ್ಕೊಂಡಿದ್ದೆ…

ನೀನೊಂದು ವಿಶ್ ಮಾಡ್ತಿಯ ಅನ್ಕೊಂಡಿದ್ದೆ…

ಬರಹ

2008 ನನ್ನ ಪಾಲಿಗೆ ಸುಖ ದುಃಖಗಳ ಮಿಶ್ರಣ… ಕಳೆದ ವರ್ಷ ನನಗೆ ನೀನು ಸಿಕ್ಕಿದ ವರ್ಷ, ನಿನ್ನನ್ನ ನಂಗೆ ಕೊಟ್ಟ ಅದ್ಭುತ ವರ್ಷ… ಆ ಕಾರಣಕ್ಕೆ ನಾನು 2008ಕ್ಕೆ ಋಣಿ.. ಆದ್ರೆ ನನ್ನ ದುರಾದೃಷ್ಟ ಅದೇ ವರ್ಷ ನಾನು ನಿನ್ನನ್ನ ಕಳಕೊಂಡೆ… ಆದ್ರೆ ಒಂದಲ್ಲ ಒಂದು ದಿನ ನಿನ್ನನ್ನ ಮರಳಿ ಪಡೀತಿನಿ ಅನ್ನೋ promise ಮಾಡಬಲ್ಲೆ ನಾ ಕಳೆದ ವರ್ಷಕ್ಕೆ… ಡಿಸೆಂಬರ್ 31ರ ರಾತ್ರಿ ಹನ್ನೆರೆಡು ಗಂಟೆ ಬಾರಿಸಿದ ತಕ್ಷಣ ನಿನಗೆ ನಾನ್ ಮೆಸೇಜ್ ಮಾಡಿದ್ದೆ… ಮತ್ತೊಮ್ಮೆ ನನ್ನಿಂದ ತಪ್ಪಾಗಿದ್ರೆ ಕ್ಷಮಿಸು ಅಂತ, ಆದ್ರೆ ನಿಂಗೆ ಆ ಕ್ಷನ್ನಾನು ನನ್ನ ಕ್ಷಮಿಸೋ ಮನಸ್ಸಾಗಲೇ ಇಲ್ಲ… ಮನಸ್ಸು ತಡೀಲಿಲ್ಲ ಅದಕ್ಕೆ ಫೋನೇ ಮಾಡಿದ್ದು. ಆದ್ರೆ, ನೀನು ಅದಕ್ಕೂ ಪ್ರತಿಕ್ರಿಯಿಸಲಿಲ್ಲ… ನಾನು ನೀನೊಂದು ವಿಶ್ ಮಾಡಬಹುದು ಅಂತ ಅನ್ಕೊಂಡಿದ್ದೆ… ಮಾಡ್ಲಿಲ್ವಲ್ಲೇ ಬಂಗಾರ… ನಿನ್ ಹತ್ರ ಒಂದು ವಿಶ್ ಮಾಡಿಸಿ ಕೊಳ್ಳುವ ಒಂದು ಸಣ್ಣ ಅದೃಷ್ಟವೂ ನನಗಿಲ್ಲದ ಹಾಗಯ್ತಲ್ಲೋ… ನಾನಂತ ದ್ರೋಹ ಮಾಡಿದ್ದಾದ್ರೂ ಏನು…? ಅಂತ ಕ್ಷಮಿಸದ ತಪ್ಪು ನನ್ನಿಂದ ಏನಾಯ್ತೋ? ನಂಗೆ ನಿನ್ನ ಮರೆತು ಬಿಡೋ ತಾಕತ್ತು ಇಲ್ಲ, ನೆನೆ ನೆನೆದು ಪ್ರತಿ ದಿನ ಸಾಯೋಕು ಆಗ್ತಿಲ್ಲ… ಈ ಹೊಸ ವರ್ಷದಲ್ಲಾದ್ರು ನೀ ನನ್ನ ಕ್ಷಮಿಸಿ ನನ್ನ ಪ್ರ್ರೆತಿನ ಮತ್ತೆ ಚಿಗುರೊಡಿಸ್ತಿಯ ಅಂತ ಎಷ್ಟು ನಂಬಿದ್ದೆ ಗೊತ್ತ ?… ಯಾಕೋ ಪುಟ್ಟ.. ನನ್ನಾಣೆ ನಂಗೆ ನಿನ್ನ ಬಿಟ್ಟು ಬದುಕೋ ಶಕ್ತಿ ಖಂಡಿತ ಇಲ್ವೋ.. ನಿಂಗೆ ನಾನಾ ಪ್ರೀತಿ ನಿಜವಾದ್ದಲ್ಲ ಅನ್ನಿಸೋಕೆ ನೂರು ಕಾರಣ ಇರಬಹುದು, ಆದ್ರೆ ನನ್ನ ಪ್ರೀತಿ ನಿಜ ಅಂತ ಹೇಳೋಕೆ ನನಗಿರೋದು ಒಂದೇ ಒಂದು ಸಾಕ್ಷಿ, ಅದು ನನ್ನ ಮನಸ್ಸು… ಆದ್ರೆ ಏನ್ ಮಾಡ್ಲಿ ನಿಂಗೆ ನನ್ನ ಆ ಮನಸಿನ ಮೇಲೇ ಮುನಿಸು…ಬೇಡ ಪುಟ್ಟ, ಇನ್ನು ನಿನ್ನ ಜೊತೆ ಬದುಕಬೇಕು ಅಷ್ಟೇ… ನನ್ನ ಈ ಜನ್ಮ ನಿಂಗೆ ಮೀಸಲು… ನಿನ್ನೊಂದಿಗೆ ಮಾತ್ರ ನನ್ನ ಬದುಕು… ನಾನು ಬದುಕಿದರೂ ನಿನ್ನೊಂದಿಗೆ, ಸತ್ತರೂ ನಿನ್ನೊಂದಿಗೆ… ನನ್ನ ಜೀವನ ಶೈಲಿ ಇವತ್ತಿನಿಂದ ಸಂಪೂರ್ಣ ಬದಲಾಗುತ್ತೆ… ಅದು ನಿನಗೋಸ್ಕರ, ಜೀವನದಲ್ಲಿ ಏನಾದ್ರೂ ಸಾಧಿಸಲೇಬೇಕು ಅಂತ ಹಠಕ್ಕೆ ಬಿದ್ದು ಬದುಕ್ತಾ ಇದ್ದೀನಿ… ಬದುಕಿ ತೋರಿಸ್ತೀನಿ… ಇವತ್ತೊಂದು ಶಪಥ ಮಾಡ್ತೀನಿ ಕೇಳು ಪುಟ್ಟ… ನೀನು ನನ್ನ ಪ್ರೀತಿಗೆ ಮತ್ತೆ ಒಂದಲ್ಲಾ ಒಂದು ದಿನ ಜೋತೆಯಾಗ್ತಿಯ ಅನ್ನೋ ದೊಡ್ಡ ನಂಬಿಕೆ ನನಗಿದೆ… ನೀನು ಯಾವತ್ತಿದ್ರೂ ನನ್ನವಳೇ… ನೀನು ನಂಗೆ ಮಾತ್ರ ಸ್ವಂತ… ನಿನ್ನನ್ನ ಬೇರೆ ಯಾರಿಗೂ ನಾನು ಬಿಟ್ಟು ಕೊಡಲಾರೆ… ಜೀವ ಇರೋ ತನಕ ನಿನ್ನನ್ನ ಪಡೆದೇ ತೀರುವ ಛಲದೊಂದಿಗೆ ಬದುಕ್ತೀನಿ… ಹಂಗೂ ನೀನು ನನ್ನನ್ನ ಮರೆತು ಬೇರೆಯವನ ಕೈ ಹಿಡಿಯುವ ಮನಸ್ಸು ಮಾಡಿದ್ದೆ ಆದ್ರೆ ಅವತ್ತಿಗೆ ನಾನಿಲ್ಲ… ನೆನಪಿಟ್ಕೋ , ನಾನೊಬ್ಬನೇ ಅಲ್ಲ… ನೀನು ಇರಲ್ಲ… ಯಾಕಂದ್ರೆ.. ನಾನು ಇದ್ರೂ ನಿನ್ ಜೊತೆ… ಸತ್ರೂ ನಿನ್ ಜೊತೆ… ನನ್ನ ಪ್ರೀತಿಗೆ ಜಯ ಸಿಗುತ್ತೆ… ಸಿಕ್ಕೇ ಸಿಗುತ್ತೆ… ಆದರೂ ಒಂದು ಮಾತು ಹೇಳ್ತೀನಿ ಬೇಜಾರ್ ಮಾಡ್ಕೋಬೇಡ… ನೀನು ನಂಗೊಂದು ವಿಶ್ ಮಾಡಬಹುದಿತ್ತು ಅಲ್ವಾ ಬಂಗಾರ… ಲವ್ ಯೂ ಕಣೋ ಪುಟ್ಟಾ… ತುಂಬಾನೇ…
ನಿಂಗೆ ಈ ಹೊಸ ವರ್ಷ ಸದಾ ನಗುವಿನ ಚಿಲುಮೆಯಾಗಿರಲಿ … ಪ್ರತಿ ಕ್ಷಣವೂ ನಿನ್ನ ನಗುವಿನ ಕ್ಷಣಗಳಾಗಲಿ… happy new year my dear….
neenillade.wordpress.com