ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?
ಕವನ
ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ? ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ ಸೃಜನಶೀಲತೆ ತೋರಲೇನು ಕೊರತೆ? ಬತ್ತಿತೇ ನಿನ್ನಯ ಭಾವನೆಯ ಒರತೆ? ಎಂದು ಕೇಳಿದೆ ಒಮ್ಮೆ ನನ್ನ ಮನವ..|1| ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು ನೀ ಹೆಕ್ಕದೇ ಬಿಟ್ಟ ತಾಂಬೂಲ ನಾನು ಸುತ್ತ ಕಳೆ ಬೆಳೆಯಲು ತಲೆಯೆತ್ತಿ ನಿಂತೆ ಇನ್ನರ್ಧ ಅಡಿಯಲೇ ನೀ ಕಾಣ್ವೆಯೆಂಬಂತೆ|2| ನಿಡಿದಾಗಿ, ಇಡಿಯಾಗಿ ನಾ ತುಂಬಿ ಬೆಳೆದೆ ಹಾರೋ ದಣಿದಕ್ಕಿಗಳ ಕುಳ್ಳಿರಿಸೆ ಕರೆದೆ ಹೂವಾಗಿ, ಫಲವಾಗಿ ಬಾಲ್ಯ ರೂಪವೇ ಆದೆ. ನೀನಿಂದು ಹೊಗಳುವ ಸಿಹಿನೀರ ಪಂಪಾದೆ|3| ಮರಿಯಳಿಲು ಬಳಿ ಬಂತು ನಾನೂ ಆಡಲೇ ಅಂತು ಹಾರೋ ಮಂಗವು ಬಂತು , ಸಿಹಿನೀರು ಬೇಕಂತು ಪ್ರತಿದಿನಾ ಕೊರೆದ ದುಂಬಿ ನಿನ್ನೆನಪೇ ತಂತು ಎಷ್ಟೋ ವರುಷದ ಬಳಿಕ ನೀ ಹೊಗಳೋ ತಾಂಬೂಲ ಬಣ್ಣ ಬೇರೆಯದಾದ್ರೂ ನಂದೇ ಅಂಶದ ಫಲ