'ನೀರೆ'

'ನೀರೆ'

ಕವನ

ಬರೆದೆ ಕವಿತೆ ನೀರಿನ ಮೇಲೆ

ಓದಲು ಆಗದು ಕಾಣದ ಮೇಲೆ

ಓದುತ ಕುಳಿತೆ ಮನಸಿನ ಓಲೆ

ಅರ್ಥವೇ ಆಗದು ಎನದರ ಲೀಲೆ?

 

ನೋಡಲು ಸಿಗದು ಏನಿದೆ ಒಳಗೆ

ಕಂಡರು ಏಟುಕದು ಆಳದಿ ಕೆಳೆಗೆ

ಹಾಕುವುದೆಗೊ ನೀರಿಗೆ ಹೊಲಿಗೆ?

ಆದರು ಅದೇನೊ ಸುಂದರ ಸಲಿಗೆ

 

ಸೂರ್ಯನ ಹಿಡಿದು ತಂಪನು ಕೊಟ್ಟಿತು

ಚಂದ್ರನ ಹಿಡಿದು ಮಗುವಿಗೆ ಕೊಟ್ಟಿತು

ಹಳ್ಳದ ಕಡೆಗೆ ಹರಿಯುತ ಸಾಗಿತು

ಕಡಲ ತೀರಕೆ ಪ್ರಾಣವ ಬಿಟ್ಟಿತು

                            ಸಂಜಿ