ನೀವಾಗಿದ್ದರೆ, ಏನು ಮಾಡುತ್ತಿದ್ದಿರಿ...?

ನೀವಾಗಿದ್ದರೆ, ಏನು ಮಾಡುತ್ತಿದ್ದಿರಿ...?

ನೀವಾಗಿದ್ದರೆ,ಏನು ಮಾಡುತ್ತಿದ್ದಿರಿ...?

ಶಿವು ತೀರ ಅಪರೂಪವೆನಿಸುವ ಕಾಯಿಲೆಯಿಂದ ಬಳಲುತಿದ್ದ.ವೈದ್ಯರು,ಹೆಚ್ಚೆಂದರೆ ಇನ್ನು ಆರರಿಂದ ಒಂಭತ್ತು ತಿಂಗಳು ಅವನು ಬದುಕಬಹುದೆಂದು ಭವಿಷ್ಯ ನುಡಿದಿದ್ದರು.ಶಿವು ತನ್ನ ಕಾಯಿಲೆಗಿಂತಲೂ ಹೆಚ್ಚಾಗಿ ತನ್ನನ್ನು ನಂಬಿರುವ ನಾಲ್ಕು ಹೆಣ್ಣು ಜೀವಗಳ ಚಿಂತೆಯಲ್ಲಿ ಮುಳುಗಿದ್ದ.ಪ್ರತಿದಿನ ತನ್ನ ಪತ್ನಿ ಮತ್ತು ಮೂವರ ಹೆಣ್ಮಕ್ಕಳ ಭವಿಷ್ಯವನ್ನು ನೆನೆದು ಕಣ್ಣೀರಿಡುತ್ತಿದ್ದ.ತಾನು ಬಹಳವಾಗಿ ನಂಬಿದ್ದ ಏಕೈಕ ಗೆಳೆಯನಲ್ಲಿ ತನ್ನ ಕಷ್ಟವನ್ನೆಲ್ಲ ತೋಡಿಕೊಂಡ.ಅವನಿಗೆ,ತನ್ನ ಗೆಳೆಯನಿಗೆ ಬಂದ ಇಂತಹ ಪರಿಸ್ಥಿತಿಯನ್ನು ನೋಡಿ ಕರುಳು ಹಿಂಡಿದಂತಾಯಿತು.ಬಹಳ ಯೋಚಿಸಿ... ಶಿವುನಿಗೆ ಒಂದು ಸಲಹೆ ಕೊಡುತ್ತಾನೆ.ನಾನೊಬ್ಬ ಇನ್ಶುರೆನ್ಸ್ ಏಜೆಂಟ್.ಹೀಗಾಗಿ ನನ್ನ ಪ್ರಭಾವ ಬಳಸಿ ನಿನಗೊಂದು,ತಿಂಗಳ ಕಂತಿನ ದೊಡ್ಡ ಮೊತ್ತದ ಪಾಲಿಸಿ ಮಾಡಿಸಿ ಕೊಡುತ್ತೇನೆ.ಹೊರಜಗತ್ತಿಗೆ ಈಗಲು ನೀನು ಆರೋಗ್ಯವಂತ ವ್ಯಕ್ತಿ.ನಾನು ಯಾರತ್ರನು ಈ ಗುಟ್ಟು ಬಿಟ್ಟು ಕೊಡುವುದಿಲ್ಲ.ನೀನು ಬದುಕಿರುವವರೆಗೆ ಏನಿಲ್ಲ ಅಂದ್ರು ಆರರಿಂದ ಒಂಭತ್ತು ಕಂತು ಕಟ್ಟಲು ಸಾಧ್ಯವಾಗಬಹುದು.ನೀನು ಕಾಲವಾದ ನಂತರ ಪಾಲಿಸಿಯ ಸಂಪೂರ್ಣ ಮೊತ್ತ ನಿನ್ನ ಕುಟುಂಬಕ್ಕೆ ಸಿಗುವಂತೆ ಮಾಡೋದು ನನ್ನ ಜವಾಬ್ದಾರಿ ಎಂದ.ಆದರೆ ಶಿವುಗೆ ತನ್ನ ಗೆಳೆಯನ ಈ ಸಲಹೆ ಇಷ್ಟವಾಗಲಿಲ್ಲ.ಆರೋಗ್ಯವಂತ ವ್ಯಕ್ತಿಗೆ ಪಾಲಿಸಿ ಮಾಡೋದು ಏಜೆಂಟ್ ಆದವನ ಕರ್ತವ್ಯನಿಷ್ಠೆ.ತನ್ನ ಲಾಭಕ್ಕೋಸ್ಕರ ತನ್ನ ಆಪ್ತ ಗೆಳೆಯನನ್ನು ಕರ್ತವ್ಯ ಭ್ರಷ್ಟಗೊಳಿಸೋದು ಅವನಿಗೆ ಸರಿ ಕಾಣಲಿಲ್ಲ.ಹೀಗಾಗಿ ಈ ಉಪಾಯವನ್ನು ಕೈಬಿಡುವಂತೆ ಶಿವು ಗೆಳೆಯನಿಗೆ ಸೂಚಿಸುತ್ತಾನೆ.

ಈಗ ನೀವು ಹೇಳಿ, ಶಿವು ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ...?

-@ಯೆಸ್ಕೆ

Comments