ನೀವೂ ಒಬ್ಬ ಕವಿಯಾಗಿರಿ!

ನೀವೂ ಒಬ್ಬ ಕವಿಯಾಗಿರಿ!

ಬರಹ

ಮೊನ್ನೆ ಬೆಸ್ಟ್ ಆಫ್ ನಾ.ಕಸ್ತೂರಿ ( ಅವರ 'ಅನರ್ಥಕೋಶ' ಸುಪ್ರಸಿದ್ಧವಾದದ್ದು -ಸಂಗ್ರಾಹ್ಯ ಪುಸ್ತಕ- ಅದರ ಬಗ್ಗೆ ಇನ್ನೊಂದು ದಿನ ಸಂಪದದಲ್ಲಿ ಬರೆಯುವೆ) ಎಂಬ ಪುಸ್ತಕ ಕೊಂಡುಕೊಂಡೆ. ಅದರಲ್ಲಿ ನೀವೂ ಒಬ್ಬ ಕವಿಯಾಗಿರಿ ಎಂಬ ಹಾಸ್ಯ ಲೇಖನ ಇದೆ. ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ಹೇಗೆ ಕವಿತೆ/ಕಾವ್ಯ ಬರೆಯಬೇಕು ಎಂಬುದರ ಬಗ್ಗೆ ಇದೆ .

ಮುಖ್ಯ ಸಲಹೆಗಳು :
೧. ಮಾರುಗಟ್ಟಲೆ ಹೊಸೆಯುತ್ತ ಹೋಗಿ! ಉದ್ದವಾದಷ್ಟೂ ಒಳ್ಳೆಯದು!!
೨. ಗದ್ಯದಲಿ ಬರೆದು , ಪದ್ಯಕ್ಕೆ ಪರಿವರ್ತಿಸಿ! ( ಉದಾಹರಣೆಗಳು ಇವೆ)
೩. ಅತಿರೇಕವಾಗಿ , ತಿರುವು ಮುರುವಾಗಿ ಬರೆಯಿರಿ! ಅರ್ಥದ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ! ( ಅರ್ಥೈಸುವವ ಮುಂದೊಮ್ಮೆ ಹುಟ್ಟಿ ಬಂದಾನು!!)