ನೀ ಯಾರು?

ನೀ ಯಾರು?

ಕವನ

ನಾನು ನಿನ್ನನ್ನು ನಮ್ಮ ಬೀದಿಯಲ್ಲೂ ನೋಡಲಿಲ್ಲಾ,
ರಸ್ತೆಯಲ್ಲೂ ನೋಡಲಿಲ್ಲಾ, ಬಸ್ಸಲ್ಲೂ ನೋಡಲಿಲ್ಲಾ,
ಉದ್ಯಾನವನದಲ್ಲೂ
ನೋಡಲಿಲ್ಲಾ, ಸಿನಿಮಾ ಮಂದಿರದಲ್ಲೂ ನೋಡಲಿಲ್ಲಾ,
ಆದರೂ ನನ್ನ ಕನಸಲ್ಲಿ 
ದಿನಾ ಬರುತ್ತೀಯ, ನೀ ಯಾರು?

ನೀನು ಫೋನ್ ನಂಬರ್ ಕೂಡ ಕೊಟ್ಟಿಲ್ಲಾ, ನಾ ಫೋನ್ ಕೂಡ ಮಾಡಿಲ್ಲಾ,
ವಿಳಾಸನೂ ಗೊತ್ತಿಲ್ಲಾ, ನಿನ್ನ ಹಿಂದೇನೂ ಬಂದಿಲ್ಲಾ,
ಪ್ರೇಮ ಪತ್ರ ಇಲ್ಲವೇ ಇಲ್ಲಾ,
ಆದರೂ ನನ್ನ ಕನಸಲ್ಲಿ ದಿನಾ ಬರುತ್ತೀಯ, ನೀ ಯಾರು?

ಕೃಷ್ಣ


 

Comments