ನುಡಿ ಹಾರ
ಮುಕ್ತಕ
ಕಲಿಗಾಲ ಇದುವಯ್ಯ ಹೊಡೆದಾಟ ಜನರೊಳಗೆ
ಹಲವರೊಳು ಈತರದ ವೈಷಮ್ಯ ಏಕೊ |
ಗೆಲುತಿರಲು ಮತ್ತಷ್ಟು ಆಸೆಯೇತಕೆ ಬೇಕು
ಇಲದವನ ಕೈಹಿಡಿಯು --- ಛಲವಾದಿಯೆ||
***
ನುಡಿ ಹಾರ
ಮೌನವಾಗುತ ಸಾಗೆ ಏನು ತಿಳಿವುದೊ ನಿನಗೇ
ಅತಿಯಾದ ವಿಶ್ವಾಸ ಬೇಡವೋ ನಿನಗೆಂದೂ !
ಸೋರಿ ಹೋಗಿಹ ಬದುಕ ಕಟ್ಟುತಲೆ ಮುನ್ನಡೆಯೋ
ಬಾಳು ಹಸನಾಗುವುದು -- ರಾಮ ರಾಮ
***
ಮನದೊಳಗೆ ಕುಟಿಲತೆಯು ಇರುತ ಸವಿಯನು ನೀಡೆ
ವಿಷವಾಗಿ ಪರಿಣಮಿಸಿ ಸಾವ ತರುವುದು ನೋಡು
ಗತಿಯಿರದ ಜೀವನದಿ ಹೊನ್ನದಾಸೆಗೆ ಬೀಳೆ
ಮಸಣವನು ಸೇರುವೆಯೊ -- ರಾಮ ರಾಮ
***
ಹನಿಗಳು
ಎಲ್ಲಿ
ಹೋದರೂ
ಕವಿ
ಗೋಷ್ಠಿಗಳಲ್ಲಿ
ಕವಿಗಳ ಕವಿತೆಯ
ವಾಚನಕ್ಕೆ
ಕವಿಗಳೇ ಕಿವಿಗಳು
ಖಾಲಿ ಕುರ್ಚಿಗಳೇ
ಪ್ರೇಕ್ಷಕರು !
***
ಪ್ರಪಂಚದಲ್ಲಿ
ಧರ್ಮಕ್ಕೆ ಬೈಸಿಕೊಂಡ
ಧರ್ಮವೇ ಹಿಂದೂ !
***
ಪ್ರಪಂಚದಲ್ಲಿ
ಎಲ್ಲರನ್ನೂ ತಬ್ಬಿದ
ದೇಶ ಭಾರತ !
***
ದೇಶದೊಳಗೆ
ಭಾವನಾತ್ಮಕ ರಾಜ್ಯ
ಕರ್ನಾಟಕವು !
***
ತಿನ್ನುವುದನ್ನ
ಕೊಬ್ಬದು ಬೇಕೆಯಿಂದು
ಓ ಮೈ ಶುಗರ್ !
***
ಒಂಟಿತನವು
ಬೇಸರ ದುಮ್ಮಾನವು
ತಾಳಿ ಕಟ್ಟಿರಿ !
***
ಚಿಪ್ಪು ಜೊತೆಗೆ
ಮುತ್ತಿನ ಚಿಪ್ಪಿನಂತೆಯೇ
ಸಿಮ್ ಚಿಪ್ಪೊಂದಿದೆ !
***
ಕರಿ ನೆರಳು
ನನ್ನನ್ನೇ ನೋಡಿತಿಂದು
ಹಲ್ಲು ಕಿಸಿದು !
***
ಕತ್ತಲಿನಲ್ಲೇ
ದೇಶವು ಬೆಳಗಿತು
ಕೋಟಿ ಕೋಟೆಯು !
-ಹಾ ಮ ಸತೀಶ ಬೆಂಗಳೂರು*
ಚಿತ್ರ ಕೃಪೆ: ಇಂಟರ್ನೆಟ್ ತಾಣ
![](https://saaranga-aws.s3.ap-south-1.amazonaws.com/s3fs-public/emptycha.jpeg)