ನೆನಪಿನ ಅಲೆಗಳು ಭಾರವಾದವೇ ?
ಕವನ
ಗರಿ ಬಿಚ್ಚಿ ಮನವು
ಕುಣಿಯುವಾಗ
ಸಂತಸದ ಹೊಳೆಯಲ್ಲಿ
ಹರಿಯುವಾಗ
ದು:ಖದ ನೆನಪಿನ
ಮೋಡವಾಯಿತು
ಕಣ್ಣೀರಿನ ಮಳೆಯಲ್ಲಿ
ನೆನೆಯಬೇಕಾಯಿತು
ಬೇಡವಾದರು ಆ ದಿನ
ಹತ್ತಿರ ಬರುತಿದೆ
ಬೆಳಕಿಗಾಗಿ ಕಾದರು
ಕತ್ತಲು ಹರಡುತಿದೆ
ಚಿಂತೆಯ ಚಿತೆಯಲ್ಲಿ
ಮನಸ್ಸು ಅಂಗಾರವಾಗಿದೆ
ಮೈ ಸುಡುವ ನೆನಪುಗಳು
ನೋವಾಗಿ ಮರುಕಳಿಸಿತು
ನಗುವಿನ ದಾರಿ
ಮಾಯವಾಯಿತು
ಸುಖಮಯ ಜೀವನ
ಕುರುಡನ ಕಣ್ಣಾಯಿತು
Comments
ಉ: ನೆನಪಿನ ಅಲೆಗಳು ಭಾರವಾದವೇ ?
In reply to ಉ: ನೆನಪಿನ ಅಲೆಗಳು ಭಾರವಾದವೇ ? by Saranga
ಉ: ನೆನಪಿನ ಅಲೆಗಳು ಭಾರವಾದವೇ ?
ಉ: ನೆನಪಿನ ಅಲೆಗಳು ಭಾರವಾದವೇ ?
In reply to ಉ: ನೆನಪಿನ ಅಲೆಗಳು ಭಾರವಾದವೇ ? by saraswathichandrasmo
ಉ: ನೆನಪಿನ ಅಲೆಗಳು ಭಾರವಾದವೇ ?