ನೆನಪಿನ ಕಂಠದ ಪಿ ಬಿ ಶ್ರೀನಿವಾಸ್

ನೆನಪಿನ ಕಂಠದ ಪಿ ಬಿ ಶ್ರೀನಿವಾಸ್

ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ ಹಾಡುಗಳಿಂದಲೇ ಎಲ್ಲವೂ ಪ್ರಾರಂಭ. ನಿಜಕ್ಕೂ ಸರಸ್ವತಿಯ ಕೃಪೆಯೆಂಬಂತೆ ನಾಲ್ಕೈದು ಭಾಷೆಗಳಲ್ಲಿ ಅದೇ ಭಾಷೆಯವರು ಹಾಡುವದಕ್ಕಿಂತಲೂ ಉತ್ತಮವಾಗಿ ತುಂಬು ಹೃದಯದ ನುಡಿಯಲ್ಲಿ ಹಾಡಿದ ಕೆಲವೇ ಕೆಲವರ ಪಟ್ಟಿಗೆ ಪಿ ಬಿ ಶ್ರೀನಿವಾಸ್ ಸೇರುತ್ತಾರೆ.

ಸ್ಕೂಲಿನಲ್ಲಿದ್ದಾಗ ಆಕಾಶವಾಣಿ, ದೂರದರ್ಶನದಲ್ಲಿ ಇವರ ಹಾಡುಗಳನ್ನು ಕೇಳಿದ್ದ ನನಗೆ ಇವರು ತೆಲುಗು, ತಮಿಳು ಹಾಗು ಇನ್ನುಳಿದ ಭಾಷೆಗಳಲ್ಲೂ ಹಾಡುತ್ತಿದ್ದರು ಎಂಬುದು ತಿಳಿದಿರಲೇ ಇಲ್ಲ. ಕಾಲೇಜಿನಲ್ಲಿದ್ದಾಗ ಒಮ್ಮೆ ಪಿ ಬಿ ಎಸ್ ಧ್ವನಿಯಲ್ಲೇ ಒಂದು ತಮಿಳು ಹಾಡು ಕೇಳಿ - "ಅರೆರೆ, ನಮ್ಮ ಕನ್ನಡದವರು ಇಷ್ಟು ಚೆನ್ನಾಗಿ ತಮಿಳು ಹಾಡನ್ನೂ ಹೇಳಿದ್ದಾರಲ್ಲ" ಎಂದನಿಸಿತ್ತು. ಆ ಲೆಕ್ಕಕ್ಕೆ ಪಿ ಬಿ ಎಸ್ ಈಗಲೂ ನಮಗೆಲ್ಲ ಕನ್ನಡದವರೇ.

ಅವರು ಹಾಡಿದ ನನ್ನ ನೆಚ್ಚಿನ ಕೆಲವು ಹಾಡುಗಳು:

Comments

Submitted by venkatb83 Mon, 04/15/2013 - 17:09

ಇಂದಿನ ಸಂಪದದಲ್ಲಿ ಪೀ ಬಿ ಶ್ರೀ ಅವರ ಬಗ್ಗೆ ಒಟ್ಟು ೩ ಬರಹಗಳು ಬಂದಿವೆ ,ನಾಡಿಗರು ಬರೆದದ್ದು ಓದಿ ಪ್ರತಿಕ್ರಿಯಿಸುವುದರೊಳಗೆ ಮತ್ತೆರಡು ಬರಹಗಳೂ ಸೇರಿದವು , ಈ ಎಲ್ಲ ನುಡಿ ನಮನಗಳಲ್ಲಿ ನನ್ನ ಪ್ರತಿಕ್ರಿಯೆ ನಮನ ಸಲ್ಲಿಸುವೆ ,,... ಆಗ ಸುಮಾರು ೧೪ - ೧೫ ಇರ್ಬೇಕು , ಹಳ್ಳಿಯಲ್ಲಿ ಇದ್ದ ಒಂದೋ ಎರಡು ಟಿ ವಿ ಇರುವ ಗೌಡರ ಮನೆಯಲ್ಲಿ ಶನಿವಾರ ಭಾನುವಾರ ಕನ್ನಡ ಹಿಂದಿ ಚಲನ ಚಿತ್ರಗಳನ್ನು ನೋಡಲು ಹೋಗುತ್ತಿದ್ದೆ ,ಆಗೊಮ್ಮೆ ನಾ ನೋಡಿದ್ದು ಬಭ್ರುವಾಹನ ಚಿತ್ರ. ಡಾ :ರಾಜ್ ಅವರು ದ್ವಿ ಪಾತ್ರಗಳಲ್ಲಿ ಎದುರು ಬದುರಾಗಿ ವಾಗ್ಯುದ್ಧ ಮಾಡುತ್ತಾ ಹಾಡುವ ಹಾಡು ನೋಡುತ್ತಾ ಕೇಳುತ್ತ ಅದು ಡಾ:ರಾಜ್ ಅವರೇ ಎರಡು ಧ್ವನಿಗಳಲ್ಲಿ ಹಾಡಿರುವರು ಎಂದು ಯೋಚಿಸಿದ್ದೆ , ಆದರೆ ಅದೊಮ್ಮೆ ಕ್ಯಾಸೆಟ್ ತಂದಾಗ ಅದರಲ್ಲಿ ಡಾ; ರಾಜ್ ಮತ್ತು ಪೀ ಬಿ ಶ್ರೀನಿವಾಸ್ ಎಂದು ಇರುವುದು ನೋಡಿ ಅಚ್ಚರಿ ಆಯ್ತು. ಆಮೇಲೆ ಗಂಧದ ಗುಡಿ , ಕಸ್ತೂರಿ ನಿವಾಸದ ಜನ ಪ್ರಿಯ ಹಾಡುಗಳನ್ನು ಕೇಳುವಾಗ ನೋಡುವಾಗ ರಾಜ್ ಅವರೇ ನೆನಪಿಗೆ ಬರುತ್ತಿದ್ದರು. ಒಂದೇ ರೀತಿ ಕೇಳಿಸುವ ಸ್ವರ ಧ್ವನಿ ಕಾರಣವಾಗಿ ಪೀ ಬಿ ಶ್ರೀ ಅವರಿಗಿಂತ ಡಾ ರಾಜ್ ಅವರೇ ಮಿಂಚಲು ಕಾರಣವಾಯ್ತೆ ? ಎಂಬುದು ನನ್ನ ಸಂಶಯ .. ಆದರೆ ನನತರ ರಾಜ್ ಆವರು ಪೀ ಬಿ ಶ್ರೀ ಅವರನ್ನ ತಮ್ಮ ಶಾರೀರ ಎಂದು -ರಾಜ್ ಅವರಿಗಾಗಿ ನಾವ್ ಹಾಡಿದ್ದು ತಮ್ಮ ಸೌಭಾಗ್ಯ ಎಂದೂ ಪೀ ಬಿ ಶ್ರೀ ತಮ್ಮ ತಮ್ಮ ಘನತೆ ಹಿರಿಮೆ ಔದಾರ್ಯ ಮೆರೆದರು ಜನ ಮಾನಸದಲ್ಲಿ ನೆಲೆಸಿದರು ... ಅದ್ಕೆ ಇರ್ಬೇಕು ಈಗಲೂ ಕೆಲ ರಾಜ್ ಪೀ ಬಿ ಶ್ರೀ ಹಾಡುಗಳನ್ನು ಕೇಳುವಾಗ ಫಕ್ಕನೆ ರಾಜ್ ಮತ್ತು ಪೀ ಬಿ ಶ್ರೀ ಇಬ್ಬರೂ ನೆನಪಾಗುವರು . ಇಂತಹ ಸೌಭಾಗ್ಯತೆ ಅಧ್ರುಸ್ಟ ಎಷ್ಟು ಜನಕೆ ದಕ್ಕೀತು ... ಅದರಲ್ಲೂ ಕಸ್ತೂರಿ ನಿವಾಸ ಮತ್ತು ನಾವಾಡುವ ನುಡಿಯೇ, ಕನ್ನಡ ನಾಡಿನ ವೀರರ ಮಣಿಯ , ಮೂಲಕ ಪೀ ಬಿ ಶ್ರೀ ಸದಾ ಅಮರ .. ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಜನರ ಪ್ರೀತಿ ಪ್ರೆಮಾಧಾರಕ್ಕೆ ಸೋತ ಪೀ ಬಿ ಶ್ರೀ ಅನ್ದೊಮೆಮ್ ಮೈಸೂರು ಪೇಟದಲ್ಲಿ ಸನ್ಮಾನ ಮಾಡಿದ್ದು ಮರೆಯದೆ ಅದೇ ಪೇಟವನ್ನು ಸದಾ ಧರಿಸುತ್ತಾ ಕನ್ನಡ ನಾಡು ನುಡಿ ಜನರ ಬಗೆಗಿನ ಪ್ರೇಮ ಜಗ ಜ್ಜಾಹೀರು ಮಾಡಿದರು . ಬಹುಶ ಮೈಸೂರು ಪೇಟ ಧರಿಸಿ ಆ ಪೇಟಕ್ಕೂ ಮತ್ತು ತಮ್ಮ ವ್ಯಕ್ತಿತ್ವಕ್ಕೂ ಘನತೆ ಗೌರವ ತಂದುಕೊಟ್ಟ ಕಂಗೊಳಿಸಿದ ಮಹನೀಯರು ರಾಜ್ ಮತ್ತು ಪೀ ಬಿ ಶ್ರೀ .. ಇವರನ್ನು ಟೀ ವಿಯಲ್ಲಿ ಸನ್ಮಾನ ಸಭೆ ಸಮಾರಂಭಗಳಲಿ ಕರೆಯಿಸಿ ಹಾಡಲು ಮಾತಾಡಲು ಹೇಳುವಾಗ ಅದು ಕೇಳೋದು ನೋಡೋದು ಸೊಗಸಾಗಿತ್ತು... ರಾಜ್ ಅವರ ಮರಣಾನಂತರ ಅವರ ನೆನಪಿನಲ್ಲಿ ತಾವೇ ಸ್ವ ರಚಿಸಿ ವಾಚಿಸಿದ ರಾಜ್ ಬಗೆಗಿನ ಕವನ ಓದುವಾಗ ಅವರ ಸ್ವರ ಕಂಪಿಸುತ್ತಿದ್ದುದು ಈಗಲೂ ನೆನಪಿದೆ... ಕಲೆ - ಕಲೆಗಾರ ,ಸಾಹಿತಿ ,ಸಂಗೀತಗಾರ ಗಾಯಕರು ಭೌತಿಕವಾಗಿ ನಮ್ಮಿಂದ ಮರೆಯಾದರೂ ಅವರ ಕೊಡುಗೆ (ನಟನೆ-ಸಾಹಿತ್ಯ ಕೃಷಿ -ಸಂಗೀತ- ಚಿತ್ರ ಕಲೆ ಇತ್ಯಾದಿ)ಮೂಲಕ ಸದಾ ಅಮರ.. ನಾಡಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ತನ್ನೆಡೆಗೆ ಕರೆಸಿಕೊಳ್ಳುತ್ತಿರುವ ದೇವನ ದೇವ ಲೋಕದಲ್ಲಿ ಇವರೆಲ್ಲರ ಉಪಸ್ಥಿತಿ ಖಂಡಿತ ಅಲ್ಲಿ ಕಳೆ ಕಟ್ಟಲಿದೆ .... ದೇವಲೋಕದ ಹಿರಿಮೆ ಹೆಚ್ಚಲಿದೆ ... ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ -ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಶೋತೃ ವರ್ಗಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ .. \। /
Submitted by venkatb83 Mon, 04/15/2013 - 17:10

In reply to by venkatb83

ಕಲೆ - ಕಲೆಗಾರ ,ಸಾಹಿತಿ ,ಸಂಗೀತಗಾರ ಗಾಯಕರು ಭೌತಿಕವಾಗಿ ನಮ್ಮಿಂದ ಮರೆಯಾದರೂ ಅವರ ಕೊಡುಗೆ (ನಟನೆ-ಸಾಹಿತ್ಯ ಕೃಷಿ -ಸಂಗೀತ- ಚಿತ್ರ ಕಲೆ ಇತ್ಯಾದಿ)ಮೂಲಕ ಸದಾ ಅಮರ.. ನಾಡಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ತನ್ನೆಡೆಗೆ ಕರೆಸಿಕೊಳ್ಳುತ್ತಿರುವ ದೇವನ ದೇವ ಲೋಕದಲ್ಲಿ ಇವರೆಲ್ಲರ ಉಪಸ್ಥಿತಿ ಖಂಡಿತ ಅಲ್ಲಿ ಕಳೆ ಕಟ್ಟಲಿದೆ .... ದೇವಲೋಕದ ಹಿರಿಮೆ ಹೆಚ್ಚಲಿದೆ ... ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ -ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಶೋತೃ ವರ್ಗಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ .. \। /
Submitted by venkatesh Mon, 04/15/2013 - 18:08

In reply to by venkatb83

ನೀವು ತಿಳಿಸಿದ ಲೇಖನಗಳಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಬರೆದ ಲೇಖನ ಸಕತ್ತಾಗಿದೆ ಎಂದು ನನ್ನ ಅನಿಸಿಕೆ. ಸಚಿತ್ರ ಹಾಗೂ ಪೇಪರ್ ತುಂಬಾ ಇದೆ. ಸ್ವಲ್ಪವೂ ಜಾಗ ಬಿಟ್ಟಿಲ್ಲ. ಏಕೆಂದರೆ ರಾಜ್ ರವರ ಮುಖವಾಣಿ ಹೃದಯವಾಣಿಯಾಗಿ ಮೇರುವಲಯದಲ್ಲಿ ಮೆರೆದ ಪಿ.ಬಿ.ಎಸ್.ಬಗ್ಗೆ ಬರೆಯಲು ಅಷ್ಟು ಸುಲಭವಲ್ಲ. ಇದೆ ತರಹ, ರಾಜ್ ಕಪೂರ್ ರವರ ಹೃದಯವೆಂದು ಹೆಸಾರಾಗಿದ್ದ, ಮುಖೇಶ್ ರವರು ನಿಧನರಾದಾಗ ರಾಜ್ಕಪೂರ್ ಒಂದೇ ಕಣ್ಣಿನಲ್ಲಿ ಅತ್ತರು. ಏಕೆಂದರೆ ರಾಜ್ ನಟನೆಯಲ್ಲಿ ದಮ್ ಇರಲಿಲ್ಲ ! ಆದರೆ ಸ್ವತಃ ಒಬ್ಬ ಸಶಕ್ತ ಹಾಡುಗಾರ, ನಟ, ಖಳನಾಯಕ, ನಾಯಕ, ಮತ್ತೇನೋ ಏನೋ ಆಗಿದ್ದ ಡಾ. ರಾಜ್ ಗೆ ಜೊತೆ ಹೆಗಲು ಕೊಟ್ಟ, ಪಿ.ಬಿ.ಶ್ರೀನಿವಾಸ್ ಬಗ್ಗೆ ಅದೆಷ್ಟು ಹೇಳಿದರು ಕಡಿಮೆಯೇ !
Submitted by swara kamath Tue, 04/16/2013 - 11:17

ಶ್ರೀಯುತ ನಾಡಿಗ್ ಅವರೆ ನಮಸ್ಕಾರಗಳು. ಪಿ.ಬಿ ಎಸ್ ಕುರಿತ ತಮ್ಮ ಕಿರು ಲೇಖನ ,ಹಾಗು ಅವರ ಹಿನ್ನಲೆ ಗಾಯನದ ಎರಡು ಹಾಡುಗಳ ದೃಶ್ಯಾವಳಿ ಗಳನ್ನು ನೋಡಿ ಅವರ ನೆನಪುಗಳು ತುಂಬಾ ಕಾಡಿ ಮನಸ್ಸನ್ನು ಹಿಂಡಿತು.ಸಾಂದರ್ಭಿಕ ಲೇಖನ ಬರೆದು "ಸಂಪದ"ದ ಮೆರಗನ್ನು ಇನ್ನೂ ಪ್ರಖರ ಗೊಳಿಸಿದ್ದೀರಿ.ಇದೇ ತೆರನಾಗಿ ಪ್ರತಿದಿನ ಅಥವ ವಾರಕ್ಕೊಮ್ಮೆ ತಾವು ಪ್ರಚಲಿತ ವಿಶಯ ಗಳ ಕುರಿತು ಒಂದು ಸಂಪಾದಕೀಯ ಲೇಖನ ಬರೆದರೆ ತುಂಬಾ ಪ್ರಸ್ತೂತ ವಾಗಬಹುದೆಂದು ನನ್ನ ಅಭಿಪ್ರಾಯ. ಪ್ರತಿದಿನ ಖ್ಯಾತ ಕವಿಗಳ ಅಥವಾ ಹಳೆಯ ಚಿತ್ರ ಸಂಗೀತದ ಒಂದು ವೀಡಿಯೋ ತುಣಕನ್ನು ಸೇರಿಸಿದರೆ ನಮಗೆಲ್ಲಾ ಮನಸ್ಸಿಗೆ ಮುದ ನೀಡತ್ತದೆಂದು ನನ್ನ ಭಾವನೆ......ವಂದನೆಗಳು...................................................ರಮೇಶ್ ಕಾಮತ್.