ನೆನಪುಗಳು ಹೀಗೆಯೆ...

ನೆನಪುಗಳು ಹೀಗೆಯೆ...

ಕವನ

ಯಾರೋ ಬಂದರು

ಯಾರೋ ಹೋದರು

ಈ ಬದುಕಿನಲ್ಲಿ

ಸಾರ್ವಜನಿಕ ನಲ್ಲಿಯಲ್ಲಿ

ನೀರು ಬಂದು ಹೋದಂತೆ !

ರಸ್ತೆಗೆ ಡಾಂಬರು ಹಾಕಿಸಿದಂತೆ !!

 

ಮಳೆಗಾಲದಲ್ಲಿ ಬೆಟ್ಟದಲ್ಲಿ

ಮಳೆಯು ಬಂದಂತೆ

ಕೆಳಗಿನ ತಗ್ಗು ಪ್ರದೇಶ

ಕೊಚ್ಚಿ ಹೋದಂತೆ !

 

ನಮ್ಮ ನಾಯಕರು ನಿಯತ್ತಿನಲ್ಲಿ

ಭಾಷಣವ ಮಾಡಿ, 

ಜನಸಾಮಾನ್ಯರಿಂದ ಚಪ್ಪಾಳೆ

ಗಿಟ್ಟಿಸಿಕೊಂಡಂತೆ !

 

ಮನೆಯಲ್ಲಿ ಹಳೆಯ

ಉಪಯೋಗ ಇಲ್ಲದ ವಸ್ತುಗಳ

ಮೂರು ಪೈಸೆ ಸಿಗದಿದ್ದರೂ

ಮಾರಿದಂತೆ !

 

ಹಳೇಯ ಗುಜುರಿ ಸ್ಕೂಟರ್

ರಸ್ತೆಯಲ್ಲಿ ಅಡ್ಡಾದಿಡ್ಡಿ

ಓಡಿಸುತ್ತಾ ಇರಲು ಸಮಯಕ್ಕೆ

ಕೈಕೊಟ್ಟು ನಿಂತಂತೆ !

 

ಉಪಹಾರ ಗೃಹಕ್ಕೆ ಹೋಗಿ

ಹೊಟ್ಟೆ ತುಂಬಾ ಉಂಡು

ಹಣ ಕೊಡಲಾಗದ

ಸ್ಥಿತಿಯಲ್ಲಿ ಹೊರಗೋಡಿ

ಬಂದಂತೆ !

 

ಬರೆಯುತ್ತಾ ಹೋದರೆ

ಕವನಕ್ಕಿಂತ ಕಾದಂಬರಿ

ಆಗುತ್ತಲೇ ಹೋಗಬಹುದು

ಅಷ್ಟು ಅನುಭವಗಳು,

ಅನಾನುಭವಗಳು;

ಅನುಭಾವಗಳು !

 

ಯಾರೋ ಬಂದರು

ಯಾರೋ ಹೋದರು

ಇನ್ಯಾರೋ ಉಳಿದರು

ಸಾರ್ವಜನಿಕ ನಲ್ಲಿಯಲ್ಲಿ

ನೀರು ಬಂದು ಹೋದಂತೆ !!

-ಹಾ ಮ ಸತೀಶ, ಬೆಂಗಳೂರು

ಚಿತ್ರ್