ನೆಲದ ಗಂಧ ಹರಡಿದ ಶ್ರೀಗಂಧ
ಶ್ರೀ ಕೆ ರಂಗೇಗೌಡರು ಅಕ್ಕಮ್ಮರ ಕಂದರು
ಮಧುಗಿರಿಯ ಮಣ್ಣಲಿ ಬುವಿಯ ಕಂಡರು
ಕವಿ ಸಾಹಿತಿ ಪ್ರಾಧ್ಯಾಪಕ ಚಲನಚಿತ್ರ ಕೈಂಕರ್ಯ
ಸಂಭಾಷಣೆಯ ದಿಗ್ಗಜ ನಟ ಕೋವಿದರು
ನೆಲದ ಗಂಧ ಹರಡಿದ ಶ್ರೀಗಂಧವಾದರು
ಗ್ರಾಮೀಣ ಸೊಗಡಿನ ಶೈಲಿಯ ಹರಿಕಾರರು
ಪದವಿ ಸಾಧನೆಗಳ ಶರಧಿಯ ಹರಿಸಿದರು
ಪ್ರಾಪ್ತವಾಯಿತು ಗೌರವದಿ ಹಲವು ಪುರಸ್ಕಾರ
ಎದೆಯ ಕದವ ತಟ್ಟಿದ ಬರಹಗಳು
ಕಾವ್ಯಲೋಕದ ಸರಸ್ವತಿಯ ಪುತ್ರರತ್ನ
'ಮನುಜ' ಕಾವ್ಯನಾಮದಿ ಮಿಂಚಿದರು
ಭಾವನೆಗಳ ಬೀಜ ಬಿತ್ತಿದ ಕವಿಗಳು
ಭಕ್ತಿಗೀತೆ,ಚೌಪದಿ,ಚಿತ್ರಗೀತೆ ಭಾವಗಳ ಸಂಗಮ
ಸಂಭಾಷಣೆ ನಿರೂಪಣೆ ಗೀತಾ ಸಾಹಿತ್ಯದ ಪಲ್ಲವಿ
ಪ್ರಗಾಥ ಸಾಮ್ರಾಟ ಕನ್ನಡದ ಮೇರುಶಿಖರ
ವಿಧಾನ ಪರಿಷತ್ತಿನ ಸದಸ್ಯ ಪ್ರತಿನಿಧಿಯ ಕಿರೀಟ
ಅರಸಿ ಬಂದಿತು ಪ್ರಶಸ್ತಿಗ ಸಾಗರ
ಪದ್ಮಶ್ರೀಗೆ ಭಾಜನರಾದ ಹೆಮ್ಮೆಯ ಗೌಡರು
ರಾಜ್ಯ ಪ್ರಶಸ್ತಿಯ ಗರಿ ಕೊರಳಿಗೆ ಹಾರ
ತಾಯಿ ಭುವನೇಶ್ವರಿ ಹರಸಿಹಳು ಅನವರತ
ಇದು ಬರಿ ಬೆಡಗಲ್ಲೋ ಅಣ್ಣ ಸಾರಿದರು
ಕಣ್ಣು ನಾಲಿಗೆ ಕಡಲು ಶ್ರೇಷ್ಠ ಕವನ ಸಂಕಲನ
ಕನ್ನಡ ನವೋದಯ ಕಾವ್ಯ ತಾರೆ
ಮಾಗಿಯ ಕನಸು ಸಾಧನೆ ಶಿಖರದಿ ನಟಿಸಿದಿರು
ಹಾರುವ ಹಂಸಗಳು ನಿರ್ದೇಶಿಸಿ ಹೆಸರು ಪಡೆದರು
ಜನ್ಮ ದಿನಕ್ಕೊಂದು ನೆನಪಿನ ಸಾಲುಗಳು
ಶಾರದೆಯ ಕೃಪಾಕಟಾಕ್ಷ ಸದಾ ಇರಲಿ
ಕನ್ನಡಮ್ಮನ ಸೇವೆಯ ಸೌಭಾಗ್ಯ ತೃಪ್ತಿ ಸಿಗುತ್ತಿರಲಿ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ