ನೆಲ್ಲಿಕಾಯಿ ತಂಬುಳಿ

ನೆಲ್ಲಿಕಾಯಿ ತಂಬುಳಿ

ಬೇಕಿರುವ ಸಾಮಗ್ರಿ

ನೆಲ್ಲಿಕಾಯಿ ೪-೫, ಸಿಹಿ ಮಜ್ಜಿಗೆ ೨ ಕಪ್, ಉಪ್ಪು ರುಚಿಗೆ, ಒಗ್ಗರಣೆಗೆ.

ತಯಾರಿಸುವ ವಿಧಾನ

ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಕೊಡಿ. ಇದನ್ನೇ ನೆಲ್ಲಿಕಾಯಿ ಬೇಯಿಸಿಯೂ ಮಾಡಬಹುದು. ಮೊಸರನ್ನಕ್ಕೆ ಕಲಸಿ ತಿನ್ನಿ. ಕುಡಿಯಲೂ ಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಆರೋಗ್ಯಕ್ಕೆ ತುಂಬ ಒಳ್ಳೆಯದು.

- ಸಹನಾ ಕಾಂತಬೈಲು, ಮಡಿಕೇರಿ