ನೇತ್ರದಾನ
ಕವನ
👁️👀👁️ನೇತ್ರದಾನ👁️👀👁️
ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ
ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ
ಆ ದೇವರು ಮೆಚ್ಚುವರಣ್ಣ
ನೀವು ಮಾಡಿದರೆ ನೇತ್ರದಾನ
ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ
ಮಣ್ಣು ಪಾಲು ಮಾಡಬೇಡಿ ನಿಮ್ಮ ಕಣ್ಣ
!!ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ!!
ನೀವು ಸಾಯುವವರೆಗೂ ನೋಡಿರಣ್ಣ
ಈ ನಶ್ವರವಾದ ಸಜೀವಾದ ಜಗತ್ತನ್ನ
ಅರಿತು ಬಾಳಿರಣ್ಣ ಈ ಸೃಷ್ಟಿಯ ಗುಟ್ಟನ್ನ
ದೃಷ್ಟಿ ನೀಡಿರಣ್ಣ ಅಂಧರು ನೆನೆಯುವರು ನಿಮ್ಮನ್ನ
!!ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ!!
ವ್ಯರ್ಥ ಮಾಡಬೇಡಿರಣ್ಣ
ಅಮೂಲ್ಯವಾದ ನಿಮ್ಮ ಕಣ್ಣ
ಸುಟ್ಟು ಬೂದಿ ಮಾಡಬೇಡಿರಣ್ಣ
ಕಣ್ಣು ಕೊಟ್ಟು ದೇವರಾಗಿರಣ್ಣ
!!ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ!!
ನಿಮ್ಮೋರ್ವರ ಎರಡು ಕಣ್ಣುಗಳು
ಅಂಧರಿರ್ವರ ಕುರುಡು ಕಳೆವ ದೀಪಗಳು
ನೀವು ದಾನ ಮಾಡುವ ನಿಮ್ಮ ನಯನಗಳು
ಅಂಧರ ಬಾಳಿನ ಆಶಾಕಿರಣಗಳು
!!ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ!!
✍️📝🖊️🖋️
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ್
