ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....
ಕವನ
ಹರಿ-ಹರಿದು ಬರಲಿನ್ನು ಕಷ್ಟಗಳು ನನಗ
ಸುರಿ-ಸುರಿದು ಬರಲಿನ್ನು ದು:ಖಗಳು ನನಗ......
ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ
ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ......
ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ
ಸುಡು-ಸುಡು ನೀ ಎಷ್ತಾರೆ, ನಾ ಕರಗಲ್ಲ ಇವಕ......
ಒಳಗಿರುವ ಶಕ್ತಿ ಅದು ಬೆಳಗಿರುವ ತನಕ
ಜಿಗಿ- ಜಿಗಿದು ಬರುವೆ ನಾ, ಅದು ಇರುವ ತನಕ......
ನಗು-ನಗು ನೀ ನಿಶೆ ಇಂದು, ರಾತ್ರಿ ಇದು ನಿನಗ
ಗರ್ಭದಲಿ ಇರೋ ಸೂರ್ಯ ಹೊರಬರುವ ತನಕ......
ಬೆಂಕಿಯ ಚಂಡೊOದು ಬೆಳೆಯುತಿದೆ ಒಳಗ
ಹೊರಬಂದು ಜಗವನ್ನು ಬೆಳಗುವ ತವಕ......