ನ್ಯಾನೋ ಕಥೆ - ಅಮಾವಾಸ್ಯೆಯ ಆ ದಿನ

ಅಮಾವಾಸ್ಯೆಯ ಕತ್ತಲನ್ನು ಭೇದಿಸಿಕೊಂಡು ಕಾರಿನ ಬೆಳಕು ಕಣ್ಣಿಗೆ ಕುಕ್ಕಿತು ."ನಿಮಗೆ ಬಿಳಿಗಿರಿ ದಾರಿ ಗೊತ್ತೇ?" ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಕೇಳಿದ. "ನಾನೂ ಅಲ್ಲಿಗೆ ಹೋಗಬೇಕು. ಕಾಡಿನ ಹಾದಿಯಲ್ಲಿ ಒಬ್ಬನೇ ನಡೆದು ಹೋಗುವುದು ಕಷ್ಟ. ನೀವು ಸಿಕ್ಕಿದ್ದು ಒಳ್ಳೇದಾಯಿತು" ಎಂದು ನಾನು ಕಾರೇರಿ ಕುಳಿತೆ. ಮಾರ್ಗದ ಉದ್ದಕ್ಕೂ ನಮ್ಮ ಮಾತು ನಡೆದೇ ಇತ್ತು. ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಮಾತ್ರ ಮೌನವಾಗಿದ್ದ. ನಾವು ನಮ್ಮ ಸ್ಥಳವನ್ನು ತಲುಪಿ ಕಾರಿನಿಂದ ಇಳಿದೆವು." ಅವರು ಬರುವುದಿಲ್ಲವೇ? " ಚಾಲಕನನ್ನು ಪ್ರಶ್ನಿಸಿದೆ. "ನಾವು ಇಬ್ಬರೇ ಬಂದಿದ್ದು ತಾನೆ. ಇನ್ಯಾರು ಬರಬೇಕು!" ಎಂದಾಗ ಅವಕ್ಕಾದೆ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ