ನ್ಯಾನೋ ಕಥೆ - ಪ್ರೀತಿ ಸೃಷ್ಟಿಸಿದ ಚಮತ್ಕಾರ

ನ್ಯಾನೋ ಕಥೆ - ಪ್ರೀತಿ ಸೃಷ್ಟಿಸಿದ ಚಮತ್ಕಾರ

ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದು ಹಲವು ದಿನಗಳಿಂದ ಮಲಗಿದ್ದ. ಅವನು ಯಾವುದೋ ಅಪರೂಪದ ರೋಗದಿಂದ ಬಳಲುತ್ತಿದ್ದಾನೆ ; ಆತ ಗುಣಮುಖವಾಗುವುದು ಕಷ್ಟವೆಂದು ವೈದ್ಯರು ಕೈಚಲ್ಲಿದ್ದರು. ಆ ಆಸ್ಪತ್ರೆಗೆ ಹೊಸದಾಗಿ ಬಂದ ದಾದಿ ಆತ ಬದುಕುಳಿಯಲಾರನೆಂಬ ಅರಿವಿದ್ದರೂ ಸಹೋದರ ವಾತ್ಯಲ್ಯತೋರಿ ಪ್ರೀತಿಯಿಂದ ಅವನ ಆರೈಕೆ ಮಾಡಿದರು. ಏನಾಶ್ಚರ್ಯ! ರೋಗಿ ನಿಧಾನವಾಗಿ ಗುಣಮುಖನಾದ. ವೈದ್ಯಲೋಕದ ಮದ್ದು ಗುಣಪಡಿಸಲಾಗದ ಖಾಯಿಲೆಯನ್ನು ದಾದಿಯ ಪ್ರೀತಿಯ ಆರೈಕೆ ಗುಣಪಡಿಸಿ ಎಲ್ಲಾರೂ ಚಕಿತರಾಗುವಂತೆ ಮಾಡಿತ್ತು.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ