"ನ ಸ್ತ್ರೀ ಮೀಸಲಾತಿ ಅರ್ಹತಿ" ಆರ್ಯ ಕೇಸರಿ ಎನ್ನುವ ಮನುವಾದಿ

"ನ ಸ್ತ್ರೀ ಮೀಸಲಾತಿ ಅರ್ಹತಿ" ಆರ್ಯ ಕೇಸರಿ ಎನ್ನುವ ಮನುವಾದಿ

ಬರಹ

ಇವತ್ತು ಬೆಳಗ್ಗೆ ಟಿವಿ ೯ ನಲ್ಲಿ ಪುರುಷರ ಹಕ್ಕು ರಕ್ಷಣೆ ವೇದಿಕೆಯವರು  ಮೇಲಿನ  ಘ್ಹೋಷಣೆಗಳೊಂದಿಗೆ ಹೋಮ ಹವನ ಮಾಡಿದರೆಂದು  ವರದಿ ನೀಡಿ ಚರ್ಚೆ ನಡೆಸುತ್ತಿದ್ದರು. ಅಬ್ಬಾ ಆ ಆರ್ಯ ಕೇಸರಿ ಎಂಬ ವ್ಯಕ್ತಿಯ ದಾರ್ಷ್ಟವೆಷ್ಟೆಂದರೆ


 ಹೆಣ್ಣು ಮನೆಯಲ್ಲಿಯೇ ಇರಲಿ


ಅವಳು ಉನ್ನತ ಅಧಿಕಾರಕ್ಕೆ ಬಂದರೆ ನಡತೆಗೆಟ್ಟವಳಾಗುತ್ತ್ತಾಳೆ.


ಹೆಣ್ಣು ಎಲ್ಲಕ್ಕೂ ಸರಿ ಸಮ ಎಂದು ಹೇಳುತ್ತಾ ಅವಳಿಗೇಕೆ ಮೀಸಲಾತಿ ಎಂದು ಬೊಬ್ಬೆ ಹೊಡೆಯುತ್ತಿದ್ದರು


ಅದಕ್ಕೆ ತಕ್ಕ ಹಾಗೆ ಮಾನವ ಹಕ್ಕುಗಳ ಪ್ರಮೀಳ ಹಾಗು ಮತ್ತೊಬ್ಬರು ಹೆಸರ  ನೆನಪಿಲ್ಲ  ಚೆನ್ನಾಗಿ ಜಾಡಿಸುತ್ತಿದ್ದರು.


ಅಷ್ಟೆಲ್ಲಾ ಮಾತಾದ ಮೇಲೂ ಆಸಾಮಿ ತಮ್ಮ ಧೋರಣೆ ಒಂದಿನಿತೂ ಬದಲಾಗಿಲ್ಲ ಎಂದರು


ನಿಮ್ಮ ಅಭಿಪ್ರಾಯವೇನು


ವಿವರಗಳಿಗೆ


http://kannada.webdunia.com/newsworld/news/regional/0911/19/1091119019_1.htm