ಪಡೆಯಲಾಗದ ಗೆಳತಿಗಾಗಿ
ಕವನ
ದಿನ ದೂಡುತಿದೆ ಮನ ಕಾಡುತಿದೆ
ನಿನ್ನ ನೆನಪಲಿ ದಿನವೂ ಬೇಯುತಿಹೆ
ಮುಂಜಾನೆ ಮುಂದುವರಿಯುತ ಮುಸ್ಸಂಜೆ ಸಾಯುತ
ಸಂಬ್ರಮದಿ ನಿನ ನೋಟಕೆ ಕಣ್ಣೆಲ್ಲ ಕಾಯುತ
ಸಮಯ ಕಳೆಯುತಿದೆ ಸಂಜೆ ಆಗುತಿದೆ
ಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿ
ನಿಂತ ಕಡೆಯೇ ನಿಂತು ನಿನಗಾಗಿ ಕಾಲು ಸೋತಿದೆ
ಆದರು ನಿನ್ನೊಡುವ ಆಸೆ ಹೃದಯದಲಿ ಹೆಚ್ಚಾಗಿದೆ
ಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿ
ನಿಂತ ಕಡೆಯೇ ನಿಂತು ನಿನಗಾಗಿ ಕಾಲು ಸೋತಿದೆ
ಆದರು ನಿನ್ನೊಡುವ ಆಸೆ ಹೃದಯದಲಿ ಹೆಚ್ಚಾಗಿದೆ
ಭಾವನೆಗಳ ಭಾವಂತರದಲ್ಲಿ ನೆಲೆಸಿರುವ
ಆ ನಿನ್ನ ಭಾವಗಳಿಗೆ ಬೇಲಿಯಾಗಲೇನೆ ನಾನು
ಅತಿಶಯದ ಅಮೃತದ ಮನಸಲಿ ಅತಿಯಾಗಿ
ಬೆರೆತು ಅಥಿತಿಯಾಗಿ ಬರಲೇನೆ ನಿನ್ನೊಳಗೆ ನಾನು
ಆ ನಿನ್ನ ಭಾವಗಳಿಗೆ ಬೇಲಿಯಾಗಲೇನೆ ನಾನು
ಅತಿಶಯದ ಅಮೃತದ ಮನಸಲಿ ಅತಿಯಾಗಿ
ಬೆರೆತು ಅಥಿತಿಯಾಗಿ ಬರಲೇನೆ ನಿನ್ನೊಳಗೆ ನಾನು
ಕಾಯುವ ಕನಸು ಕಾಡುತ ನಿಲ್ಲುವುದು
ಕರಾಳ ಪ್ರೀತಿಯ ಸುಳಿಯಲಿ ಬೇಯುತ
ಕಟ್ಟ ಕಡೆಯದಾಗಿ ಬೇಡುವೆ ಬಿಡುತ ನಿಟ್ಟುಸಿರು
ನೆಟ್ಟು ಬಿಡು ಎನ್ನೆದೆಯಲ್ಲಿ ಪ್ರೀತಿಯ ಹಸಿರು
ಕರಾಳ ಪ್ರೀತಿಯ ಸುಳಿಯಲಿ ಬೇಯುತ
ಕಟ್ಟ ಕಡೆಯದಾಗಿ ಬೇಡುವೆ ಬಿಡುತ ನಿಟ್ಟುಸಿರು
ನೆಟ್ಟು ಬಿಡು ಎನ್ನೆದೆಯಲ್ಲಿ ಪ್ರೀತಿಯ ಹಸಿರು
ನಲ್ಲ ನೀ ಬರೆವ ಎಲ್ಲ ಕವನಗಳಲಿ
ಅದರ ಸವಿಯ ಸಿಹಿ ಭಾವನೆಗಳಲಿ
ಬರಲೇನು ಮುಂಗಾರಾಗಿ ಕರೆಯದೆ ನೀ
ಒಡಲ ಭೂಮಿಯ ತಣಿಸಲು ಒಂದಾಗಿ
ಅದರ ಸವಿಯ ಸಿಹಿ ಭಾವನೆಗಳಲಿ
ಬರಲೇನು ಮುಂಗಾರಾಗಿ ಕರೆಯದೆ ನೀ
ಒಡಲ ಭೂಮಿಯ ತಣಿಸಲು ಒಂದಾಗಿ
Comments
ಉ: ಪಡೆಯಲಾಗದ ಗೆಳತಿಗಾಗಿ