ಪದ ಸಂಪದ - 1

ಪದ ಸಂಪದ - 1

ಬರಹ
1 2   3     x     x 4   5  
    x       x       x     x       x       x
    x       x 6           x       x
7         x     x      x     x 8   9
      x     x     x     x     x     x     x     x  
      x     x     x     x     x     x     x     x  
10 11       x     x     x     x 12 13  
    x       x 14     15     x       x
    x       x       x     x       x       x
16           x     x 17      

ಎಡದಿಂದ ಬಲಕ್ಕೆ:-                
                     
1.  ಔಷಧೀಯ ಗುಣ ಹೊಂದಿರುವ-ಸುಮಂಗಳೆಯರು ಹಚ್ಚುವ ಮಂಗಳದ್ರವ್ಯ (4)  
4.  ರಾಜಕೀಯ ವ್ಯಕ್ತಿಗಳು ಸಾಮಾನ್ಯವಾಗಿ ಇಂಥಹ ಅವಾಂತರದಲ್ಲಿ ಸಿಲುಕಿಕೊಳ್ಳುವರು.  
    ಉದಾ:ಹವಾಲ,ಭೋಫಾರ್ಸ್ (4)            
6.  ಈಶ್ವರನಂತೆ ಶಾಶ್ವತವಲ್ಲದ್ದು, ಕ್ಷಣಿಕವಾದದ್ದು (4)        
7.  ಪ್ರತಿಪಾದನೆ (3)                
8.  ಕೃಷ್ಣಾವತಾರವಾದ ಯುಗ (3)             
10. ತನ್ನ ಅವಿವೇಕಕ್ಕಾಗಿ ಮೈ ಪರಚಿಕೊಳ್ಳುತ್ತಿರುವನೆ ಈ ದಡ್ಡ (3)    
12. ಹೆಂಗಸರ ಹಣೆ ಇದರಿಂದ ಅಂದ (3)          
14. ತಟ್ಟೆಯಲ್ಲಿಟ್ಟು ಬೆಳಗುವ ದೀಪಾರತಿ (4)          
16. ಋಷಿಗಳು ಮಾಡುತ್ತಿದ್ದ ಈ ಮಂತ್ರೋಚ್ಛಾರ ಸಹಿತವಾದ ಪೂಜಾಕಾರ್ಯ ಇಲ್ಲಿ ಬಲದಿಂದ 
    ಎಡಕ್ಕೆ ಬಂದಿದೆ (4)                
17. ಬಾಳೆಹಣ್ಣು-ಬೆಲ್ಲ-ಕಾಯಿ ಸೇರಿಸಿ ಮಾಡುವ ಕೆಮಿಸ್ಟ್ರಿಯೆ? (4)    
                     
ಮೇಲಿನಿಂದ ಕೆಳಕ್ಕೆ:-                
                     
2.  ಗಿಡ ಬೆಳೆಸುವ ಈ ಮಣ್ಣಿನ ಮಡಕೆ ಖಾಲಿಯಾಗಿದೆಯೆ? (4)      
3.  ಮನ ತುಂಬಿ ಮಾಡುವ ವಂದನೆ (3)          
4.  ಈಗ ಅಪರೂಪವಾಗುತ್ತಿರುವ ಮಣ್ಣಿನ ದೀಪ(3)        
5.  ರಾತ್ರಿಗೆ ಗಂಡ- ಚಂದ್ರನಲ್ಲದೆ ಇನ್ನಾರು? (4)        
7.  ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ (4)    
9.  ಲಕ್ಷ್ಮಿ- ಪಾರ್ವತಿ ಇಲ್ಲಿ ಜೊತೆಯಾಗಿ ಬಂದಿದ್ದಾರೆ (4)      
11. ಪಣ ತೊಟ್ಟ ಆತ ನೈಪುಣ್ಯಗಾರನಾಗಲು ಸಾಧನೆ ಮುಖ್ಯ (4)    
13. ಕೆಟ್ಟ ಗಳಿಗೆಯನ್ನು ಹೀಗೆನ್ನಲು ಅಡ್ಡಿಯಿಲ್ಲ (4)        
14. ಕಮಲವನ್ನು ಹೀಗೂ ಕರೆಯುವರು (3)          
15. ಜನರಿಂದ ತುಂಬಿದ್ದರೂ ಗರಬಡಿದಂತಿರುವ ಪಟ್ಟಣ.(3)      

(ಈ ದಿನ "ಪದಬಂಧ" ವನ್ನ ಹಾಕಿದ್ದೇನೆ. ಇಲ್ಲಿ ಈ ಪ್ರಯೋಗ ಸರಿನೋ ಇಲ್ಲವೋ ನೋಡಬೇಕು. ನಿಮಗೆ ಪದಬಂಧ ಬಿಡಿಸಲು ತೊಂದರೆ ಏನಾದ್ರು ಆದರೆ ದಯವಿಟ್ಟು ತಿಳಿಸಿ. ಅಥವ ಏನಾದ್ರು ಬದಲಾವಣೆ ಮಾಡಿದ್ರೆ ಚೆನ್ನ ಅನ್ನಿಸಿದ್ರು ಅಭಿಪ್ರಾಯ ತಿಳಿಸಿ."ಪದಸಂಪದ -೧" ರ ಉತ್ತರವನ್ನ ಮುಂದಿನವಾರ ಹಾಕುತ್ತೇನೆ.)