ಪನೀರ್ ಸೋಯಾ ಬುರ್ಜಿ

ಪನೀರ್ ಸೋಯಾ ಬುರ್ಜಿ

ಬೇಕಿರುವ ಸಾಮಗ್ರಿ

ಪನೀರ್ ೧ ಕಪ್, ಸೋಯಾ ಚಂಕ್ಸ್ ೧ ಕಪ್, ಈರುಳ್ಳಿ ೧/೨ ಕಪ್, ಮೆಣಸಿನ ಹುಡಿ ೧ ಚಮಚ, ಎಣ್ಣೆ ೨ ಚಮಚ, ನಿಂಬೆಹಣ್ಣಿನ ರಸ ೧ ಚಮಚ, ಅರಶಿನ ಹುಡಿ ಕಾಲು ಚಮಚ, ಶುಂಠಿ ಪೇಸ್ಟ್ ೧ ಚಮಚ, ಜೀರಿಗೆ, ಸಾಸಿವೆ ತಲಾ ಕಾಲು ಚಮಚ, ಗರಂ ಮಸಾಲಾ ೧ ಚಮಚ, ಹಸಿಮೆಣಸಿನ ಕಾಯಿ ೨, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಮೊದಲು ಸೋಯಾ ಚಂಕ್ಸ್ ಗಳನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ನಂತರ ನೀರನ್ನು ಬಸಿದು, ಹಿಂಡಿ ಬದಿಗಿಡಿ. ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂದು ಚೂರು ಜೀರಿಗೆ ಹಾಕಿ ಸಿಡಿಸಿ. ಇದಾದ ಬಳಿಕ ಈರುಳ್ಳಿ. ಅರಶಿನ, ಶುಂಠಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. 

ನಂತರ ಮೆಣಸಿನ ಕಾಯಿ ಸ್ವಲ್ಪ ಪನೀರ್ ಹಾಕಿದ ಮೇಲೆ ಸೋಯಾ ಚಂಕ್ಸ್ ಹಾಕಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಹುಡಿ ಹಾಗೂ ಗರಂ ಮಸಾಲಾ ಹಾಕಿಕೊಂಡು ಮಿಕ್ಸ್ ಮಾಡಿ ಸ್ವಲ್ಪ ಬೇಯಿಸಿ. ತಯಾರಿಸಿದ ಪನೀರ್ ಸೋಯಾ ಬುರ್ಜಿ ಮೇಲೆ ಸ್ವಲ್ಪ ನಿಂಬೆ ರಸ ಹಿಂಡಿ. ಅದಾದ ಮೇಲೆ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.