ಪಪ್ಪಾಯಿ ಮಿಲ್ಕ್ ಶೇಕ್
ಬೇಕಿರುವ ಸಾಮಗ್ರಿ
ಪಪ್ಪಾಯಿ ಹಣ್ಣಿನ ತಿರುಳು ೧ ಕಪ್, ಹಾಲು ೧ ಕಪ್, ನೀರು ೧ ಕಪ್, ಸಕ್ಕರೆ ೩ ಚಮಚ.
ತಯಾರಿಸುವ ವಿಧಾನ
ಪಪ್ಪಾಯಿ ಹಣ್ಣಿನ ತಿರುಳು, ನೀರು, ಹಾಲು, ಸಕ್ಕರೆ ಮಿಕ್ಸಿಯಲ್ಲಿ ಹಾಕಿ ತಿರುವಿ. ಈಗ ಸವಿಯಾದ ಪಪ್ಪಾಯಿ ಹಣ್ಣಿನ ಮಿಲ್ಕ್ ಶೇಕ್ ಸಿದ್ಧ. ಬೇಕಿದ್ದರೆ ಮಂಜುಗೆಡ್ಡೆ ಸೇರಿಸಬಹುದು.
- ಸಹನಾ ಕಾಂತಬೈಲು, ಮಡಿಕೇರಿ