ಪರದೇಸಿ ನಾನವ್ವ......
ಬರಹ
ಕಲ್ಲು ಬಂಡೆ ಕರಗ್ಯಾವ
ಹಸಿ ಪೈರು ಸೊರಗ್ಯಾವ
ಬಿರುಗಾಳಿ ಬೀಸೈತೆ
ಇನ್ನೆಲೈತಿ ಬಾಳು.....ಇನ್ನೆಲೈತಿ
ಬರಸಿಡಿಲು ಬಡಿದಂಗೆ
ಹಸುಗೂಸು ಸೊರಗಾಂಗೆ
ಹಸಿದಸುವು ಕೊರಗಾಂಗೆ
ತುಂಬೈತಿ ಬಾಳ ತುಂಬ ದಂಗೆ...
ಒಲವಿಲ್ಲ ಚೆಲುವಿಲ್ಲ
ಮತಿಯಂತೂ ಮೊದಲೇ ಇಲ್ಲ
ಕೂಡಕ್ಕೆ ಯಾರವರೇ ನಿನ್ನ ಸಂಗ
ಬಾಳಕ್ಕೆ ಯಾರವರೇ... ನಿನ್ನ ಸಂಗ
ಜೀವಕ್ಕೆ ಬೆಲೆ ಇಲ್ಲ
ಸಾವಂತೂ ಬರಲೇ ಇಲ್ಲ
ಸುಖ ದುಃಖ ಹೇಳೋಕೆ ದಿಕ್ಕಂತೂ ಯಾರು ಇಲ್ಲ
ದುಗುಡ ತುಂಬೈತಿ ಬಾಳ ತುಂಬ....
ದಿಕ್ಕು ದೆಸೆ ಇಲ್ಲದವ
ಪರದೇಸಿ ನಾನವ್ವ
ಈ ಪಾಪಿ ಜಗದಲ್ಲಿ ನನ್ನವರು ಯಾರವ್ವ..
ಕಣ್ಣಿರಾಗೆ ತುಂಬೈತಿ ಈ ಪಾಪಿ ಬಾಳವ್ವ....
ದಾರಿ ತೋರೊರು ಯಾರವ್ವ.....
ಧನು....