ಪರರ ಕಾಡದಿರು

ಪರರ ಕಾಡದಿರು

ಕವನ

ರೆಕ್ಕೆ ಬಡಿದು ಗಗನಕೇರಿ

ಹಕ್ಕಿ ನಲಿಯುತಿದ್ದಿತು

ಸಿಕ್ಕಿದಂಥ ಕಾಳುಕಡಿಯ

ಹೆಕ್ಕಿ ತಿನ್ನುತಿದ್ದಿತು

 

ನೋಡಿ ಮನುಜ ಸಹಿಸದಾಗಿ

ಕೂಡಿ ಹಾಕಬಯಸಿದ

ಬೇಡಿ ತೊಡಿಸಿ ಹಕ್ಕಿಯನ್ನು

ಗೂಡಲಿರಸತೊಡಗಿದ

 

ಸ್ವಚ್ಛ ಮನದ ಹಕ್ಕಿಯೀಗ

ಇಚ್ಛೆಯಂತೆ ಹಾರದು

ಹುಚ್ಚು ಮನದ ನರನ ಆಟ

ಮೆಚ್ಚಲಾರ ದೇವನು

 

ತನ್ನ ಸುಖಕೆ ಪರರ ಕಾಡಿ

ತಿನ್ನಲೇನು ಸುಖವಿದೆ?

ತನ್ನ ಹಾಗೆ ಪ್ರಾಣಿ ಪಕ್ಷಿ

ಮುನ್ನ ಅರಿಯಬೇಕಿದೆ

 

ಜೀವಿಯಾಗಿ ಬಂದಮೇಲೆ

ಭಾವ ನೂರು ಮನದಲಿ

ನೋವು ನಲಿವು ಸಹಜ ತಾನೆ

ಬೇವು ಬೆಲ್ಲದಂದದಿ

 

ಪರರ ಸುಖವ ಕಸಿದು ನಿನಗೆ

ದೊರೆವ ಸುಖವು ಏನಿದೆ

ಬೇಡ ಇಂಥ ದುಷ್ಟ ನಡೆಯು

ಕೂಡಿ ಬಾಳು ಲೋಕದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್