ಪರವಶ.......
ಕವನ
ನಲ್ಲೆಯ ಮುಖದಿ
ಮುದ್ದು ಚಂದಿರ ಬಂದ.
ಹಾಲು ಬೆಳಕನು ತಂದ.
ಬೆಳದಿಂಗಳ ಸೂರಿನಡಿ
ಬೆಳ್ಳಿ ಮಲ್ಲಿಗೆಯ ಮುಡಿ.
ಕಾಲ್ಗೆಜ್ಜೆಯ ನಾದ ನುಡಿ
ಕೇಳಿ ಕದಡಿತು,
ನನ್ನೀ ಹೃದಯದ ಮುನ್ನುಡಿ.
ಕುಡಿನೋಟಕು ಚೆಲುವು
ತಂದವಳ ಒಲವು,
ಆಪ್ತ ಆಲಯದಲ್ಲೆಲ್ಲೋ
ಸುಪ್ತಭಾವದ ನಲಿವು.
ಮಂದಹಾಸವು ಹೂವಿನಂತೆ ಅರಳಿ
ಭಾವಲೋಕಕೆ ಬರಲು ಮತ್ತೆ ಮರಳಿ
ಗಾಢವಾಗಿ ಮಿಂದು ಬರಲು,
ಪ್ರೀತಿಪರವಶ ಸುಳಿಯಲಿ.
ಜೀವವೆಲ್ಲ ನಾದ ಮುರಳಿ.