ಪವರ್​ಪುಲ್ ರಣವಿಕ್ರಮ...!

ಪವರ್​ಪುಲ್ ರಣವಿಕ್ರಮ...!

ಕನ್ನಡಕ್ಕೆ ಕಾಲಿಡ್ತಾಯಿದ್ದಾನೆ ರಣವಿಕ್ರಮ.ಈ ವಿಕ್ರಮ ಯಾರು ಅನ್ನೋದು ಈಗ ಹಳೆ ಸುದ್ದಿ. ಹೊಸ ಸುದ್ದಿ ಏನಪ್ಪ ಅಂದ್ರೆ,ಅದೇ ಈ ವಿಕ್ರಮನ ಭಿನ್ನ..ವಿಭಿನ್ನ ಭಂಗಿಯ ಫೋಟೋ ಶೂಟ್ ಕೂಡ ಈಗ ಆಗಿದೆ. ಆದರೆ, ಈ ಫೋಟೋಗಳು ನಿಮ್ಗೆ ನೋಡಲು ಸಿಗೋದು ಪುನೀತ್ ಬರ್ತಡೇ ದಿನ. ಯಾಕೆಂದ್ರೆ, ಇಲ್ಲಿ ರಣವಿಕ್ರಮಣನಾಗಿ ಬರ್ತಿರೋದು ಇದೇ ಪರವ್ ಸ್ಟಾರ್ ಪುನಿತ್. ಪುನೀತ್ ಅಭಿನಯದ ಈ ಮುಂದಿನ ಚಿತ್ರದ ಒಂದಷ್ಟು ಎಕ್ಸ್ಲ್ಯೂಸಿವ್ ಮಾಹಿತಿ ಇಲ್ಲಿದೆ ನಿಮಗಾಗಿ...

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಪವರ್​ಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಆಕ್ಷನ್​ ಪ್ಯಾಕ್ಡ್ ಮೂವಿಗೆ ಪುನೀತ್ ಪಕ್ಕಾ ಸೂಟೇಬಲ್. ರಣವಿಕ್ರಮ ಕೂಡ ಪವರ್​ ಪುನೀತ್​ಗೆ ಹೇಳಿ ಮಾಡಿಸಿದ ಟೈಟಲ್​ ಅನಿಸುತ್ತದೆ.ಈ ವಿಕ್ರಮನಿಗೆ ಇಲ್ಲಿ ಆಕ್ಷನ್ ಕಟ್ ಹೇಳ್ತಿರೋದು ಅದೇ ಯಶಸ್ವಿ ಯುವ ನಿರ್ದೇಶಕ ಪವನ್ ಒಡೆಯರ್...

ಪವನ್​ಗೆ ರಣವಿಕ್ರಮ ಮೂರನೇ ಚಿತ್ರ. ಗೋವಿಂದಾಯನಮ; ಕಾಮಿಡಿ ಕಿಕ್​ನ ಮೊದಲ ಸಿನಿಮಾ. ಎರಡನೇಯದ್ದು ಗೂಗ್ಲಿ. ಇದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಆದರೆ, ರಣವಿಕ್ರಮದ ಮೂಲಕ ಮೊದಲ ಭಾರಿಗೆ ಪವನ್ ಒಡೆಯರ್ ಆಕ್ಷನ್​ ಕಂಟೆಂಟ್ ಇರೋ ಸಿನಿಮಾ ಮಾಡ್ತಿದ್ದಾರೆ. ಮೊದಲ ಆಕ್ಷನ್ ಸಿನಿಮಾ ಆಗಿರೋದ್ರಿಂದ ಸೂಕ್ತ ತಯಾರಿನೂ ಇದೆ. ಸ್ಕ್ರೀನ್​ ಪ್ಲೇಯಲ್ಲೂ ಕೊಂಚ ಎಕ್ಸ್​ಪೇರಿಮೆಂಟೂ ಮಾಡಿದ್ದಾರೆ.

ಆದರೆ, ಈ ಚಿತ್ರದಲ್ಲಿ ಪುನೀತ್ ಒಬ್ಬ ಸ್ಟುಡೆಂಟ್. ಸ್ಟುಡೆಂಟ್ ಆಗಿ ಪುನಿತ್ ಹಲವು ಸಿನಿಮಾ ಮಾಡಿದ್ದಾರೆ. ರಣವಿಕ್ರಮದಲ್ಲಿಅಪ್ಪು ಹೇಗೆ ಕಾಣ್ತಾರೆಂಬ ಕುತೂಹಲವೂ ಇದೆ. ಆದರೆ, ಅದನ್ನ  ತಿಳಿಯೋಕೆ ಇದೇ ಮಾರ್ಚ್ 17 ರವರೆಗೂ ಕಾಯಬೇಕು. ಕಾರಣ, ಇದೇ ದಿನ ಪುನೀತ್ ಹುಟ್ಟುಹಬ್ಬ.ಹುಟ್ಟುಹಬ್ಬಕ್ಕೆ ಅಪ್ಪು ರಣವಿಕ್ರಮನಾಗಿ ಬರ್ತಾಯಿದ್ದಾರೆ.

ಬೆಂಗಳೂರು,ಮೈಸೂರು ಹಾಗೂ ಬೆಳಗಾವಿಯಲ್ಲಿ ರಣವಿಕ್ರಮನ ಚಿತ್ರೀಕರಣ ನಡೆಯಲಿದೆ. ಹಾಗಂತ ಮಾರ್ಚ್ 17 ಕ್ಕೆ ಚಿತ್ರೀಕರಣ ಆರಂಭಗೊಳ್ಳೋದಿಲ್ಲ. ಬದಲಿಗೆ ಏಪ್ರೀಲ್ ಕೊನೆವಾರದಲ್ಲಿ ರಣವಿಕ್ರಮನ ಚಿತ್ರೀಕರಣ ಶುರುವಾಗಲಿದೆ. ಆದರೆ, ಇಷ್ಟೆಲ್ಲ ಫೈನಲ್​ ಆದ್ರೂ, ನಾಯಕಿಯ ಹುಡುಕಾಟ ಇನ್ನೂ ನಡೀತಾನೇ ಇದೆ. ಈ ಹಿನ್ನೆಲೆಯಲ್ಲಿ ರಣವಿಕ್ರಮನಿಗೆ ಯಾರು ಜೊತೆಯಾಗ್ತಾರೆಂಬ ಕುತೂಹಲವೂ ಅಷ್ಟೇ ಗಾಂಧಿನಗರದಲ್ಲಿ ಮನೆ ಮಾಡಿದೆ.....

-ರೇವನ್ ಪಿ.ಜೇವೂರ್