ಪವಿತ್ರ ರಕ್ಷಾಬಂಧನ
ಕವನ
ಶ್ರಾವಣ ಮಾಸದ ಹುಣ್ಣಿಮೆ ದಿನದಂದು
ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು|
ರಕ್ಷಣೆ ಸಹಕಾರ ನಂಬಿಕೆಯೊಂದು
ಶುಭ ಹಾರೈಕೆಗಳ ರಕ್ಷಾಬಂಧನವಂದು||
ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ
ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು|
ವಿಶೇಷತೆಯ ದಾರವನು ಒಲಿದು ನೀಡಿದನು
ಇನಿಯನ ಕೈಯ ಮಣಿಕಟ್ಟಿಗೆ ಬಂಧಿಸೆಂದನು||
ಪಂಚ ಪಾಂಡವರ ಮನದನ್ನೆ ದ್ರೌಪದಿ
ಮಹಾ ಮಹಿಮ ಗೋಕುಲ ವಾಸನ ಸ್ಮರಿಸುತ|
ಸೋದರನಾಗಿ ಸ್ವೀಕರಿಸಿ ಬಿಗಿದಳು ದಾರ
ಹರಸಿದನು ದಯಾಸಿಂಧು ಪಾಂಚಾಲಿಯ||
ಸೋದರತ್ವದ ಶೃಂಖಲೆ ಅಭಯ ಆಶ್ವಾಸನೆ
ಸೋದರಿಯ ಭರವಸೆ ಪ್ರೀತಿಗಳ ಬೆಸುಗೆಯು|
ಸಂಬಂಧಗಳ ಓಘ ಮೇಘಮಾಲೆಯ ಬಂಧ
ಅಡಗಿದೆ ರಕ್ಷಾಬಂಧನದ ಪವಿತ್ರ ಸಂಬಂಧವು||
ಉಡುಗೊರೆ ಹಾರೈಕೆ ಆಶೀರ್ವಾದ
ರಾಖಿಯಲಿ ಬೆಸೆದಿದೆ ರಕ್ಷಾ ಕವಚವು|
ಧಾರ್ಮಿಕವಾಗಿ ಹೆಣೆದ ಸುರುಳಿಗಳು
ಬೇರ್ಪಡಿಸಲಾಗದ ಅನುಬಂಧಗಳ ಕಡಲು||
-ರತ್ನಾಕೆ.ಭಟ್, ತಲಂಜೇರಿ
ಚಿತ್ರ್