ಪಾಪಿಗಳು...

ಪಾಪಿಗಳು...

ವಿಧಾನಸೌಧ ಆಯ್ತು, ಸುವರ್ಣಸೌಧದ ಪಾವಿತ್ರ್ಯತೆನೂ ಹಾಳು ಮಾಡಿದರಲ್ಲ ಈ ಪಾಪಿಗಳು...

ಪ್ರಜಾಪ್ರಭುತ್ವದ ದೇಗುಲವೆಂದು ಕರೆದುಕೊಳ್ಳುವ ವಿಧಾನಸೌಧದ ಒಳಗಡೆ ನೀಲಿಚಿತ್ರ ನೋಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೆ ಮತ್ತೆ ಅಂತದ್ದೇ ಅಲ್ಲದಿದ್ದರು ಈ ರಾಜ್ಯದ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವಂತಹ ಕೃತ್ಯವನ್ನು ದೇವರ ಅರ್ಥ ಬರುವ 'ಪ್ರಭು' ಅಂತ ಹೆಸರಿಟ್ಟುಕೊಂಡ ಲಫಂಗನೊಬ್ಬ ಮಾಡುವ ಮೂಲಕ ತಾಯಿ ಸಮಾನವಾದ ತನ್ನ ಪಕ್ಷಕ್ಕೆ, ಅ ಪಕ್ಷವನ್ನು ಕಟ್ಟಿ ಬೆಳೆಸಿದ ವರ್ಚಸ್ವಿ ನಾಯಕರಿಗೆ ಅವಮಾನ ಮಾಡಿದ್ದಾನೆ.ಇದಕ್ಕಿಂತಲೂ ಹೆಚ್ಚಾಗಿ ತನಗೆ ಮತ ಹಾಕಿದ ಮತದಾರರಿಗೆ ಅಪಚಾರವೆಸಗಿದ್ದಾನೆ.ನಾನು ಫೋಟೋದ ಕೆಳಗಿನ ಸ್ಲೋಗನ್ ನನ್ನು ಝೂಮ್ ಮಾಡಿ ನೋಡಿದೆ ಅಂತ ಸಮರ್ಥನೆ ಬೇರೆ ಕೊಡ್ತಾರಲ್ಲ ಇವರ ಭಂಡತನಕ್ಕೆ ಏನು ಹೇಳಬೇಕು. .?ಕಣ್ಣಿರುವ ಯಾವುದೇ ವ್ಯಕ್ತಿ ಕೂಡ ಪ್ರಭು ನೋಡಿದ ದೃಶ್ಯವನ್ನು ಸಮರ್ಥಿಸಲಾರ.ಈತನ ವಿರುದ್ಧ ಕ್ರಮ ಜರುಗಿಸುವ ಬದಲು ಬೆಂಬಲಕ್ಕೆ ನಿಲ್ಲುವಂತಹ ಧೈರ್ಯ ಮಾಡಿರುವ' ಶಿಸ್ತಿನ ಪಕ್ಷ'ದ ನಿಲುವು ಖಂಡನೀಯ.ಸದನದಲ್ಲಾದರು ಗಂಭೀರವಾಗಿ ಇರಲು,ತಮ್ಮನ್ನು ತಾವು ಕೆಲ ಹೊತ್ತಿನವರೆಗಾದರು ನಿಗ್ರಹಿಸಿಕೊಳ್ಳಲು ಸಾಧ್ಯವಾಗದ ಇಂತಹ ಶಾಸಕರು ನಮ್ಮನ್ನು ಆಳುತ್ತಿರುವುದು ನಮ್ಮ ದೌರ್ಭಾಗ್ಯ.ಸದನದಲ್ಲಿ ಖಾಸಗಿ ಚಾನೆಲ್ ಗಳನ್ನು ನಿಷೇಧಿಸುವ ಬದಲು ಮೊಬೈಲ್ ನಿಷೇಧಿಸುವ ಅಗತ್ಯವಿದೆ.ಆಗ ಕರ್ನಾಟಕದ ಮಾನ ಮತ್ತೆ ಮತ್ತೆ ಹರಾಜಾಗುವುದು ತಪ್ಪುತ್ತದೆ.ಇಂತಹ ಕಪ್ಪುಕುರಿಗಳಿಂದ ಕನ್ನಡಿಗರಾದ ನಾವು ಮುಜುಗರ ಅನುಭವಿಸುವ ಸನ್ನಿವೇಶವು ನಿರ್ಮಾಣವಾಗಲ್ಲ.

-@ಯೆಸ್ಕೆ

Comments

Submitted by ಗಣೇಶ Thu, 12/11/2014 - 23:39

ಈಗಿನ ಸ್ಮಾರ್ಟ್ ಫೋನ್‌ನಿಂದ ಕ್ಷಣದಲ್ಲಿ ಬೇಕಾದ ಮಾಹಿತಿ ತೆಗೆದು, ಜನತೆಗೆ ಒಳಿತಾಗುವಂತಹದನ್ನು ವಾದಿಸಲು/ಮಾಹಿತಿ ನೀಡಲು ಸಹಾಯವಾಗುತ್ತಿತ್ತು.
>ಮೊಬೈಲ್ ನಿಷೇಧಿಸುವ ಅಗತ್ಯವಿದೆ.
-ಈಗ ಕಡೇ ಪಕ್ಷ ಎಚ್ಚರವಾದರೂ ಇದ್ದಾರೆ, :) ನಂತರ ನಿದ್ರೆ ಮಾಡುತ್ತಿರುತ್ತಾರೆ. ಇಂತಹ ರಾಜಕಾರಣಿಗಳನ್ನು ಮತ್ತೆ ಮತ್ತೆ ಗೆಲ್ಲಿಸುತ್ತೇವಲ್ಲ... ನಾವು ಬದಲಾಗದೇ ಏನೂ ಸಾಧ್ಯವಿಲ್ಲ. :(