ಪಾಲಕ್ ಸೊಪ್ಪಿನ ಸೂಪ್
ಪಾಲಕ್ ಸೊಪ್ಪು – 7 ಅಥವಾ 8 ಎಲೆಗಳು, ಲವಂಗ – 3, ಚಕ್ಕೆ – ½ ಇಂಚಿನ 2 ತುಂಡುಗಳು, ಕಾರ್ನ್ ಫ್ಲೋರ್ – 2 ಚಮಚ, ಉಪ್ಪು – ರುಚಿಗೆ ತಕ್ಕಂತೆ, ಖಾರ ಬೇಕಿದ್ದರೆ – ಹಸಿ ಮೆಣಸಿನ ಕಾಯಿ (ಸಣ್ಣದು) – 1, ತುಪ್ಪ – ¼ ಚಮಚ, ಸಕ್ಕರೆ – ½ ಚಮಚ. ಈರುಳ್ಳಿ – ¼
ಪಾಲಕ್ ಸೊಪ್ಪನ್ನು ತೊಳೆದು ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ ಹಾಕಿ ಹುರಿಯಿರಿ. ಕೆಳಗಿಳಿಸುವ ಮೊದಲು ಹಸಿ ಮೆಣಸಿನ ಕಾಯಿ ಹಾಕಿ ಬಾಡಿಸಿ. ಹುರಿದ ಮಸಾಲೆ, ಈರುಳ್ಳಿ ಮತ್ತು ಬೇಯಿಸಿದ ಪಾಲಕ್ ಸೊಪ್ಪನ್ನು (ತಣ್ಣಗಾಗಿರಬೇಕು) ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ಅಗಲ ಬಾಯಿಯ ಪಾತ್ರೆಯಲ್ಲಿ ಮುಕ್ಕಾಲು ಲೋಟ ನೀರು ತೆಗೆದುಕೊಂಡು, ಕಾರ್ನ್ ಫ್ಲೋರ್ ಹಾಕಿ ಬೆರೆಸಿ ಅದಕ್ಕೆ ಈ ಮಿಶ್ರಣ, ಉಪ್ಪು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ಟೌ ಮೇಲಿಟ್ಟು ಕುದಿಸಿ. ಕುದಿ ಬರುವವರೆಗೆ ತಳ ಹಿಡಿಯದಂತೆ ಮೊಗೆಚುತ್ತಿರಬೇಕು. ಕುದಿ ಬಂದ ನಂತರ ಕೆಳಗಿಳಿಸಿ, ಬಿಸಿ ಬಿಸಿ ಸೂಪ್ ಕುಡಿಯಲು ತಯಾರಾಗಿ.....!