ಪಿಲಾಸ್ಟಿಕ್ ಕಸ

ಪಿಲಾಸ್ಟಿಕ್ ಕಸ

ಬರಹ


ಎಲ್ಲಾ ಆಳಾಗೋಯ್ತು ಸಿವಣ್ಣ, ಏನಾರಾ ಮಾಡಿ ಪರ್ಕುರ್ತಿ ಉಳ್ಸಮಾ ಅಂದ್ರೆ ಯಾರ್ಗೂ ಟೇಮ್ ಇಲ್ಲ. ಏನ್ ಮಾಡಾದಾ , ಅಂತಾ ಸಿಂತೆ ಮಾಡ್ತಾ ಇವ್ನಿ.ನಂಗೂ ಸಂಪ್ದಾ ನೋಡಾಕೂ ಟೇಮೇ ಇಲ್ವ್ರಾ. ತಮ್ಮನ್ ಮಗ್ಳ ಮದ್ವೆ ಒಂದಪಾ ಮುಗಿತೂ ಅಂದ್ರೆ ವಸೀ ಸಂಪ್ದ ನೋಡಾಕಾದ್ರೂ ಆಯ್ತದೆ. ಆಗ್ನಾದ್ರೂ ಏನಾರಾ ಮಾಡ್ಬೈದು.ನೀವ್ ಅದೆಂತದೋ ಟಿಪ್ ಅಂದ್ರಲ್ಲಾ, ಅಂಗಂದ್ರೇನಣ್ಣಾ? ಒಂದ್ ಮಾತ್ನಲ್ಲಿ ಒಂದ್ ಪದ ಏಳಿ ಜಪ್ತಿ ಮಾಡಾದಾ? ಈ ಪಿರಸ್ನೆಗೆ ನೀವ್ ನಮ್ ಅಳ್ಳೀ ಬಾಸೇಲಿ ನಮ್ಗೆ ಅರ್ಥಾ ಆಗೋ ಅಂಗೆ ಉತ್ರಾ ಏಳ್ ಬೇಕ್ರಾ.ನಾನ್ ಸಿಕ್ಕೋನಾಗಿದ್ದಾಗ  ನಮ್ ಅಳ್ಲೀಲಿ  ಬರೇ ಅಂಚೀಪುರ್ಕೆ ಚೂರು, ಬಳಪದ್ ತುಂಡ್ ಗಳು, ಒಡ್ದ್ ಬಿಸಾಗಿದ್ ಗೋಲೀಗಳು, ಬಳೇ ಚೂರು, ಬೀಡಿ ತುಂಡು, ಇಂತಾವೆಲ್ಲಾ ಹಾದ್ ಬೀದಿಲಿ ಸಿಗ್ತಿತ್ತು. ಈಗ್ ನೋಡಿದ್ರೆ ಬರೀ ಪಿಲಾಸ್ಟಿಕ್ ಚೀಲಗೋಳು, ಅಲ್ ಉಜ್ಜಕ್ಕೆ ಪಟ್ಟಣ್ ದಾಗ್ ಉಪೋಗ ಮಾಡ್ತಿದ್ರಲ್ಲಾ  ಬಿರೆಸ್ ಅಂತಾರಲ್ಲಾ ಅವ್ಗಳು, ಮುಕ್ಚೌರಾ ಮಾಡ್ಕಾಳಕ್ಕೆ ಅದೆಂತದೋ ಬಿಲೇಡ್ ಇರ್ತಾದಂತೆ, ಅದ್ನ ಪಿಲಾಸ್ಟಿಕ್ ಇಡಿ ಮಾಡಿ ಸೆಕ್ಸಿರ್ತಾರಂತಲ್ಲಾ, ಊರೊಳ್ಗೆಲ್ಲಾ ಅವು ಏಟೊಂದ್ ಬಿದ್ದಾವೆ ಕಂಡ್ಯಾ,  ಇದೇನ್ ಸಿವಣ್ಣ , ನಿಮ್ಮೂರ್ ನಾಗೆ ಏಂಗೇ?  ಇಸ್ಕೂಲ್  ವ್ವಾದಿ ಬಂದಿರೋ ಐಕ್ಳೇ ಇಂಗೆಲ್ಲಾ ಊರ್ತುಂಬಾ ಪಿಲಾಸ್ಟಿಖ್ ಕಸ ಆಕ್ತರೆ, ಅಂತಾ ಜನಾ ಮಾತಾಡ್ಕಾತಾ ಇದ್ರು, ನಿಮ್ ಬೆಂಗ್ಳೂರಲ್ಲಿ ಎಂಗಾ?
ಓ! ನನ್ ತಮ್ಮಾ ಬಂದೇ ಬುಟ್ಟಾ ನನ್ ಇಲ್ಲಿ ಕಂಡ್ರೆ ಬೆಂಕಿ ಯಾಗ್ತಾನೆ., ಒಂಟೇ ಕನಣ್ಣಾ, ಅದ್ಯಾನಾರಾ ಆಗ್ಲೀ ವಸೀ ಭೂತಾಯಿ ಉಳ್ಸಾ ಕೆಲ್ಸಕ್ ಕಯ್ಯಚ್ಗಳೀ, ನಾನೂ ಬತ್ತೀನಿ. ಬರ್ಲಾ ಯಣ್ಣಾ?

ವಿ.ಸೂ: ಶಿವ ಪ್ರಕಾಶ್ ಅವರ ಒಂದು ಲೇಖನಕ್ಕೆ ಬರೆದ ಪ್ರತಿಕ್ರಿಯೆ ಅದ್ಯಾಕೋ ಅಲ್ಲಿ ಪ್ರಕಟವಾಗಲಿಲ್ಲ. ಆದ್ದರಿಂದ ಬೇರೆ ಬರಹ ಮಾಡಿ ಪ್ರಕಟಿಸಿರುವೆ.ನಮ್ಮ ಹಳ್ಳೀ ಭಾಷೆ ಉಳಿಸ್ ಬೇಕು, ಪ್ರಕೃತಿ ನಾಶ ಮಾಡ್ತಿರೋ ನಮ್ಮ  ಕೆಟ್ ಕೆಲಸ ನಮಗೆ ಗೊತ್ತಾಗ್ ಬೇಕು, ಅದಕ್ಕೆ ಏನಾದರೂ ಒಂದು ಪರಿಹಾರ ಹುಡುಕಿಕೊಳ್ಳಬೇಕು, ತನ್ಮೂಲಕ ಪರಿಸರ ರಕ್ಷಿಸಲು ನಮ್ಮ ಕೊಡುಗೆ ಏನು? ಭೂತಾಯಿಯ ಮಡಿಲಲ್ಲಿ ಕೊಳಕು ತುಂಬಿ ಹಾಳು ಮಾಡುತ್ತಿರುವ ನಾವು ಇನ್ನಾದರೂ ಈ ಕಡೆ ಸ್ವಲ್ಪ ಗಮನ ಹರಿಸದಿದ್ದರೆ ಗತಿ ಏನು ಅಂತಾ ಅಳಲನ್ನು ತೋಡಿ ಕೊಂಡಿರುವೆ ಅಷ್ಟೆ. ಲೇಖನ ಮುಂದುವರೆಸಿ ಅದನ್ನು ಆಂಧೋಳನ ಮಾಡುವ ಪ್ರಕ್ರಿಯೆ ಎಲ್ಲರ ಕೈ ಯಲ್ಲಿದೆ.