ಪುಳಿ/ಹುಳಿ, ಪುಳಿಸೇಹಣ್ಣು/ಹುಳಿಸೇಹಣ್ಣು, ಪುಣಿಸೇಹಣ್ಣು/ಹುಣಿಸೇಹಣ್ಣು, ಪುೞಿ/ಹುೞಿ

ಪುಳಿ/ಹುಳಿ, ಪುಳಿಸೇಹಣ್ಣು/ಹುಳಿಸೇಹಣ್ಣು, ಪುಣಿಸೇಹಣ್ಣು/ಹುಣಿಸೇಹಣ್ಣು, ಪುೞಿ/ಹುೞಿ

ಬರಹ

ಹುಳಿ=ಹುಳಿಸೇ/ಹುಣಿಸೇಹಣ್ಣಿಗೆ ಹೆಸರು. ಸಾಮಾನ್ಯವಾಗಿ ಹುಳಿಯಾಗಿರುವುದಕ್ಕೂ ಹೆಸರು. ಉದಾಹರಣೆ=ನಿಂಬೆಹುಳಿ, ಮಾವಿನ ಹುಳಿ ಇತ್ಯಾದಿ. ಸುಮ್ಮನೆ ಹುಳಿಯೆಂದರೆ ಹುಣಿಸೇಹಣ್ಣಿಗೆ ಹೆಸರು.
ಪ್ರಾಯಶಃ ಹುಳಿಸಿಹಿ->ಹುಳಿಸಿಯ್->ಹುಳಿಸಿ->ಹುಳಿಸೆ->ಹುಣಿಸೆ ಆಗಿರಬಹುದೆಂದು ನಮ್ಮ ಊಹೆ. ಹುಣಿಸೆಹಣ್ಣು ಸ್ವಲ್ಪಮಟ್ಟಿಗೆ ಸಿಹಿಯೂ ಇರುತ್ತದೆ.
ಪುೞಿ/ಹುೞಿ=ಹುೞುಹಿಡಿ. ದೋಸೆ ಹಿಟ್ಟು ಹುೞಿಯುತ್ತದೆ. ಅಂದರೆ ಸೂಕ್ಷ್ಮಜೀವಿಗಳ ಚಯಾಪಚಯ ಕ್ರಿಯೆಯಿಂದ ಹಾೞಾಗಿ ಹುಳಿಯಾಗುತ್ತದೆ. ಹಣ್ಣು ಕಾಯಾದಾಗಲೂ ಹುಳಿ. ಹಣ್ಣಾಗಿ ಹುೞಿತ ಮೇಲೂ ಹುೞಿ. ಹಲ್ಲು ಹುೞುಕು ಹಿಡಿಯುವುದು ಸೂಕ್ಶ್ಮಾಣುಜೀವಿಗಳು ಚಯಾಪಚಯಕ್ರಿಯೆ ನಡೆಸಿ ಬಿಟ್ಟ ಆಮ್ಲ(ಹುಳಿ)ದಿಂದ. ಆದುದಱಿಂದ ಹುೞು ಹಿಡಿದು ಹಾೞಾಗುವುದಕ್ಕೆ ಹುೞಿಯಾಗು ಎನ್ನುತ್ತಾರೆಂದು ನಮ್ಮ ಅಭಿಪ್ರಾಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet