ಪೇಪರ್ ನಲ್ಲಿ ಬರೋದು ಎಷ್ಟು ನಿಜ ?

ಪೇಪರ್ ನಲ್ಲಿ ಬರೋದು ಎಷ್ಟು ನಿಜ ?

ಬರಹ

ನಿನ್ನೆ ಪೇಪರ್ ನಲ್ಲಿ ಬ೦ದ ಸುದ್ದಿ - ನಾಜಿ ಕ್ರಿಮಿನಲ್ ಒಬ್ಬ ಕರ್ಣಾಟಕ ಗಡಿಯಲ್ಲಿ
ಸಿಕ್ಕಿ ಬಿದ್ದಿರುವನೆ೦ದು ಪ್ರಕಟವಾಯ್ತು. ಆತನ ಹೆಸರು ಬಾಚ್ ಎ೦ದು ಹಾಗೂ ಆತ ಹಿಟ್ಲರ್ ನ
(Marsha Tikash Whanaab) ವ್ಹಾನಾಬ್ ಕ್ಯಾ೦ಪ್ ನಲ್ಲಿ ಅಧಿಕಾರಿಯಾಗಿದ್ದು
12,000 ಯಹೂದಿಗಳನ್ನು ಕೊ೦ದನೆ೦ದು ಸುದ್ದಿ ತಿಳಿಸಿತ್ತು. ಆದರೆ ಈ ಸುದ್ದಿ
ನಿಜವಾದದ್ದಲ್ಲಾ ಗಾಳಿ ಸುದ್ದಿ , ಗೋವಾದ ಒ೦ದು ಬ್ಲಾಗಿ೦ಗ್ ಸೈಟ್ ಈ ರೀತಿ
ಜೋಕ್ ಮಾಡುವುದಕ್ಕೆ ಅ೦ತಾ ಈ ಸುದ್ದಿ ಹರಡಿಸಿ ನಮ್ಮ ಮಾಧ್ಯಮಗಳ ಬಣ್ಣ ಬಯಲು ಮಾಡಿದೆ.
ಈ ತಾಣದಲ್ಲಿ ನಮ್ಮ ದೇಶದ ಮಾಧ್ಯಮಗಳ ಡೊ೦ಗಿ ತನವನ್ನು ಬಿಚ್ಚಿ ತೋರಿಸಿ ನಮ್ಮನ್ನು ಎಚ್ಚರಿಸುವ
ಪ್ರಯತ್ನ ನಡೆದಿದೆ.
http://penpricks.blogspot.com/
ಬೇಸರದ ವಿಷಯವೆ೦ದರೆ ಡೆಕನ್ ಹೆರಾಲ್ಡ್,() ಡೆಕನ್ ಕ್ರೋನಿಕಲ್ , ಇ೦ಡಿಯನ್ ಎಕ್ಸ್ ಪ್ರೆಸ್
ಹಾಗೂ ಟೈಮ್ಸ್ ಎಲ್ಲವೂ ಈ ಸುದ್ದಿಗೆ ಅತ್ಯ೦ತ ಪ್ರಾಶಸ್ತ್ಯ ಕೊಟ್ಟು ಪ್ರಕಟ ಮಾಡಿದೆ.
1> ಹಾಗಿದ್ದರೆ ಮಾಧ್ಯಮದಲ್ಲಿ ಬರುವ ವಿಷಯಗಳಲ್ಲಿ ಸತ್ಯವಾವುದು ಅಸತ್ಯವಾವುದು ?
2> ಆವ ಪೇಪರ್ ನಿಜವಾದ ಸಮಾಚಾರ ಅನ್ವೇಷಿಸಿ ಪ್ರಕಟಿಸುತ್ತೆ ? ಸುಮ್ಕೇ ಈ ಮೇಲ್
ಬ೦ತು ಅ೦ತಾ ಪ್ರಕಟ ಮಾಡೋ ಹಾಗಿದ್ದರೆ ಜರ್ನಲಿಸ್ಟ್ ಯಾಕ್ ಆಗಬೇಕು ?
3> ಎಲ್ಲಾ ಮಾಧ್ಯಮಗಳು ಕುರುಡ ರಾದರೆ ಸಮಾಜದಲ್ಲಿ ಬೆಳಕು ಚೆಲ್ಲುವ ಕೆಲ್ಸಾ ಯಾವ ಮಾಧ್ಯಮ
ಮಾಡ್ಬೇಕು ?
4> ಆಮೇಲೆ ಈ ಮಾಧ್ಯಮಗಲನ್ನು ನ೦ಬ ಬೇಡಿ ... ಇವೆಲ್ಲಾ ಡೊ೦ಗಿ ಸುದ್ದಿ ಮತ್ತು ವಿಷವನ್ನು
ಬಿತ್ತುವ ಜಾಲಗಳು ಅ೦ತಾ ಎಚ್ಚರಿಸೋ ಕೆಲ್ಸಾ ಯಾವ ಮಾಧ್ಯಮ ಮಾಡ ಬೇಕು ?
ಉದಾಹರಣೆಗೆ - ಅನ೦ತಮೂರ್ತಿ Vs ಬೈರಪ್ಪನವರ ವಾದ ಅಷ್ಟೊ೦ದು ದಿನ ಮಾಡಿದ್ದು
ಯಾತಕೋಸ್ಕರಾ ?
5> ನ್ಯಾಯ ಅನ್ಯಾಯ ತೀರ್ಮಾನ ಮಾಡೋ ಶಕ್ತಿ ನ್ಯಾಯಾಲಯಗಳಿ೦ದಾ ಮಾಧ್ಯಮಗಳೆ
ತಗೊ೦ಡು ಎಷ್ಟೋ ಬಾರಿ ಅನಾಹುತಕ್ಕೆ ಕಾರಣ ವಾಗಿದೆ ಈ ಮಾಧ್ಯಮಗಳು.
ಇವನ್ನು ಹೇಗೆ ನಿಯ೦ತ್ರಿಸೋದು ?
ಮಾಧ್ಯಮಗಳು ಅಸ್ತಿತ್ತ್ವ ವೇ "ಮನುಷ್ಯನ ವಿಷಯ ವಾಸನೆಯಿ೦ದಾ ಸದಾ ಪ್ರೇರಿತವಾದ
ದುರ್ಬಲ ಮನಸ್ಸ" ನ್ನು ಎಕ್ಸ್ ಪ್ಲಾಯಿಟ್ ಮಾಡುವ ಉದ್ದೇಶವನ್ನು ಹೊ೦ದಿರುವ೦ತೆ ಕಾಣುತ್ತದೆ.
ಹಾಗಿದ್ದ ಮೇಲೆ ಪ್ರಜಾ ಪ್ರಭುತ್ತ್ವದ ನಾಲ್ಕನೇ ಕಣ್ಣು ಕುರುಡಾದ ಮೇಲೆ ಇನ್ಯಾರು ಗತಿ ನಮ್ಮ
ಸಮಾಜಕ್ಕೆ. ಬಹುಶ: ಒಳಗಿನೆ ಬೆಳಕೇ ನಿಜ ಬೆಳಕು - ಅದೇ ದಾರಿ ಮತ್ತು ಗುರಿ ಅನ್ನೋ
ರಮಣರ ಮಾತು ಸತ್ಯ ಅನ್ನಿಸ್ತಾಯಿದೆ.


ಚಿಕ್ಕವನಿದ್ದಾಗ ಮೃಗಾಲಯ ಅನ್ನೋ ಸಿನಿಮಾ ನೋಡಿದ್ದೆ. ಅದರಲ್ಲಿ ಮನೆ ಕಾಯುವ ನಾಯಿ ಮನೆ ಯಜಮಾನನನ್ನು ತಿ೦ದು ಸಾಯಿಸುತ್ತದೆ. ಆ ಸಿನಿಮಾ ನೋಡಿದ ಮೇಲೆ ನಾಯಿ ಸಾಕುವ ಆಸೆ ಪರಿಪೂರ್ಣ ಬಿಟ್ಟು ಬಿಟ್ಟೆ. ಹೀಗೆ ಪ್ರಜಾ ಪ್ರಭುತ್ತ್ವದ ಮನೆ ಕಾಯುವ ನಾಯಿಯೆ ಮನೆ ಯಜಮಾನ ಅ೦ದರೆ ಪ್ರಜೆಗಳ ಬುದ್ದಿಯನ್ನು ತಿ೦ದರೆ ಏನು ಮಾಡೋದು ??

ಪ್ರಜಾ ಪ್ರಭುತ್ತ್ವದ ವಾಚ್ ಡಾಗ್ ಯಾರಾಗಬೇಕು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet