ಪ್ರತಿ ಹನಿಯೂ ಸುಖವೇ

ಪ್ರತಿ ಹನಿಯೂ ಸುಖವೇ

ಬರಹ

ದು:ಖ ಸಾಗರದಲ್ಲಿ ಸುಖದ ಬಿಂದಿಗೆ

ಹಿಡಿದು ,ನೆಲಸಿಗದೆ ನಿಲಲು ,

ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,

ಪ್ರತಿಹನಿಯು ಸುಖವೋ ಪಂಡಿತಪುತ್ರ ||

--ಬಹಳಶ್ಟು ಮಂದಿ... ಸುಖವು ಎಲ್ಲೋ ಇದೆ ಎಂದು ತಿಳಿದು...ಸಾಹಸ ಮಾಡಿ ಅದನ್ನು ಪಡೆಯಲು ಹೋಗುತ್ತೇವೆ...ಸುತ್ತಲಿರುವುದೆಲ್ಲಾ ದು:ಖ..ಸುಖ ಬೇರೆಲೋಕದಲ್ಲೆಲ್ಲೋ ಇದೆಯೆಂದು, ಅದನ್ನು ಪಡೆಯಲು ಏನೆಲ್ಲಾ ಸಾಹಸ ಮಾಡುತ್ತೇವೆ...ಸಾಧ್ಯವಾಗದಿದ್ದರೆ ಮತ್ತೆ ದು:ಖಿತರಾಗುತ್ತೇವೆ....ಅದರಬದಲು ನಮ್ಮಲ್ಲೇ ಅಡಗಿರುವ ಸುಖದ ಪ್ರಜ್ನೆಯನ್ನು ಜಾಗ್ರುತ ಗೊಳಿಸುವುದೊಳಿತು...ನಮ್ಮ ಸುಖ ದು:ಖ ನಮ್ಮೊಳಗೇ ಇದೆಯಲ್ಲವೇ....
ದು:ಖ ಸಾಗರದ ಪ್ರತಿಹನಿಯನ್ನೂ ಸುಖವನ್ನಾಗಿಸುವುದು...ನಮ್ಮೊಳಗಿನ ಸುಖದ ಪ್ರಜ್ನೆ ಎಂಬುದೇ ಇದರ ಸಾರಾಂಶ..