ಪ್ರತ್ಯೇಕತಾವಾದಿಗಳ ಪರ ನಿಲ್ಲುವ ತೆವಲು ಯಾಕೆ?
-Basavaraj Kulali
ಪ್ರತಿ ಸಲದಂತೆ ಈ ಸಲವೂ ಕೂಡ ತಾನು ಅನ್ನ ತಿಂದ ಮನೆಗೆ ಎರಡು ಬಗೆಯುವವಳು ಎನ್ನುವದನ್ನು ಅರುಂಧತಿ ರಾಯ್ ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ. ಅದೇ ರೀತಿ ತಥಾಕಥಿತ ಮಾದ್ಯಮಗಳು ಮತ್ತು ಬುದ್ಧಿ ಜೀವಿಗಳು ಜಮ್ಮು ಕಾಶ್ಮೀರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಸಂಕುಚಿತ ಹೇಳಿಕೆ ನೀಡುವುದರಲ್ಲಿ ತೊಡಗಿದ್ದಾರೆ. ಕಾಶ್ಮೀರದಲ್ಲಿ ವಾಸಿಸುವ ಒಂದು ಸಣ್ಣ ವರ್ಗದ ಜನರ ಬೆಂಬಲಕ್ಕೆ ಇವರೆಲ್ಲ ನಿಂತಿರುವುದು ಕಂಡುಬರುತ್ತದೆ. ಇವರಿಗೆ ಉಳಿದ ಜನರ ಬಗ್ಗೆ, ಪ್ರಮುಖವಾಗಿ ಜಮ್ಮು ಮತ್ತು ಲದ್ದಾಕ್ ಪ್ರದೇಶದಲ್ಲಿ ವಾಸವಾಗಿರುವ ಜನರ ಬಗ್ಗೆ, ಅವರ ನೋವು ಹತಾಶೆಗಳ ಬಗ್ಗೆ ಕಾಳಜಿ ಇರುವಂತೆ ಕಂಡು ಬರುತ್ತಿಲ್ಲ. ಕಾಶ್ಮೀರದ ವಿಷಯದಲ್ಲಿ ಒಟ್ಟಾರೆ ದೇಶದ ಜನರ ಅಭಿಪ್ರಾಯ ಅವರಿಗೆ ಬೇಕಾಗಿಲ್ಲ. ಕೇವಲ ಕಾಶ್ಮೀರಿ ಮೂಲಭೂತವಾದಿಗಳನ್ನು ಮುಂದಿಟ್ಟುಕೊಂಡು ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆನ್ನುವದರಲ್ಲಿ ಯಾವ ಅರ್ಥವಿದೆ? ಕಳೆದ 64 ವರ್ಷಗಳಲ್ಲಿ ಕಾಶ್ಮೀರದ ರಕ್ಷಣೆಗೆ ನಾವು ನೀಡಿದ ಬಲಿದಾನಕ್ಕೆ ಬೆಲೆಯೇ ಇಲ್ಲವೆ? ಇದೆಲ್ಲ ಯಾಕೆ ಇವರಿಗೆ ಗೊತ್ತಾಗುವದಿಲ್ಲ?
1989 ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಪ್ರತ್ಯೇಕತಾ ಬೆಳವಣಿಗೆಗಳಿಂದಾಗಿ ಲಕ್ಷಾಂತರ ಕಾಶ್ಮೀರಿ ಪಂಡಿತರು ತಮ್ಮ ನೆಲದಲ್ಲಿಯೇ ನಿರಾಶ್ರಿತರಾಗಬೇಕಾಯಿತು. ಹಿಂದೂಗಳನ್ನು ಕಾಶ್ಮೀರ ಕಣಿವೆಯಿಂದಲೇ ಸಂಪೂರ್ಣವಾಗಿ ನಿನರ್ಾಮ ಮಾಡಿದ ಕಾಶ್ಮೀರ ಪ್ರತ್ಯೇಕತಾವಾದಿ ಮುಸ್ಲಿಂ ಬಂಡುಕೋರರ ವಿರುದ್ಧ ಇವತ್ತಿಗೂ ಸೆಕ್ಯುಲರ್ ಮಾದ್ಯಮಗಳು ಮತ್ತು ಅರುಂಧತಿ ರಾಯ್, ವಿನೋದ್ ಮೆಹ್ತಾ ರಂತಹ ಬುದ್ದಿಜೀವಿಗಳು ಮೌನವಹಿಸಿರುವುದು ವಿಪಯರ್ಾಸದ ಸಂಗತಿ.
ಕೆಲ ದಿನಗಳ ಹಿಂದೆ ಅಮರನಾಥ ಯಾತ್ರಾಥರ್ಿಗಳಿಗೆ ತಂಗಲು ಭೂಮಿಯನ್ನು ಒದಗಿಸಿದಾಗ ಅದನ್ನು ವಿರೋಧಿಸಿ ಕಾಶ್ಮೀರದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಭೂಮಿಯನ್ನು ನೀಡುವದರ ಹಿಂದೆ ರಾಜಕೀಯ ಕೈವಾಡವಿತ್ತು. ಹಿಂದೂಗಳನ್ನು ತನ್ನತ್ತ ಸೆಳೆದುಕೊಳ್ಳಲು ಆಡಳಿತ ಸಕರ್ಾರ ಮಾಡಿದ ತಂತ್ರ ಅದು. ಆದರೆ ಅದೇ ಹೊತ್ತಿಗೆ ಮುಸ್ಲಿಮರನ್ನು ಓಲೈಸಲು ಅಲ್ಲಿನ ಸಕರ್ಾರವೇ ಮೂಲಭೂತವಾದಿಗಳಿಗೆ ಕುಮ್ಮಕ್ಕು ನೀಡಿ ಭೂಮಿಯನ್ನು ನೀಡಬಾರದೆಂದು ಪ್ರತಿಭಟನೆ ನಡೆಯುವಂತೆ ಮಾಡಿತು.
ಎರಡು ತಿಂಗಳ ಕಾಲ ನಡೆಯುವ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಯಾತ್ರಾಥರ್ಿಗಳ ಅನುಕೂಲಕ್ಕಾಗಿ 200 ಎಕರೆ ಭೂಮಿಯನ್ನು ನೀಡಲಾಗಿತ್ತು. ಇದೇ ವಿಷಯವನ್ನು ದೊಡ್ಡದು ಮಾಡಿದ ಅಲ್ಲಿನ ಮೂಲಭೂತವಾದಿಗಳು ಇದರಿಂದಾಗಿ ಕಾಶ್ಮೀರದ ಸ್ವರೂಪವೇ ಬದಲಾಗುವುದೆನೋ ಎಂಬಂತೆ ಬಿಂಬಿಸಿದರು. ಕಾಶ್ಮೀರ ಕಣಿವೆ ಮುಸ್ಲಿಮರಿಗೆ ಮೀಸಲಾದದ್ದು, ಇಲ್ಲಿ ಹಿಂದೂ ಪರ ಚಟುವಟಿಗಳಿಗೆ ಅವಕಾಶವಿಲ್ಲ ಎಂಬಂತೆ ಅಲ್ಲಿನ ಬಂಡುಕೋರರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹಿಂದೂಗಳು ಇಡೀ ಕಾಶ್ಮೀರ ಕಣಿವೆಯನ್ನೇ ಆಕ್ರಮಿಸಿಕೊಂಡಿದ್ದಾರೆಂಬಂತೆ ಮಾಧ್ಯಮಗಳು ಮತ್ತು ಬುದ್ಧಿ ಜೀವಿಗಳು ಹೇಳಿಕೆ ನೀಡಿದರು. ಆದರೆ ಒದಗಿಸಿದ ಆ 200 ಎಕರೆ ಭೂಮಿ ಬೆಸಿಗೆಯ ದಿನಗಳನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ತಂಗಲು ಅದು ಯೋಗ್ಯವಾದುದಲ್ಲ. ಆದ್ದರಿಂದ ಅಲ್ಲಿ ಖಾಯಂ ಆಗಿ ವಾಸವಾಗಿರುವುದು ಅಸಾದ್ಯ. ಒಂದು ವೇಳೆ ವಾಸವಾಗಲು ಯೋಗ್ಯವಾಗಿದ್ದರೂ ಕೂಡ ಅಷ್ಟೊಂದು ಸಣ್ಣ ಜಾಗದಲ್ಲಿ ಎಷ್ಟು ಹಿಂದೂ ಕುಟುಂಬಗಳು ವಾಸಿಸಬಲ್ಲವು? ಇಷ್ಟೆಲ್ಲ ಅಡೆತಡೆಗಳ ಮದ್ಯೆಯೂ ಅಲ್ಲಿನ ಪ್ರತ್ಯೇಕತಾವಾದಿಗಳ ಮಾತಿಗೆ ಮನ್ನನೆ ನೀಡುತ್ತಿರುವುದು ಅರುಂಧತಿರಾಯ್ ರಂತಹ ಪ್ರಚಾರ ಪ್ರೇಮಿಗಳು.
ಇವರೆಲ್ಲರ ಮದ್ಯೆ ಒಬ್ಬ ಬುದ್ದಿಜೀವಿ ಎಮ್. ಜೆ. ಅಕ್ಬರ್ ಮಾತ್ರ ಹಿಂದೂ ಪರ ಮಾತನಾಡಿದ್ದರು. ಅವರು ತಮ್ಮ ಘಥಿ ಒಣಟಛಚಿ ಛಿಜಟಿಣಡಿಜ ಜಿಠಡಿ ಣಜಡಿಡಿಠಡಿಟ ಚಿಛಿಣತಣಜ ಎಂಬ ಲೇಖನದಲ್ಲಿ ಈ ರೀತಿ ಬರೆಯುತ್ತಾರೆ, ಕಾಶ್ಮೀರ ಕಣಿವೆಯಲ್ಲಿ ದಿನಾಲೂ ಹಿಂದೂಗಳು ಅನುಭವಿಸುವ ನೋವು, ಹತಾಶೆ, ಅನ್ಯಾಯ, ಆಕ್ರಮಣ ಮುಂತಾದ ವಿಷಯಗಳು ಹಿಂದೂಗಳ ಮನಸ್ಸಿನಲ್ಲಿ ಮಡುಗಟ್ಟಿ ಸ್ಫೋಟಗೊಳ್ಳಲು ಕಾಯುತ್ತಿದ್ದವು. ಅಲ್ಲಿನ ಹಿಂದೂಗಳು ತಮ್ಮ ಸುತ್ತ ಮುತ್ತ ನಾಯಿ ಕೊಡೆಗಳಂತೆ ಹಬ್ಬುತ್ತಿರುವ ಹೊಸ ಮಸಿದಿಗಳು, ದಗರ್ಾಗಳನ್ನು ಸುಮ್ಮನೆ ನೋಡುತ್ತಿದ್ದಾರೆ. ಯಾವಾಗ ಅಮರನಾಥ ಯಾತ್ರೆಗೆ ನೀಡಿದ ಭೂಮಿಯನ್ನು ಅಲ್ಲಿನ ಸಕರ್ಾರ ಹಿಂತೆಗೆದುಕೊಂಡಿತೊ ಆ ಎಲ್ಲ ನೋವು, ಹತಾಶೆಗಳು ಒಮ್ಮೆಗೆ ಸ್ಪೋಟಗೊಂಡವು. ಹಜ್ ಯಾತ್ರೆಯ ಸಲುವಾಗಿ ಎಲ್ಲ ಕಡೆ ಹಜ್ ಹೌಸ್ ಗಳ ನಿಮರ್ಾಣವಾಗಿತ್ತಿರುವದನ್ನು ಅಲ್ಲಿನ ಹಿಂದೂ ಗಮನಿಸುತ್ತಿದ್ದಾನೆ. ಎರಡು ತಿಂಗಳ ಕಾಲ ನಡೆಯುವ ಹಜ್ ಯಾತ್ರೆಯ ಸಂದರ್ಭದಲ್ಲಿ ಹಜ್ ಯಾತ್ರಿಕರ ಅನುಕೂಲಕ್ಕಾಗಿ ಇವನ್ನು ತೆರೆಯಲಾಗುತ್ತದೆ. ಅವೇನೂ ಅರೆಕಾಲಿಕ ವ್ಯವಸ್ಥೆಗಳಲ್ಲ, ಅವು ಶಾಶ್ವತವಾಗಿರುವಂತಹವು. ಮುಸ್ಲಿಮರಿಗೆ ಇಷ್ಟೆಲ್ಲ ಸೌಲಬ್ಯ ನೀಡಿ ನಮಗೆ ಮಾತ್ರ ನೀಡಿದ ಭೂಮಿಯನ್ನೂ ಕಸಿದುಕೊಳ್ಳುತ್ತಿರಿ ಎಂದು ಅಲ್ಲಿನ ಹಿಂದೂ ಪ್ರಶ್ನಿಸುತ್ತಾನೆ. ಭಾರತದಲ್ಲಿ ಹಿಂದುವಾಗಿರುವುದು ಅಪರಾಧವೆ? ಎಂದು ಎಮ್ ಜೆ ಅಕ್ಭರ್ ಪ್ರಶ್ನಿಸುತ್ತಾರೆ.
ಗಿಲಾನಿಯಂತಹ ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಮಾದ್ಯಮಗಳೇ ಮುಸಿಂ ಜನಾಂಗದ ನಾಯಕರಂತೆ ಬಿಂಬಿಸಿವೆ. ಅವರ ದೇಶ ವಿರೋಧಿ ಹೇಳಿಕೆಗಳನ್ನು ಯಾವ ಮಾಧ್ಯಮವೂ ಪ್ರಶ್ನೆ ಮಾಡುವುದಿಲ್ಲ ಮತ್ತು ಅಲ್ಲಿನ ಮುಸ್ಲಿಮೇತರ ಜನರ ಅಭಿಪ್ರಾಯಗಳನ್ನು ಕೇಳುವ ಪುರುಸೋತ್ತು ಅಲ್ಲಿನ ಮಾದ್ಯಮಗಳಿಗಿಲ್ಲ.
ಇದೇ ಅರುಂಧತಿರಾಯ್ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆಟರ್ಿಕಲ್ 370 ರ ಬಗ್ಗೆ ಮೌನ ವಹಿಸುತ್ತಾರೆ. ದೇಶದ ಮೊದಲ ಪ್ರಧಾನಿ ನೆಹರು ಸಂಸತ್ತಿನಲ್ಲಿ ಹೇಳಿರುವಂತೆ ಆಟರ್ಿಕಲ್ 370 ತಾತ್ಕಾಲಿಕವಾದದ್ದು. ನಂತರದ ದಿನಗಳಲ್ಲಿ ಇದನ್ನು ಸಂವಿದಾನದಿಂದ ತೆಗೆದು ಹಾಕಿ, ಕಾಶೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಬಹುದು. ಆದರೆ ಅರುಂಧತಿರಾಯ್ರಂತವರು ಈ ವಿಷಯವನ್ನು ಮರೆಮಾಚುತ್ತಾರೆ.
ಒಟ್ಟಿನಲ್ಲಿ ಈ ಸ್ವಘೋಷಿತ ಬುದ್ಧಿಜೀವಿಗಳಿಗೆ ಮತ್ತು ಮಾದ್ಯಮಗಳಿಗೆ ದೇಶದ್ರೋಹಿಗಳ ಪರ, ಹಿಂಸಕರ ಪರ, ಬಂಡುಕೋರರ ಪರ ನಿಲ್ಲುವದರಲ್ಲಿಯೇ ಪ್ರಚಾರ ಸಿಗುತ್ತದೆ ಎಂಬುದು ಖಾತ್ರಿಯಾಗಿದೆ
Comments
ಉ: ಪ್ರತ್ಯೇಕತಾವಾದಿಗಳ ಪರ ನಿಲ್ಲುವ ತೆವಲು ಯಾಕೆ?