ಪ್ರಶ್ನೆಗಳಿಗೆ ಪರಿಣಿತರ ಉತ್ತರ, ಪ್ರಶ್ನೆ ಕೇಳದವರಿಗೆ ಬಹುಮಾನವಿಲ್ಲ!

ಪ್ರಶ್ನೆಗಳಿಗೆ ಪರಿಣಿತರ ಉತ್ತರ, ಪ್ರಶ್ನೆ ಕೇಳದವರಿಗೆ ಬಹುಮಾನವಿಲ್ಲ!

ಬರಹ

ಭಾನುವಾರ ವಿಜ್ಞಾನ, ತಂತ್ರಜ್ಞಾನ, ಕೃಷಿಯ ಬಗ್ಗೆ ಕನ್ನಡದಲ್ಲಿ ಹೇಗೆ ಬರೆಯೋದು ತಿಳೀಲಿಕ್ಕೆ ಕರೆದ ಚರ್ಚೆ ಕಾರ್ಯಕ್ರಮ - ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನ ಹೆಚ್ಚಿಸಲಿಕ್ಕೆ ಒಂದು ಮುನ್ನುಡಿಯಷ್ಟೇ. ಅದು ಮುಂದುವರಿಯ ಬೇಕು ಅಂದ್ರೆ ಅದರ ಬಗ್ಗೆ ಅರಿವನ್ನ ಮೂಡಿಸುವ ಕೆಲಸ, ನಮ್ಮ ಮನಸ್ಸಿನಲ್ಲಿ, ಮನೆಯ ಸುತ್ತಮುತ್ತ ಮತ್ತು ಮನೆಯ ಒಳಗೆ ಸುಳಿದಾಡುವ ಅನೇಕ ಪ್ರಶ್ನೆಗಳನ್ನು ಒಂದೆಡೆ ಸೇರಿಸಿ, ಅದಕ್ಕೆ ಸಂಭಂದಿಸಿದ ಲೇಖನಗಳನ್ನು ಬರೆಯುವುದರಲ್ಲಿ ನಾವು ಮುಂದಾಗ ಬೇಕು.

ಕಂಪ್ಯೂಟರ್ ಅಂದ್ರೆ ಬ್ಲಾಗ್ ಮಾಡೋ ನಮಗೆಲ್ಲ ಅಲ್ಪ-ಸ್ವಲ್ಪ ಗೊತ್ತಿದೆ ಅಲ್ವಾ? ಆದ್ರೆ ಇದರ ಬಗ್ಗೆ ಗೊತ್ತಿಲ್ಲದ ಅನೇಕರು ನಮ್ಮೆಲ್ಲರ ಸುತ್ತಮುತ್ತ ಇದ್ದಾರೆ ಮತ್ತು ಅನೇಕ ಪ್ರಶ್ನೆಗಳನ್ನು ಕೇಳ್ತಿರುತ್ತಾರೆ. ಆ ಪ್ರಶ್ನೆಗಳನ್ನು ಈ ಲೇಖನದ ಕಾಮೆಂಟುಗಳ ಮೂಲಕ ಕಲೆ ಹಾಕಿ ಕನ್ನಡದಲ್ಲಿ ಕಂಪ್ಯೂಟರ್ ಕಲಿಯುವುದಕ್ಕೆ ಬೇಕಾದ ಲೇಖನಗಳನ್ನು ಬರೆಯಲು ಎಲ್ಲರನ್ನು ಹುರಿದುಂಬಿಸೋಣ.

ಅತಿ ಹೆಚ್ಚು ಪ್ರಶ್ನೆಗಳನ್ನು ಇಲ್ಲಿ ಸೇರಿಸುವವರಿಗೆ ಸಂಪದ ಟೆಕ್ ತಂಡ ಸಿದ್ದ ಪಡಿಸಿರುವ "ಚಿಗುರು ಗ್ನು/ಲಿನಕ್ಸ್" ಸಿ.ಡಿ ಸಿಗುತ್ತದೆ. 

ಮುಂದಿನ ಹಂತದಲ್ಲಿ ಲೇಖನಗಳನ್ನು ಬರೆಯಲಿಕ್ಕೆ ಬೇಕಿರುವ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು, ಚರ್ಚಾಕೂಟಗಳನ್ನು ಏರ್ಪಡಿಸಲು "ಟೆಕ್ ಸಂಪದ" ತಂಡ ನಿಮಗೆ ಸಹಾಯ ಮಾಡಲಿದೆ. 

ಅದೆಲ್ಲದರ ಜೊತೆಗೆ ಹರಿ ಇಂತಹ ಸ್ವರ್ಧೆಗಳಲ್ಲಿ ಭಾಗವಹಿಸಿ, ವಿಜ್ಞಾನ, ತಂತ್ರಜ್ಞಾನ
ಕುರಿತ ವಿಷಯಗಳನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ನೆರವಾಗುವವರಿಗೆ ಉಡುಗೊರೆ ಕೂಡ
ಕೊಡಬಹುದು ಅಂತ ಹೇಳಿದ್ದಾರೆ.

ಮುಂದಿನ ೭ ದಿನ ನಾವು ಈ ಲೇಖನಕ್ಕೆ ಬರುವ "ಕಂಪ್ಯೂಟರ್" ಬಗೆಗಿನ ಸಾಮಾನ್ಯ ಪ್ರಶ್ನೆಗಳನ್ನು ನಿಮ್ಮೆಲ್ಲರ ಮೂಲಕ ಕಲೆ ಹಾಕ್ತೀವಿ.  ಕಾಮೆಂಟ್ ಹಾಕೋದನ್ನ ಮರೆಯಬೇಡಿ. ಕಾಮೆಂಟುಗಳಲ್ಲಿ ಚರ್ಚಿಸಲ್ಪಡುವ ವಿಷಯದ ಬಗ್ಗೆ ನೀವೇ ಒಂದು ಸಣ್ಣ ಲೇಖನ ಬರೀತೀನಿ ಅಂತಿದ್ದು, ಯಾರ ಸಹಾಯವಾದರೂ ಬೇಕಿದ್ದರೆ ತಪ್ಪದೆ tech-volunteers @ sampada.net ಗೆ ಒಂದು ಮೈಲಾಯಿಸಿ. ಟ್ವಿಟರ್ ನಲ್ಲಿ ಕೂಡ ಟೆಕ್ ಸಂಪದವನ್ನು ನೀವು ಸಂಪರ್ಕಿಸಬಹುದು.

ಟ್ವಿಟರ್ - http://twitter.com/techsampada

(ಸಂಪದದ ಈ ಒಂದು ಹೊಸ ಕಾರ್ಯಕ್ರಮಕ್ಕೆ ಹೊಸ ಹೆಸರಿಡುತ್ತೀರಾ? - ಹೆಸರುಗಳನ್ನು ಮೇಲೆ ನೀಡಿರುವವ್ ಈ-ಮೈಲ್ ವಿಳಾಸಕ್ಕೆ ಕಳುಹಿಸಿ)