ಪ್ರಶ್ನೆ-ಉತ್ತರ

ಪ್ರಶ್ನೆ-ಉತ್ತರ

ಬರಹ

ಅವರು

ಬಯಲು ಬೆತ್ತಲುಗೊಳಿಸಿ

ಮಾದರಿಯಾದವರು:

ನಾನು

ಬಯಲಾಗುತ್ತೇನೆಂದು

ದಿಗಿಲನ್ನೇ ಉಟ್ಟವನು

ಇಬ್ಬರೂ

ಬೆತ್ತಲೆಗೆ ಬೆವರಿದವರು!

* * * * * * * *

ರೂಪ ನಿರೂಪಗಳ ಜೊತೆಜೊತೆಗೇ

ನಿಜರೂಪಗಳ ವಿಕಟಾಟ್ಟಹಾಸ.

ಸ್ಪರ್ಶ-ರೂಪ, ರಸ-ಗಂಧಗಳು

ನಡುವೆ ನರಳುವ ಮಾಯೆ, ಮುಸುಕು.

ಕಾಯದ ಕತ್ತಲೆಗೆ

ಬೆಳಕ ಸೂಸುವ ಬಯಲು.

ಹುತ್ತಗಟ್ಟದ ಚಿತ್ತವನ್ನಿರಿಯುತ್ತಲಿದೆ

ಬಯಲ ಆಲಯದ ಹೊಳೆವ ಕಳಸ.