ಪ್ರಶ್ನೆ...
ಬರಹ
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ...
ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...?
ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ...
ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...?
ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ...
ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...?
ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ...
ಸ೦ತೆಯಲ್ಲಿ ನೀನದನ್ನು ಮಾರಾತಕ್ಕೆ ಇಟ್ತಿರುವೆಯಲ್ಲ ಹೀಗೇಕೆ...?
ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ...
ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?
ನಶ್ವರವಾದ ಈ ಲೋಕದಲ್ಲಿ ಅಮರವಾದರೆ ಈ ಪ್ರೀತಿ...
ನೀನದಕ್ಕೆ ಗೋರಿಯನ್ನು ಕಟ್ಟಿರುವುದಾದರು ಎಕೆ...?