ಪ್ರೀತಿಯಿಂದ - ಪ್ರೀತಿಗಾಗಿ - ಪಮ್ಮಿ ಕಾ ಪ್ರೇಮ್ ಕಹಾನಿ
ಪ್ರೀತಿಯಿಂದ - ಪ್ರೀತಿಗಾಗಿ
- ಪಮ್ಮಿ ಕಾ ಪ್ರೇಮ್ ಕಹಾನಿ
ನಾನು ಗಡ್ದ ಬಿಟ್ಕೊಂಡು ದೇವ್-ದಾಸ್ ತರ ಓಡಾಡ್ಕೊಂಡು ಇದ್ದಾಗ, ಒಂದು ಅಮಾವಾಸ್ಯೆ ದಿನ ಯಮಗಂಡಕಾಲದಲ್ಲಿ ನಿನ್ನ ಭೇಟಿ ಆಗಿದ್ದು ನನಗೆ ಇನ್ನು ಜ್ಞಾಪಕ ಇದೆ. ಬಿಳಿ ಸೀರೆ ಉಟ್ಕೊಂಡು ಎರಡೆಳೆ ಕಾಸಿನ ಸರ ಹಾಕ್ಕೊಂಡು , fashion industry ನೆ ಮೂರ್ಛೆ ಹೋಗೊ ತರ pose ಕೊಡ್ತ ಇದ್ಯಲ್ಲ , ಅದನ್ನ ನೋಡಿನೆ ಅಲ್ವ ನಾನು ಮೋರಿಗೆ ಬಿದ್ದಿದ್ದು. ಕುಂಟುಕೊಂಡು ನೀನು ಬಂದು ಕಣ್ಣುಹೊಡೆದು ನನ್ನನ್ನ ಮೇಲಕ್ಕೆ ಎತ್ತಿದ್ದನ್ನ ನನ್ life ಅಲ್ಲೆ ಮರೆಯಲ್ಲ. ಮುಂಗಾರು ಮಳೆ opening reel ನನ್ನ ಜೀವನದ ಒಳ್ಳೆ ದಿನಗಳ climax ಆಗೊಗಿದ್ದು ಇವಾಗ history ಬಿಡು. ಅವತ್ತು ನೀನು ಪ್ರೀತಿಯಿಂದ ನನ್ನ ಕಿವಿಲಿ ಇಟ್ಟ ದಾಸವಾಳ ಹೂವ ಇನ್ನ ಕೆಳಗೆ ಬಿದ್ದಿಲ್ಲ ಗೊತ್ತ . ಪ್ರೀತಿ ಗೆ ಆಕರ್ಷಣೆ ಇರುತ್ತೆ ಅಂತಾರೆ, ಆದರೆ ಇಲ್ಲಿ ಗುರುತ್ವಾಕರ್ಷಣೆ ಯಾಕೆ ಇದೆ ಅಂತ ಗೊತ್ತಾಗ್ತ ಇಲ್ಲ .
ಅದೇನೆ ಇರ್ಲಿ ನೀನ್ ನನ್ನ ಜೀವನದಲ್ಲಿ ಕಾಲಿಟ್ಟ ಮೇಲೆ ಅರ್ಥ ಆಗದೆ ಇರೊ ವಿಷಯ ನೂರ ಒಂದು ಇದೆ ಚಿನ್ನ . ಅದೆಲ್ಲ ಪ್ರೀತಿ ಅಂತಾರೆ ನನ್ನ ಚಡ್ಡಿ ದೋಸ್ತ್’ಗಳು, ನೀನ್ ಏನ್ ಹೇಳ್ತಿಯಾ ?? ಅಲ್ಲ ನಾನ್ ನಿನಗೋಸ್ಕರ ಕೋಳಿನ, ಕುರಿನ ತ್ಯಾಗ ಮಾಡಿದ್ರೆ, ನೀನು ದನ ತಿಂತೀನಿ ಅಂತೀಯಲ್ಲ , ನೀನೇನ್ ಮುಸ್ಲಿಮ್ ಹುಡುಗಿನಾ !. ದನ ತಿನ್ನೋ ಹುಡುಗಿನ ನಾನು ಪ್ರೀತಿ ಮಾಡ್ತಾ ಇದೀನಿ ಅಂತ ನಮ್ಮ ಮನೇಲಿ ಏನಾದರು ಗೊತ್ತಾದರೆ, ನನ್ನ ದನಕ್ಕೆ ಬಡಿದ ಹಾಗೆ ಬಡಿತಾರೆ ಗೊತ್ತ ?? ಆದರು ನಾನು ನಿನ್ನ ಹಿಂದೆ vodafone ಹಿಡ್ಕೊಂದು hutch puppy ತರ ಓಡಾಡೋದು ಯಾಕೆ ಹೇಳು ?? ... ನನ್ನ mobile ಅಲ್ಲೆ ನಿನ್ನ ಹಳೆ boyfriend ಗೆ ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಬಯ್ತಿಯಾ . ಆದರೆ ನೀನು ಹೋದ ಮೇಲೆ ಅವನು ಮತ್ತೆ call ಮಾಡಿ ನನಗೆ ಸಂಸ್ಕೃತದಲ್ಲಿ ಅರ್ಥಾನೆ ಆಗದೆ ಇರೊ ತರ ಬಯ್ತಾನೆ ಗೊತ್ತ ... ಎಷ್ಟಾದರು ನಿನ್ನ ಹಳೆ boyfriend ಅಂತ ಬೇಜಾರಾದ್ರು ಸುಮ್ನೆ ಇರ್ತಿನಲ್ಲ ಯಾಕೆ ಹೇಳು ??. ..ನಾನು ಸಾಲ ಮಾಡಿ ತರೋ ದುಡ್ಡನ್ನ, ನೀನು ನಿಮ್ಮಪ್ಪ ಕೊಡೊ pocket money ಅನ್ಕೊಂಡು ಖರ್ಚು ಮಾಡಿದ್ರು ಸುಮ್ನೆ ಇರ್ತೀನಲ್ಲ ಯಾಕೆ ಹೇಳು ?? PVR ಗೆ ಕರ್ಕೊಂಡು ಹೋಗಿ ನೋಡಿದ cinemaನೆ ಎರಡೆರಡು ಸಲ ತೋರಿಸ್ತೀಯ, ಅದು ನನ್ ದುಡ್ಡಲ್ಲಿ .. imraan hashmi movie ನ ನೂರು ಸಲ ನೋಡಬಹುದು ಆದರೆ ಶಾರುಖ್ ಖಾನ್ cinema ಒಂದ್ಸಲ ನೋಡೊದು ಎಷ್ಟು ಹಿಂಸೆ ಅಂತ ಗೊತ್ತ ನಿನಗೆ .. ಆದರು ಕಣ್ಣು ಮುಚ್ಕೊಂಡು ನಿನಗೋಸ್ಕರ ನಾನು ನೋಡೋದು ಯಾಕೆ ಹೇಳು ?? ಅಲ್ಲ lolly pop ಕೊಡ್ಸ್ಲಿಲ್ಲ ಅಂತ ನೀನ್ ನನ್ ಜೊತೆ ಒಂದು ವಾರ ಮಾತಾಡೋದು ಬಿಟ್ಯಲ್ಲ... ನಾನು ಎಷ್ಟು ಆರಾಮಾಗಿ ಇದ್ದೆ ಗೊತ್ತ ,, ಇನ್ನೇನು ನಿನ್ನ ಮರೆತೇ ಹೋದೆ ಅನ್ನೋಷ್ಟರಲ್ಲಿ ಮತ್ತೆ ನೀನು ಬಂದು ನರಿ ಕಣ್ಣೀರು ಹಾಕಿ ತಗಲಾಕೊಂಡ್ಯಲ್ಲ , ಅವಾಗ್ಲು ನಾನು ನಗ್ ನಗ್ತಾ ಒಪ್ಪಿಕೊಂಡ್ನಲ್ಲ ಯಾಕೆ ಹೇಳು ??
ನಾನು ನಿನ್ನ ಬಗ್ಗೆ ಮಾಡಿದ್ research ಅಲ್ಲಿ, ಅರ್ಧ college ಅಲ್ಲಿ ಮಾಡಿದ್ರೆ ಇಷ್ಟೊತ್ತಿಗೆ ಉದ್ಧಾರ ಆದ್ರು ಆಗ್ತಾ ಇದ್ನೇನೋ ..ನಿನಗೋಸ್ಕರ ಹಾಳಾಗಿದ್ದು ಯಾಕೆ ಹೇಳು ???
"ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣು ನೀನು ... ಮಿಂಚು ಹೊಡೆದ ಕಾಗೆಗಿಂತ ಮೇಲು ನಾನು
ನಿನ್ನ ಚೆಂದ ಹೊಗಳಲು ನನ್ನ ಬುದ್ಧಿ ಸಾಲದು.. ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ನನ್ನ ಬಾಳೆಲ್ಲ ಕಿರಿಕ್ಕು !!!" ...
ನಿನ್ನ torture ತಡೆಯಕ್ಕೆ ಆಗದೆ ನನ್ನ favourite songಗೆ ಈ ತರ remix ಬರೆದು ,,, facebook ಅಲ್ಲಿ ಹಾಕಿ .. ಎಲ್ಲರ ಕೈಲಿ ಉಗಿಸಿಕೊಂಡಿದ್ದು ಯಾಕೆ ಹೇಳು ??
ನೀನು nimhans ಅಲ್ಲಿ ಹುಟ್ಟಿದ್ದು ಅಂತ ಗೊತ್ತಿದ್ರು .. ನಿನ್ನ ಹುಚ್ಚುತನಕ್ಕೆ ಮರುಳಾಗಿ , ಈ ಕಿತ್ತೊಗಿರೊ love letter ಬರೀತ ಇರೋದು ಯಾಕೆ ಹೇಳು ??
ರಾತ್ರಿ ಹೊತ್ತು ನನ್ನ ನೋಡಿ ಬೊಗಳ್ತ ಇದ್ದ ನಮ್ area ನಾಯಿಗಳು ... ನೀನು ಸಿಕ್ಕ ಮೇಲೆ ಬೆಳಿಗ್ಗೆ ಬೆಳಿಗ್ಗೆ ನೆ ಅಟ್ಟಿಸಿಕೊಂಡು ಬರ್ತ ಇದಾವೆ !!
ಆದ್ರು ಖುಶಿ ಖುಶಿಯಾಗಿ ನಾನು ಓಡೊಗೋದು ಯಾಕೆ ಹೇಳು ??
ಯಾಕೆ ಅಂದ್ರೆ
ನಮ್ಮ ರಗಳೆ ರಮ್ಯ ಹಿಡಿಯೊ photo ಮೇಲಾಣೆ ,BMTC ಗಾಡಿ ಬಿಡೊ ಹೊಗೆ ಮೇಲಾಣೆ , jackie ಜಯಂತ್ facebook status ಮೇಲಾಣೆ , ಚಂಡಿ ಚಂದನ ಕುಡಿಯೊ green tea ಮೇಲಾಣೆ , ಪಕ್ಕದಮನೆ ಹುಡುಗಿ cycle ಮೇಲಾಣೆ , shaking ಶಶಿ ಹೇಳೊ PJ ಮೇಲಾಣೆ, mindtree ಮಾನಸ ಬರೆಯೋ code ಮೇಲಾಣೆ , ನಿನ್ನ bloodನಲ್ಲಿರೊ cholestrol ಮೇಲಾಣೆ, ಪಾಗಲ್ ಪ್ರವೀಣ್ research ಮಾಡೊ carbon nanotube ಮೇಲಾಣೆ , ಗಂಟೆ ಮೂರ್ತಿ ಇಟ್ಕೊಳೊ ನಾಮದ ಮೇಲಾಣೆ, ತರ್ಲೆ TKP tummy ಮೇಲಾಣೆ , dirty harry potatu engine ಮೇಲಾಣೆ , ಅವಾಗಾವಾಗ tempt ಮಾಡೊ ನಿನ್ close friend ಮೇಲಾಣೆ ನಾನ್ ನಿನ್ನ love ಮಾಡ್ತೀನಿ ಕಣೆ ... love u too ಅಂತ ಹೇಳಿ ಪುಣ್ಯ ಕಟ್ಕೊಳೆ ... :)
----------------------------------------------------------------------------------------------------------------------------------------------------------
ಅಂತು ಇಂತು ಒಂದು love letter ಬರೆದೆ .. ಆದರೆ ಇದನ್ನ ನನ್ನ girlfreind ಗೆ ಕೊಡಕ್ಕೆ ಮುಂಚೆ , ನೀವೆಲ್ಲ ಒಂದ್ಸಲ ಓದಿ ನಕ್ಕುಬಿಡಿ ಸಂಪದಿಗರೆ.. ಇಷ್ಟೆಲ್ಲ ಹೇಳಿದ್ ಮೇಲು ಈ letter ಯಾರಿಗೆ ಅಂತ ಕೇಳಬೇಡಿ ..
ಪ್ರಮೋದ್ ಗೌಡ
[ ಆಂಗ್ಲ ಭಾಷೆಯನ್ನು ಉಪಯೋಗಿಸಿರುವುದಕ್ಕೆ ಕ್ಷಮೆ ಇರಲಿ .. ಲೇಖನದ ಓಟಕ್ಕೆ ಅನುಗುಣವಾಗಿರಲಿ ಅಂತ ಬಳಸಲಾಗಿದೆ ... ರಮ್ಯ , ಜಯಂತ್, ಚಂದನ, ಶಶಿ, ಮಾನಸ, ಪ್ರವೀಣ್, ಮೂರ್ತಿ, ಇವರೆಲ್ಲ ನನ್ನ ಸ್ನೇಹಿತರು ]