ಪ್ರೀತಿಯ ಸೀತೆ,,,
ಓದುವ ಮುನ್ನ,,( http://sampada.net/blog/%E0%B2%B8%E0%B3%80%E0%B2%A4%E0%B3%86%E0%B2%AF%E2... )
ಪ್ರೀತಿಯ ಸೀತೆ,,,
ಅದೆಷ್ಟೋ ಯುಗಗಳು ಕಳೆದ ಮೇಲು ನಿನ್ನಲ್ಲಿ ನೋವು ಮಡುಗಟ್ಟಿದೆ ಎಂದರೆ,,,, ವಿಷಾದವಾಗುತ್ತದೆ ನನಗೆ,,,,
ನೀನು ನನ್ನ ಪತ್ನಿ,,,, ನನ್ನ ಎರಡು ಕಣ್ಣುಗಳಲ್ಲಿ ನೀನೊಂದು,,,,, ನಾನು ನೀನು ಬೇರೆ ಎಂದಾದರೆ ತಾನೇ ನಿನಗಾಗುವ ನೋವು ನನಗಾಗದೆ ಇರುವುದು,,
ನಿನ್ನೊಡನೆ ಕಳೆದ ಮಧುರ ಕ್ಷಣಗಳು ಎಂದೆಯಲ್ಲ ಪ್ರಿಯೆ,,, ಆ ಮಧುರತೆಯಲ್ಲಿ ರಾಮನ ಮನವನ್ನು ಅರಿತೆಯಾ ನೀನು,,,, ನಿನಗೆ ಗೊತ್ತೇ? ನಾನು ಇಂದಿಗೂ ನಿನ್ನೊಡನೆಯೇ ಇದ್ದೇನೆ,
ನಿನಗಾಗುವ ನೋವನ್ನು ನೀನು ಅತ್ತು ಹಗುರಾಗಿಸಿಕೊಳ್ಳಬಹುದು, ಲೋಕದ ಎದುರಲ್ಲಿ ಗಂಡು ಅಳುವಂತಿಲ್ಲ,,, ನೀನಿಲ್ಲದ ನಾನು, ಹೇಗಿರಲು ಸಾದ್ಯ ಹೇಳು, ?
ಅಂದು ನೀನು ಜಿಂಕೆಗಾಗಿ ಚಂಚಲಳಾಗದೆ ಇದ್ದಿದ್ದರೆ, ಇಂದು ನಮಗೆ ಈ ಗತಿ ಬರುತ್ತಿತ್ತೆ ? ಕೇಳಬಾರದ ಪ್ರಶ್ನೆ,,, ಆದರೂ ಕೇಳುತ್ತಿರುವೆ,,,
ನಿನ್ನ ಕಾಣದ ಆ ದಿನ ನನಗಾದ ದುಗುಡ ನಿನಗೆ ಗೊತ್ತೇ ? ಬರಿಯ ಮಾತಿಗೆ ಬೆಲೆ ಕೊಟ್ಟು ರಾಜ್ಯ ತೊರೆದವನು ನಾನು,,, ನನ್ನ ಸ್ವಾರ್ಥವಿತ್ತೆ ಅದರಲ್ಲಿ?
ನನ್ನ ಮಾತಿಗೆ ಇನ್ನೊಂದು ಹೆಣ್ಣು ಜೀವವೂ ಬಲಿಯಾಯಿತು, ಮುದ್ದು ಊರ್ಮಿಳೆ! ನೆನೆದೆಯಾ ನೀ ಆಕೆಯನ್ನು ? ಪ್ರತಿ ಬಾರಿ ನೀ ನನ್ನೆದೆಗೆ ಒರಗಿದಾಗಲು, ಅಲ್ಲಿ ಊರ್ಮಿಳೆ ಅನುಭವಿಸಿದ ವಿರಹ, ನರಕ ಯಾತನೆ, ಹೇಳು ನಮ್ಮ ನೋವು ಸಾಟಿಯೇ, ಆ ಮುಗ್ದ ಮಗುವಿನ ಮನಸಿನ ಗಾಯಕ್ಕೆ,
ನಾನೊಬ್ಬ ರಾಜ(ರಾಜಕಾರಣಿ ಅಲ್ಲ) ಪ್ರಜೆಗಳೇ ನನಗೆ ದೇವರು, ಅವರ ದೃಷ್ಟಿಯಲ್ಲಿ ನಾನು ನೀನು ಎಲ್ಲರೂ ಕಳಂಕದಿಂದಾ ಮುಕ್ತವಾಗಿರಬೇಕೆನ್ನುವುದೇ,
ವನವಾಸಕ್ಕೆ ಹೊರಡುವ ಮೊದಲ ಹೆಜ್ಜೆಯಲ್ಲೇ ನಾನು ವಿಷಾದ ಹೊಂದಿದ್ದೆ, ಪಕ್ಕದಲ್ಲಿ ನಿಂತು ಬೀಳ್ಕೊಡುತ್ತಿದ್ದ ಊರ್ಮಿಳೆ, ಇನ್ನೊಂದು ಪಕ್ಕದಲ್ಲಿ ನನ್ನ ಪ್ರೀತಿಯ ಸತಿ ನೀನು, ಅಣ್ಣನ ಸೇವೆಗೆ ನಿಂತ ತಮ್ಮ, ಹೇಳು ನಾನು ನೀನು ಎಲ್ಲರೂ ಒಂದು ದೃಷ್ಟಿಯಲ್ಲಿ ತಪ್ಪನ್ನೆ ಮಾಡಿದೆವಲ್ಲವೇ, ಆ ದಿನ ನಾನು ಅದೆಷ್ಟು ಯೋಚಿಸಿದರು ಸರಿ ಯಾವುದೂ,, ತಿಳಿಯಲೇ ಇಲ್ಲ,
ಊರ್ಮಿಳೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ಅಯ್ಯೋ ವಿದಿಯೇ ಎನಿಸಿತು, ಆದರೂ ನಾನಿತ್ತ ಹೆಜ್ಜೆ ಹಿಂದೆ ಇಡುವಹಾಗೆ ಇರಲಿಲ್ಲ,,,, ಲಕ್ಮಣ ನಿರ್ಭಾವುಕನಾಗಿದ್ದ,
ನಿನ್ನ ರಾಮ ಲೋಕದ ದೃಷ್ಟಿಯಲ್ಲಿ ಮಹಾ ಪುರುಷನಾದಾರೆ, ನನ್ನೊಳಗಿನ ನೀನು ಏನು? ನಿನ್ನೊಳಗಿನ ನಾನು ಏನು ?
ನನ್ನೊಳಗಿನ ಕಣ ಕಣದಲ್ಲೂ ಪಶ್ಚಾತಾಪವಿತ್ತು, ನಿನ್ನನ್ನು ಕಳೆದುಕೊಂಡ ಅಪರಿಮಿತ ನೋವಿತ್ತು, ಹೇಳಿಕೊಳ್ಳಲು ಸುತ್ತಲೂ ಯಾರು ಇಲ್ಲ, ಆದರೂ ನನ್ನೊಳಗೆ ನೀನು ಇರುವೆ ಎಂಬ ಧೈರ್ಯ, ನಿನ್ನ ರಾಮ ಎಂದಿಗೂ ಲೋಕದ ಸುಖವನ್ನೇ ಬಯಸುವನೆಂಬ ಭಾವ ನಿನ್ನಲ್ಲಿ ಇದೆ ಎಂದುಕೊಂಡಿದ್ದೆ,
ರಾಮನಿಲ್ಲದ ಸೀತೆ ಬದುಕುವುದಿಲ್ಲ,,,, ಸೀತೆ ಇಲ್ಲದ ರಾಮ ಬದುಕಿಯಾನೆ ? ಹೇಳು, ನನ್ನೊಂದಿಗೆ ಕಾಡು ಮೇಡು ಅಲೆದೆಯಲ್ಲಾ, ನೀನಿಲ್ಲದ ನಾನು, ಕಲ್ಪನೆಯಾದರು ನನಗಿತ್ತೆ?
ಮುಗಿಸುವ ಮುನ್ನ,,,
ಹೊರಗಣ್ಣು ಮುಚ್ಚಿ, ಒಳಗನ್ನು ತೆರೆ,
ನಾನು ಅಲ್ಲೇ ಕುಳಿತು ಯುಗಗಳಿಂದ ಕಾದಿದ್ದೇನೆ,,,
ನಿನಗಾಗಿ, ನನ್ನ ಪ್ರೀತಿಯ ಸೀತೆಗಾಗಿ,,,
Comments
ಉ: ಪ್ರೀತಿಯ ಸೀತೆ,,,
ನವೀನ್ ರವರೆ, ಅತ್ಯುತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ... ಸೀತೆಯ೦ತೆಯೇ ರಾಮನಿಗೂ ನೋವಿತ್ತೆ೦ದು ತಿಳಿಯದಾದೆ. ಸೀತೆಯಾಗಿ ಒ೦ದೆರಡು ಮಾತು." ನನಗೆ ನೀನೇ ಎಲ್ಲ. ಗೆಳೆಯ,ಇನಿಯ,ತ೦ದೆ,ತಾಯಿ ಎಲ್ಲವೂ ನೀನೆ. ನಿನ್ನನ್ನೇ ನ೦ಬಿ ಬ೦ದಿದ್ದೆ. ಅ೦ತಹ ನೀನೇ ಇನ್ನು ಮು೦ದೆ ನನ್ನೊಡನಿರುವುದಿಲ್ಲವೆ೦ಬ ನೋವೇ ಒಳಗಣ್ಣ ತೆರೆಯದ೦ತೆ ಅಡ್ಡ ಪರದೆಯಾಯಿತು. ನನಗೆ ನಿನ್ನೊಬ್ಬನದೇ ಚಿ೦ತೆ ಆದರೆ.. ರಾಜನಾದ ನಿನಗೆ ಎಲ್ಲರೂ ಒ೦ದೇ ಎ೦ಬ ಸತ್ಯ ಅರಿಯದಾದೆ. ಕಷ್ಟವೋ ಸುಖವೋ ನಿನ್ನೊಡನೆ ಕಳೆಯಲು ಸಿಕ್ಕ ಆ ಕ್ಷಣಹಗಳಿಗೆ ನಾನು ಚಿರಱುಣಿ. ನಿನ್ನಿ೦ದ ದೂರವಾದರೂ ನನ್ನೆದೆಯಲ್ಲಿ ನಿನಗಾಗಿ ಪ್ರೀತಿ ಇದ್ದೇ ಇದೆ. ನನಗೆ ನಿನ್ನ ಪಟ್ಟದರಸಿಯಾಗಿ ಮೆರೆಯುವ ಆಸೆಯಿರಲಿಲ್ಲ, ನಿನ್ನೊಡನೆ ಗುಡಿಸಲಾದರೂ ಚಿ೦ತೆಯಿಲ್ಲ ನಿನ್ನ ನಾಮ ಸ್ಮರಣೆಯಲ್ಲಿ ಬದುಕುವ ಆಸೆಯಿತ್ತು. ನಿನ್ನೆದೆಯಲ್ಲಿ ನಾನಿದ್ದೇನೆ೦ಬ ಮಾತೇ ನನಗೆ ಸಾಕು ನಾನಿನ್ನು ನಿಶ್ಚಿ೦ತೆಯಿ೦ದ ನನ್ನ ತಾಯ ಮಡಿಲಲಿ ನಿನ್ನ ನಾಮ ಸ್ಮರಣೆ ಮಾಡುತ್ತ ನಿನ್ನೊ೦ದು ಕರೆಗಾಗಿ ಕಾಯುತ್ತಿರುತ್ತೇನೆ."
In reply to ಉ: ಪ್ರೀತಿಯ ಸೀತೆ,,, by Soumya Bhat
ಉ: ಪ್ರೀತಿಯ ಸೀತೆ,,,
ಸೌಮ್ಯಕ್ಕ,,,,,,,, ಅರ್ಥ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು,,,,,