ಪ್ರೀತಿಯ ಹಬ್ಬ
ಇಂದುಪ್ರೇಮಿಗಳ ದಿನ.ಅದೆಷ್ಟೋ ಮೂಡದ ಮಾತುಗಳಾಚೆಯ ಸಂಕೇತ ಸಂಬಂಧ ಸಾಮಿಪ್ಯಗಳು ತಲೆ ಎತ್ತುತ್ತವೆ. ಪ್ರೇಮಿಗಳು ಮಾತ್ರ ತಲೆ ತಗ್ಗಿಸುತ್ತಾರೆ! ತಲ್ಲಣವನ್ನು ಹಿಡಿ ಹ್ರುದಯದಲ್ಲಿರಿಸಿ ಉಸುರುವವರೇನು ಪ್ರೀತಿಯ ಪಸರುವವರೇನು..!
ಅದೇ college ಆವರಣ,ಹುಡುಗ ಹುಡುಗಿಯರಲ್ಲಿ ಪ್ರೀತಿ ಎಂಬ ಮಿಂಚಿನ ಸಂಚಲನ.ಆತ ಸ್ಪುರಧ್ರೂಪಿ,ಅವಳ ಕನಸಿನಂತವನು( ಅವಳ ವಯಸ್ಸೆ ಹಾಗೆ ಕನಸಿಗೆ ಬರುವವರು ಸಿನಿಮಾದ ಹೀರೊಗಳು ಮಾತ್ರ)ಕೈಯ್ಯಲ್ಲಿ ಕೆಂಗುಲಾಬಿಯ ಹಿಡಿದು ಇವಳೆದುರು ಮಂಡಿಯೂರಿ ನಿಂತರೆ, ಇವಳೋ ವಲ್ಲೆ ಎಂದು ಅದು ಹೇಗೆ ನುಡಿದಾಳು ಎಸ್ಟಾದರೂ ಅವಳದೂ sweet sixteen, ಅದೇನೋ ಅರಿಯದ ಆಸೆ ಕುತೂಹಲ ಆಕರ್ಷಣೆ. ಈ ವಯಸ್ಸೇ ಹೀಗೆ ಅರ್ಥವಿಲ್ಲದ ಆಕರ್ಷಣೆಯಾದರೂ ಸಮರ್ಥಿಸಿಕೊಳ್ಳುವ ಮನಸ್ಸು.
ಆದರೆ ಪ್ರೀತಿಯೆಂದರೇನು ಎಂಬ ಸಾಮಾನ್ಯ ಪ್ರಶ್ನೆ ನಮ್ಮಲ್ಲಿ ಮೂಡಿದ್ದರೆ ಅದಕ್ಕೆ ಸರಿಯಾದ ಉತ್ತರ college ಆವರಣದಲ್ಲಿ ಖಂಡಿತ ಸಿಗಲಾರದು. ಅದಕ್ಕೇನಿದ್ದರೂ ಬದುಕನ್ನು ಪೂರ್ತಿಯಾಗಿ ಬದುಕಿ ಸಾರ್ಥಕತೆಯತ್ತ ಪಯಣಿಸುತ್ತಾರಲ್ಲಾ,ಅಲ್ಲಿ ಹುಡುಕಬೇಕು.ಮೈಮನಗಳಲ್ಲಿ ಹದಿಹರಯವೆಂಬ ಕಾಮನಬಿಲ್ಲು ಮೂಡಿದ ಪ್ರೇಮಿಗಳಿಗೆ ಕನಸೆಲ್ಲಾ ಬಣ್ಣ ಬಣ್ಣ.
ಪ್ರೀತಿಯೆಂಬುದು ಪ್ರತಿಯೊಂದು ಹ್ರುದಯದಲ್ಲಿ ಅಡಗಿದೆ.ಅದೊಂದು ಗುಪ್ತಗಾಮಿನಿ,ಎಂದೂ ಬತ್ತದ ಜೀವ ನದಿ. ಕೊಡುಗೈ ದಾನಿಯ ಅಪ್ಪಟ ಹಸನಾದ ಸುಪ್ತ ಮನಸ್ಸು.ಅದೇನೋ ಹುಚ್ಹು ಆಕರ್ಷಣೆಯಿಂದ ಸಂಬಂಧವಾಗುವ ಪ್ರೀತಿ ಹುಟ್ಟಿ,ದಾರಿಯಾಗಿ ಕೆಂಪು ಗುಲಾಬಿ ಕೈಸೇರಿಸಿದಾಗ ಮಾತ್ರ ಪ್ರೇಮಿಗಳೆಂಬ ಹೆಸರು.ಈ ಜನ ಪ್ರೇಮಿಗಳಾಗೇ ಇರುವಷ್ಟೂ ದಿನ ಪ್ರೀತಿ ಯೆಂಬುದು ಈ ಪ್ರೇಮಿಗಳ ದಿನಕ್ಕಾಗಿ ಅರಸುತ್ತದೆ.ವರ್ಶದಲ್ಲಿ ಒಮ್ಮೆ ಮಾತ್ರ ಸಿಂಗರಿಸಿಕೊಳ್ಳುತ್ತದೆ.ಸಂಸಾರಸಾಗರದಲ್ಲಿ ಅಪ್ಪಟ ಪ್ರೇಮಿಗಳಾಗಿ ಬದುಕ ನೌಕೆಯನ್ನು ತೇಲಿಸಿದರೆಷ್ಟು ಚೆನ್ನ! ಇಂತಹ ಒಂದೊಂದು ದಿನಗಳೂ ಉತ್ತಮಾರ್ಧವೆನಿಸಿರದ ಇನ್ನರ್ಧದಲ್ಲೂ ಅತ್ಯುತ್ತಮವನ್ನು ಕಾಣಬಹುದೆಂಬ ಧನಾತ್ಮಕ ಬದುಕಿನತ್ತ ಕರೆದೊಯ್ಯುವಂತಾದರೆ,ಅನುಕರಣೆಯೂ ಅರ್ಥವನ್ನು ನೀಡುತ್ತದೆ, ಸಂಸ್ಕ್ರುತಿಗೆ ಇನ್ನಷ್ಟು ಸತ್ವವನ್ನು ತುಂಬುತ್ತದೆ.
ಪ್ರತಿಯೊಬ್ಬ ಪ್ರೇಮಿಗಳೂ ಬದುಕಿನುದ್ದಕ್ಕೂ ಉತ್ತಮಸ್ನೇಹಿತರಾಗಿ, ಅತ್ಯುತ್ತಮ ಪ್ರೇಮಿಗಳಾಗಿ ಜೀವಂತವಾಗಿರಲಿ. ಈ ಹಬ್ಬ ಸದಾ ಸವಿಯ ತರಲಿ!