"ಪ್ರೀತಿಸಿದ ಹುಡುಗಿ"

"ಪ್ರೀತಿಸಿದ ಹುಡುಗಿ"

ಬರಹ

ಪ್ರೀತಿಸಿದ ಹುಡುಗಿ ಕೈ ಕೊಟ್ಟು ಓಡಿದಳು
ನಂಬಿದ ನನಗೆ ಮೋಸವನು ಮಾಡಿದಳು
||
ನಂಬದಿರಿ ನೀವ್ಯಾರು ಮೋಸದ ಹುಡುಗಿಯರನು||

ನಂಬಿದ್ದೆ ನಾನೊಂದು ಹೆಣ್ಣ
ಅಣ್ಣ ನಂಬಿದ್ದೆ ನಾನೊಂದು ಹೆಣ್ಣ ನಂಬ್ಯಾಡಿ ನೀವ್ಯಾರು ಹೆಣ್ಣ ಅಣ್ಣ

ಸುರಿದಾರು ನಿಮಗೆ ಬಿಸಿಯಾದ ಸುಣ್ಣ ||
ಬಣ್ಣದ ಮಾತಾಡಿ ಕಣ್ಣೊಡೆದಳಣ್ಣ
ಕಣ್ಣಲ್ಲಿ ನಾ ಅವಳ ತುಂಬಿ ಕೊಂಡೆನಣ್ಣ
ಕನಸು ಮನಸಲ್ಲಿ ಅವಳಿದ್ದಳಣ್ಣ ||ನಂಬಿದ್ದೆ||
ಏಳ್ದಂಗೆ ಕೇಳ್ತಿದ್ದೆ ಅವಳಮಾತ ಅಣ್ಣ
ನೀನಿಲ್ದೆ ನಾನಿಲ್ಲ ಅಂತಿದ್ದಳಣ್ಣ
ನನ್ನ ಮರೆತು ಬಿಡು ಅಂತೇಳಿ ಹೊಂಟೊದಳಣ್ಣ ||ನಂಬಿದೆ||
ನಗುನಗುತ ಮಾತಾಡುತಿದ್ಲು ಎಲ್ಲರತ್ರ ಅವಳು
ನಗುವಿನ ನೆನಪೊಂದ ಬಿಟ್ಟೊದಳವಳು

ನಂಬಿಸಿ ನನಗವಳು ಮೋಸವ ಮಾಡಿದಳು||ನಂಬಿದ್ದೆ||
ತುಪ್ಪದಂತ ಮಾತಾಡಿ ತೆಪ್ಪಗಾದಳಣ್ಣ

ಕಪ್ಪಗಿದ್ರು ಕೊಟ್ಟಿದ್ದೆ ನನ್ಮಸನ್ನ

ಕೊನೆಗವಳು ಕೊಟ್ಟೊದ್ಲು ಬರಿ ಕನಸನ್ನ ||ನಂಬಿದ್ದೆ||
ಅವಳ ಮಾತ ನಾ ಕೇಳಿ ಮನೆಮಂದಿ ಬಿಟ್ಟೆ
ಅವಳ ಪ್ರೀತಿ ಮಾತಿಗೆ ಹುಚ್ಚನಾಗಿ ಬಿಟ್ಟೆ
ಅವಳ್ ಕೈ ಕೊಟ್ಟು ಹೊದಾಗಿಂದ ಕುಡಿಯೊದ್ ಕಲ್ತು ಬಿಟ್ಟೆ ||ನಂಬಿದ್ದೆ||
ನಿನ್ನ ಬಿಟ್ಟು ಬದುಕಲ್ಲ ಅಂತಿದ್ದಳಣ್ಣ
ವಿಷ ಕುಡ್ದು ಹೊದ್ದಾಡತಿದ್ರು ಅವಳು
ನನ್ನ ತಿರುಗಿ ನೊಡಲಿಲ್ಲವಣ್ಣ ||ನಂಬಿದ್ದೆ||

-ವಿ ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ