ಪ್ರೀತಿ ಮರೆತಾಗ..
ಕವನ
ನಾ ನಿನ್ನ ಮರೆತಾಗ
ನೀ ನನ್ನ ನೆನೆದಾಗ
ನನ್ನದೆಯ ಬಡಿತ
ನಿನಗಾಗಿ ಮಿಡಿದಾಗ
ಆ ನಿನ್ನ ನೆನಪು
ಅಲೆಯಾಗಿ ಬಂದಾಗ
ನನ್ನೆದೆಯ ಪ್ರೀತಿ
ಹಬ್ಬಿ ಬೆಳೆದಾಗ
ನೀ ನನ್ನ ಹೆಸರು
ಮರೆತು ಬಿಟ್ಟಾಗ
ಈ ನಿನ್ನ ಪ್ರೀತಿ
ಕರಗಿ ಹೋದಾಗ
ನೀನಿಲ್ಲದ ಬದುಕ
ಬಾಡಿದ ಹೂಹಾಂಗ
ನೆನಪಿನ ಜೀವ
ಅಗಲಿ ಹೋದಾಗ
ನಿನ್ನ ಜೊತೆಯ ಉಸಿರು
ನನ್ನನ್ನು ಮರೆತಾಗ
ನನ್ನಿನ್ನ ಹೆಸರು
ಅಳಿಸಿ ಹಾಕಿದಾಂಗ
ಆ ನಿನ್ನ ಪ್ರೀತಿ
ನೆನಪು ಬಂದಾಗ
ದು:ಖದ ನೆಪಕೆ
ಕಣ್ಣೀರು ಹರೆದಾಗ
ನೀನಿಲ್ಲದ ಜೀವ
ಬತ್ತಿದ ಹೊಳೆಹಾಂಗ
ನಿನ್ನ ನಗು ಮುಖವ
ಕನಸಲ್ಲಿ ಕಂಡಾಗ
ಚೆಂದಾದ ಮುತ್ತಿಟ್ಟು
ಪ್ರೀತಿ ಮಾಡಿದಂಗ
ಒಲವಿನ ದೀಪ
ಹತ್ತಿ ಉರಿಯುವಾಗ
ನಾ ಕಂಡ ನನಸಲ್ಲ
ಕನಸೆಂದು ತಿಳಿದಾಗ
ಸೋತ ಜೀವದ ಮನ
ನಿಟ್ಟುಸಿರು ಬಿಟ್ಟಾಗ
" ನಾ ನಿನ್ನ ನೆನೆದೆ
ನೀ ನನ್ನ ಮರೆತೆ
ಪ್ರೀತಿಯ ಕೊರತೆ
ಕಾಣದ ಬದುಕೇ "