ಪ್ರೇಮ ಸ್ಪರ್ಶ

ಪ್ರೇಮ ಸ್ಪರ್ಶ

ಕವನ

ಭಾವ ಸ್ಫುರಿಸುವ ಪ್ರೇಮ ಸ್ಪರ್ಶ


ಹೃನ್ಮನ ಸ್ಪಂದನ ಪರಾಗಸ್ಪರ್ಶ


 


ಒಲವ ವೀಣಾ ಮೀಟಿದ ತಾನ


ಹೂಮನಸ್ಸಿನ ಭಾವಪೂರ್ಣ ಗಾನ


 


ಸಮರಸದಾ  ಮಧುರಾಲಿಂಗನ


ಭಾವನಾತ್ಮಕ ಸ್ಪಂದನ


 


ಪ್ರೇಮೋತ್ಸವ ಸುಖದ ಸಂಭ್ರಮ


ಆರ್ದ್ರತೆ ಇಂಗದ ಪ್ರೇಮ ಸಮಾಗಮ


 


ಪ್ರೇಮೋನ್ಮಾದತೆ ಶೃಂಗಾರ ಭಾವ


ಸುಮಧುರ ಸುಂದರ ಸ್ವರಮಾಧುರ್ಯ


 


ರೋಮಾಂಚನ ಮಿಲನ ಮಧುರ


ಪ್ರಣಯ ರಾಗ ಸ್ವರ  ಶೃಂಗಾರ


 


ಹೃದಯ ಸಂವಹನ ಮೋಹಕ ರಾಗ


ಅತಿ ಮಧುರ ಈ ಅನುರಾಗ


 


***ಪ್ರಕಾಶ ತದಡಿಕರ್ ***

ಚಿತ್ರ್

Comments

Submitted by venkatb83 Mon, 06/03/2013 - 14:40

"ಅತಿ ಮಧುರ ಈ ಅನುರಾಗ "

;()))

ಬಿಟ್ಟು ಬಿಡದೆ ಸುರಿತಿರುವ ಮಳೆ

ತಂಪೋ -ತಂಪ್ ಈ ಇಳೆ

ಅದ್ಕೇನ ಈ ಕವನಗಳ ಬೆಳೆ !!

ಮಳೆಯಲ್ಲಿ ಸಂಪದ ಸೇರಿರುವ ಕೆಲ ಪ್ರೇಮ ಪ್ರೀತಿ ಬರಹಗಳನ್ನು ಓದಿದಾಗ ಹರ್ಷೋಲ್ಲಾಸ ಉಂಟಾಗುವುದು ....

ಕವನ ಪ್ರಾಸಬದ್ಧವಾಗಿದ್ದು ಓದಲು ಚೆನ್ನಾಗಿದೆ . ಬರೆದ ಶೈಲಿಯು

ಶುಭವಾಗಲಿ

\।/

Submitted by prakash tadadikar Fri, 06/07/2013 - 15:50

In reply to by venkatb83

ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ವಂದನೆಗಳು .. ನಿಮ್ಮ ಮೆಚ್ಚುಗೆ ,ಸಲಹೆ ಸೂಚನೆ ಸದಾ ನನ್ನ ಕವಿತೆಗಳಿಗಿರಲಿ .. ಧನ್ಯವಾದಗಳು