ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !
ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !
೧. ಎಫ್' ಗ್ರುಪ್' ಎಪಿ, ನ್ಯುರೆಂಬರ್ಗ್,
೧೮ ನೆ ತಾ.ಜಪಾನ್, ಕೃವೇಷಿಯ ಪಂದ್ಯದ ಆಟಗಳು ಕಳಾಹೀನ ವಾಗಿದ್ದು ವಿಶ್ವ ಫುಟ್ ಬಾಲ್ ಟುರ್ನಿಯಲ್ಲಿ ಜಪಾನ್ (೦-೦) ಗೋಲ್ ರಹಿತ ಡ್ರಾ ನಿಂದ ಕೊನೆಗೊಂಡು ನಾಕ್ ಔಟ್ ಪ್ರವೇಶಿಸಲು ಗೆಲ್ಲಲೇಬೇಕಾದ ಅನಿವಾರ್ಯದ ಪರಿಸ್ಥಿತಿಯಲ್ಲಿ ತಂಡಗಳು ಎದುರಿಸಿ ಆಟವಾಡಿದವು. 'ಡ್ರಾ' ಅವುಗಳಿಗೆ ಮುಂದಿನ ಸುತ್ತು ಪ್ರವೇಶಿಸಲು ಸಹಾಯವಾಗದ ಅಪಾಯವು ಇದೆ.ವಿರಾಮದ ವೇಳೆಯಲ್ಲೂ ಎರಡು ಟೀಮ್ ಗಳು ತೀವ್ರವಾಗಿ ಸೆಣಸಿದರೂ ಗೋಲ್ ಆಗಲಿಲ್ಲ. ಇದೇ ಪರಿಸ್ಥಿತಿ ಉತ್ತರಾರ್ಧದಲ್ಲು ಮುಂದುವರೆಯಿತು. ಇಬ್ಬರಿಗೂ ತಲಾ ಒಂದು ಅಂಕ ಸಿಕ್ಕಿದೆ.ಇನ್ನೂ ಆಡಲು ಒಂದು ಪಂದ್ಯ ಬಾಕಿ ಇದೆ. ಹಾಲಿ ಬ್ರೆಸಿಲ್ ಗೆ ಕೃವೇಷಿಯ ಎದುರಾಳಿ. ಆಷ್ಟ್ರೇಲಿಯದ ದರ್ಜಿಸ್ರನ್ ೨೩ ನೆ ನಿಮಿಷದಲ್ಲಿ ಗೊಲ್ ಹೊಡೆದಾಗ ಜಪಾನಿನ ಗೋಲ್ ಕೀಪರ್ ಯೊಶಿಕಟ್ಸುನಿ ಕವಗುಚಿ ಗೊಗಸಾಗಿ ತಡೆದರು.ಕ್ರುವೇಷಿಯದ ರಾಬರ್ಟ್ ಕೊವಾಕ್ ೩೦ ನೆ ನಿಮಿಷದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದರಿಂದ ಅವನಿಗೆ ಎಚ್ಚರಿಕೆ ನೀಡಲಾಯಿತು. ಮುಂದಿನ ಆಷ್ಟ್ರೇಲಿಯ ವಿರುಧ್ದ ದ ಪಂದ್ಯದಲ್ಲಿ ಆಡುವಂತಿಲ್ಲ. ಶುರುವಾದ ೬ ನೆ ನಿಮಿಷದಲ್ಲೆ ಹೊಡೆದ ಚೆಂಡನ್ನು ಹಿಡೆತೋಷಿ ನಕತ ತಡೆದರು. ೩೦ ನೆನಿಮಿಷದಲ್ಲಿ ಹೊಡೆದ ಚೆಂಡನ್ನು ಸ್ಟಿಫೆ ಪ್ಲೆಟಿಕೊ ಗೊಲಾಗಂತೆ ತಡೆದರು. ಕಳೆದ ಬಾರಿ ೧೯೯೮ ರಲ್ಲಿ ಫ್ರಾನ್ಸಿನ ಲ್ಲಿ ನಡೆದ ವಿಶ್ವಕಪ್ ಸಾಕರ್ನಲ್ಲಿ ಪರಸ್ಪರ ಸೆಣೆಸಿದ್ದರು. ಕೃವೇಷಿಯ ಆಗ ೧-೦ ಗೆಲವು ಗಳಿಸಿತ್ತು.ಈ ಬಾರಿ ಜಪಾನ್ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿದ್ದಾರೆ.ಕೃವೇಷಿಯ ವಿರುಧ್ದ ಬ್ರೆಸಿಲ್ ಗೆ ಗೆಲುವಾಗಿತ್ತು.
೨. ಜಿ' ಗ್ರುಪ್, ಝೆಂಟ್ರಾಲ್ ಸ್ಟೇಡಿಯಾನ್ ಲಿಪ್ ಝಿಗ್
೧೮ ನೆ ತಾ. ಫ್ರಾನ್ಸ್ ವಿರುದ್ಧ ದ.ಕೊರಿಯ ತಲಾ ಒಂದು ಗೋಲಿನಿಂದ ಡ್ರಾ ಮಾಡಿಕೊಂಡಿತು.ಫ್ರಾನ್ಸಿಗೆ ಡ್ರಾ ಆದರು ಇನ್ನೂ ಹೊರಗುಳಿಯುವ ಭಯ ತಪ್ಪಿದ್ದಲ್ಲ. ಮೊದಲು ೧ ನೆ ನಿಮಿಷದಲ್ಲೇ ಥಿಯೆರ್ರಿ ಹೆನ್ರಿಗೊಲ್ ಬಾರಿಸಿದರು. ೮೧ ನೆ ನಿಮಿಷದಲ್ಲಿ ದ.ಕೊರಿಯದ ಪಾರ್ಕ್ ಜಿ.ಸಂಗ್ ಗೋಲ್ ಹೊಡೆದು ಸ್ಕೊರನ್ನು ಸಮನಾಗಿಸಿದರು. ದಕ್ಷಿಣಕೊರಿಯ ೪ ಪಾಯಿಂಟಿನಿಂದ ಮೇಲಿದೆ.ಫ್ರಾನ್ಸ್ ೨ ಅಂಕದಿಂದ ೨ ನೆ ಸ್ಥಾನ .ಸ್ಪೈನ್ ೧ ಅಂಕದಿಂದ ೩ ನೆ ಸ್ಥಾನ. ಫ್ರಾನ್ಸ್ ಆಟಗಾರರು ದಣಿದವರಂತೆ ತೋರುತ್ತಾರೆ. ಕೆಲವರಿಗೆ ವಯಸ್ಸಾಗಿದೆ. ಕಪ್ತಾನ್ ಝೆಡಾನ್ ವಿಶ್ವಕಪ್ಪಿನ ಫೈನಲ್ಸ್ ಆದಕೂಡಲೇ ನಿವೃತ್ತಿ ಘೋಶಿಸುವ ಸಾಧ್ಯತೆಗಳು ಇವೆ.ಯುವ ಪ್ರತಿಭೆಗಳನ್ನು ತುಂಬುವುದು ಈಗ ಅಗತ್ಯವಾಗಿದೆ. ಭಾರದಮೂಲದ ವಿಕಾಸ್ ಹೆಚ್ಚಿಗೆ ಆಟಗಾರರ ಪಟ್ಟಿಯಲ್ಲಿದ್ದಾನೆ. ಅವನನ್ನು ಬಳಸಿಕೊಳ್ಳಬಹುದು. ಕಾದು ನೋಡ ಬೇಕಾಗಿದೆ !
೩. ಎಫ್ ಗ್ರುಪ್, ಮ್ಯುನಿಕ್ ಅಲಿಯಾಂಝ್ಸ್, ಅರೆನ, ೧೮, ಜೂನ್.ವಿಶ್ವ ಕಪ್ ಛಾಂಪಿಯನ್ ಬ್ರೆಸಿಲ್, ವಿರುಧ್ದ ಆಷ್ಟ್ರೇಲಿಯ (೨-೦) ನಿಂದ ವಿಜಯಿಯಾಗಿದೆ.ಪ್ರಥಮಾರ್ಧದಲ್ಲಿ ಯಾವ ಕಡೆಗೂ ಗೋಲ್ ಆಗಲಿಲ್ಲ. ೪೯ ನೆ ನಿಮಿಷದಲ್ಲಿ ಆಡ್ರಿಯಾನೋ ರೋನಾಲ್ಡೋ ಅವರಿಂದ ಪಾಸ್ ಪಡೆದು ಹೊಡೆದ ಗೋಲ್ ಅದ್ಭುತವಾಗಿತ್ತು.ಆಡ್ರಿಯಾನೋ ಇದನ್ನು ಶುಕ್ರವಾರದಂದು ಜನಿಸಿದ ಅವರ ಮಗನಿಗೆ ಸಮರ್ಪಿಸಿದರು !೧೯೭೪ ರಿಂದ ವಿಶ್ವ ಕಪ್ಪಿಗೆ ಪಾಡಾರ್ಪಣೆ ಮಾಡಿದ ಆಷ್ಟ್ರೇಲಿಯದ ವಿರುಧ್ದ ಫ್ರೆಡ್ ೮೯ ನೆ ನಿಮಿಷದಲ್ಲಿ ಮತ್ತೊಂದು ಗೊಲ್ ಹೊಡೆದರು.ಬ್ರೆಸಿಲ್ ಟಿಮ್ ಒಂದು ಶಕ್ತಿ ಸ್ಥಳ ವಾಗಿದೆ. ಇರುವ ಆಟಗಾರರೆಲ್ಲಾ ಅವರವರ ಕ್ಷೇತ್ರಗಳಲ್ಲಿ ನಿಷ್ಹಾತರು.ಕಪ್ತನ್ ಕಾಪು,ಈ ೧೮ನೆ ಸಾಕರ್ ನಲ್ಲಿ ಭಾಗವಹಿಸುತ್ತಿದ್ದಾರೆ.ಅವರು ೧೪ ಬಾರಿ ಜಯಗಳಿಸಿ ಡುಂಗಾ,ಮತ್ತು ಟಪ್ಫಾರೆಲ್ ರ ರೆಕಾರ್ಡ ಗೆ ಸರಿಸಮಾನರಾಗಿದ್ದಾರೆ.ಅವರ ದೇಶಕ್ಕೆ ಆಡಿದ ಒಟ್ಟು ೧೪೮ ಆಟಗಳಲ್ಲಿ ೧೯ ಆಟಾಗಳಲ್ಲಿ ಮಾತ್ರ ಸೋತಿದ್ದಾರೆ.ಬೇರೆ ಎಲ್ಲಾ ಆಟಗಾರರಿಗಿಂತ ಹಿರಿಯರೆಂದರಿ ರೋನಾಲ್ಡೋ. ಅವರು ಇಗ ಸ್ವಲ್ಪ ಸೊತಿದ್ದಾರೆ. ವಯಸ್ಸಿನಲ್ಲಿ ಅದು ಅವರ ಆಟದ ಮೇಲೆ ಪರಿಣಾಮ ಬೀರಿದೆ.ಬಹುಶಃ ಫೈನಲ್ ಆಟದ ನಂತರ ಅವರೇ ತಮ್ಮ ನಿವೃತ್ತಿಯನ್ನು ಘೊಶಿಸ ಬಹುದು ! ವಿಶ್ವಕಪ್,ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !
೧೯, ಜೂನ್, ಸೋಮವಾರ, ೨೦೦೬. ಇಂದಿನ ಪಂದ್ಯಗಳು :
ಸಾ. ೬-೩೦ ಟೋಗೊ ವಿರುಧ್ದ ಸ್ವಿಟ್ಸರ್ಲ್ಯಾಂಡ್ , 'ಜಿ'
ರಾ. ೯-೩೦ ಸೌದಿ ಅರೇಬಿಯ ವಿರುಧ್ದ ಉಕ್ರೇನ್, 'ಎಚ್''
ಮ.ರಾ. ೧೨-೩೦ ಸ್ಪೈನ್ ವಿರುಧ್ದ ಟ್ಯುನೀಷಿಯ, 'ಎಚ್''