ಬಂತು ಪಾತರಗಿತ್ತಿ
ಕವನ
ಬಂತು ಪಾತರಗಿತ್ತಿ ಧರೆಯ ಸುತ್ತಿ
ಬಣ್ಣ ಬಣ್ಣಗಳ ರೆಕ್ಕೆ ಬಿಚ್ಚಿ
ಬಂದಿಳಿಯಿತು ಆಕಾಶದಿಂದ
ಸುಂದರ ಸುಮ ತೋಟದೊಳಗೆ
ವಿಧ ವಿಧದ ವರ್ಣಗಳ
ಸುಂದರ ಪುಷ್ಪಗಳು
ದಿಗಿಲಿಗೊಂಡಿತು ಚಿಟ್ಟೆ
ಪುಷ್ಪಮೇಳ ಕಂಡು
ಯಾವ ಸುಮದೊಡನೆ
' ಸರಸವಾಡಲಿ ' ಎಂದು
ತುಂಟ ಸುಮಗಳ
ಚಂಚಲ ಕಣ್ಣೋಟ
ಗಾಳಿಯಲಿ ಬಳಕುವ
ಒನಪು ಒಯ್ಯಾರ
ತುಂಟ ಪಿಸುಮಾತುಗಳ
' ಒಲವ ಧಾರೆ '
ಅಗಣಿತ ಸುಮಗಳ
ಚಂಚಲ ಕಣ್ಣೋಟ ಕಂಡು
ತಬ್ಬಿಬ್ಬಾಯ್ತು ತಡವರಿಸಿತು
ಬಡಪಾಯಿ ಚಿಟ್ಟೆ
ಹಾರಿತು ಬಂದ ದಾರಿಗೆ
' ಸುಂಕವಿಲ್ಲೆಂದು '
ಕಣ್ಣರಳಿಸಿದವು
ಬಿರಿದ ಸುಮ ವೃಂದಗಳು
ತಬ್ಬಿಬ್ಬಾದ ಚಿಟ್ಟೆಯನು ಕಂಡು
Comments
ಉ: ಬಂತು ಪಾತರಗಿತ್ತಿ
In reply to ಉ: ಬಂತು ಪಾತರಗಿತ್ತಿ by swara kamath
ಉ: ಬಂತು ಪಾತರಗಿತ್ತಿ
ಉ: ಬಂತು ಪಾತರಗಿತ್ತಿ
In reply to ಉ: ಬಂತು ಪಾತರಗಿತ್ತಿ by makara
ಉ: ಬಂತು ಪಾತರಗಿತ್ತಿ
ಉ: ಬಂತು ಪಾತರಗಿತ್ತಿ
ಉ: ಬಂತು ಪಾತರಗಿತ್ತಿ