ಬಣ್ಣ ಕಳಚುವ ಕೋಣೆ

ಬಣ್ಣ ಕಳಚುವ ಕೋಣೆ

ಬರಹ

ಏಕಾಂತವಿದೆ ಗೆಳತಿ ಬದುಕಿನುದ್ದ
ಏಕಾಂಕವಿದೆ ಗೆಳತಿ ಜೀವನುದುದ್ದ
ನಾನು ಬಣ್ಣ ಹಚ್ಚುತ್ತೇನೆ
ನೀನೆ ಪ್ರೇಕ್ಷಕಿ
ತೆರೆ ಸರಿಯುತ್ತದೆ
ಬಣ್ಣದೊಳಗು ಬೆವರು ಸುರಿಯುತ್ತದೆ
ಮಾತು ಹೊರಡುವುದಿಲ್ಲ

ನಿನ್ನ ಮುಖದಲ್ಲಿ ನನ್ನ ಮಾತು
ಬಣ್ಣ ನನ್ನ ಮುಖದಲ್ಲಿ
ತೆರೆ ಮುಚ್ಚುತ್ತದೆ
ಬಣ್ಣ ಕಳಚಿಹೋಗುತ್ತದೆ
ಒಂದುಗೂಡುತ್ತೇವೆ ಬಣ್ಣ ಕಳಚುವ ಕೋಣೆಯಲ್ಲಿ
ವಿಮರ್ಶೆಯಿಲ್ಲದೆ......

ರಾಧಾಕೃಷ್ಣ ಆನೆಗುಂಡಿ