ಬದುಕಲ್ಲಿ ಮುನ್ನಡೆಯಲು ಒಂದು ಪ್ರೇರಣೆ

ಬದುಕಲ್ಲಿ ಮುನ್ನಡೆಯಲು ಒಂದು ಪ್ರೇರಣೆ

ಬರಹ

 

 

ಈಗಿನ-ಇಂದಿನ ಜಂಜಾಟದ, ಗಡಿಬಿಡಿ, ಹಡಾವುಡಿಯ ಬದುಕು, ಸಂಬಂದಿಕರ, ಸ್ನೇಹಿತರ, ಅಕ-ಪಕ್ಕದವರ, ಅವರ -ಇವರ ಹೀಗೆ ಎಲ್ಲರ ಕಥೆ ಕೇಳಿಯೋ ನೋಡಿಯೋ, ಮತ್ತು ಲೋಕದ ಹಿಂಸೆ, ಬ್ರಸ್ತಾಚಾರ ,ಟ್ರಾಫಿಕ್ ಜಾಮ್ ಹೀಗೆ ನೂರೆಂಟು ಗೊಂದಲ ಗೂಡುಗಳು ಮತ್ತು ವಿಷಯಗಳ ನಡುವೆ ಬದುಕುತ್ತಿರುವ ನಮಗೆ ಕೆಲವೊಂದು ಸಾರಿ ಈ ಬದುಕೇ ಸಾಕಾಗಿ ಬಿಟ್ಟಿದೆ, ನಮ್ಮತನಕ್ಕೆ ಬೆಲೆಯಿಲ್ಲ, ಸತ್ಯ ನ್ಯಾಯ ನೀತಿ ಧರ್ಮ ಅಳವಿಗೆ ಬಂದುಬಿಟ್ಟಿದೆ ಅಂದುಕೊಂದು ರೋಸಿಹೊಗಿದ್ದು ಇರುತ್ತದಲ್ಲವೆ?

ಇನ್ನು ಕೆಲವೊಂದು ಸಾರಿ ಯಾವೊಂದು ಕೆಲಸ ಮಾಡಲು ಏನೂ ಮಾಡಲು ಇಸ್ಟವಿಲ್ಲದೆ ಒಂಥರಾ ನಿರಾಸಕ್ತಿಯಿಂದ, ನಿಸ್ಸ್ಯಕ್ತರಂತೆ, ಮಾನಸಿಕ ಕ್ಸ್ಹೊಭೆಯಿಂದ ಇದ್ದಾಗ , ಹೀಗೆ ಇಂತೆಲ್ಲ ಸಮಯದಲ್ಲಿ 'ಯಾರಾದರೊಬ್ಬರು' ನಮ್ಮ ಮನಸ್ಸನ್ನು ಉಲ್ಲಾಸಮಯ ಮಾಡಿ , ಹುಮ್ಮಸ್ಸು ತುಂಬಿ ಜೀವನದಲ್ಲಿ ಮುಂದೆ ಬರಲು ಸಹಕಾರಿಯಾಗುತ್ತರಲ್ಲವೇ? ನಾನು ಸಹಾ ಎಸ್ಟೊಂದು ಸಾರಿ ಈ ಮೇಲೆ ಬರೆದ ವಿಶಗಳಿಂದ ರೋಸಿ ಹೋಗಿ ತತ್! ಈ ದರಿದ್ರ ಜೀವನವೇ ಸಾಕಪ್ಪ ಎಂದಾಗಲೆಲ್ಲ ಇಬ್ಬರು ವ್ಯಕ್ತಿಗಳು ಮತ್ತೆ ನನ್ನ ಜೀವನ ಆಸಕ್ತಿ ಚಿಗುರಿ ಕ್ರಿಯಾತ್ಮಕವಾಗಿ ಬದುಕಲು ಸಹಾಯ ಮಾಡಿದರು. ಅವರು ಯಾರಿರಬಹುದು? ನಿಮ್ಮಲ್ಲಿ ಕೆಲವರ ಊಹೆ ಬಹುಶ ಅವರು ಡಾಕ್ಟರ್ , ಸಾಧು, ಸಂತ, ಯೋಗಿ, ಸ್ನೇಹಿತರೋ, ಸಂಬಂದಿಗಲೋ ಅಂತಿರಬಹುದು....

ಆದರೆ ಅವರು ಈ ಮೇಲಿನ ಯಾರು ಅಲ್ಲ. ಅವರಲ್ಲಿ ಒಬ್ಬರು ಇಳಿವಯಸ್ಸಲ್ಲಿರುವ ಸುಮಾರು ೬೦ ರ ಸಮೀಪದ ಹೆಣ್ಣುಮಗಳು, ಖಾಸಗಿ ಆಸ್ಪತ್ರೆಯೊಂದರಲ್ಲಿ ನೆಲಗೂದಿಸುವ, ಒರೆಸುವ, ಹಾಗೂ ಇನ್ನಿತರ ಸಹಾಯಕ ಕೆಲಸ ಮಾಡುತ್ತಾ ಜೆವಿಸುತ್ತಿರುವ ಆಯಮ್ಮನ ಸಂಸಾರದ ಬಗ್ಗೆ ಅಥವಾ ಮಕ್ಕಳ ಬಗ್ಗೆ ಗೊತ್ತಿಲ್ಲ, ಆದರೆ ಆಯಮ್ಮ ಯಾವೊತ್ತು ದುಖ ಪಟ್ಟಿದ್ದಾಗಲಿ,ಬೇಸರಗೊಂಡಿದ್ದಾಗಲಿ, ಕಿರುಚಾದಿದ್ದು, ನೋಡಲಿಲ್ಲ. ಎಸ್ಟೊಂದು ಕೆಲಸ ವಹಿಸಿದರು ಸಹಾ ಎದುರು ಮಾತಾಡದೆ ಬೆಳಗಿಂದ ರಾತ್ರಿವರೆಗೂ ದುಡಿಯುತ್ತಿದ್ದ ಅವರು ನನಗೇ ಒಂದು ಅಚ್ಚರಿಯಾದರು. ಇಲ್ಲಿ ಒಂದು ಮುಖ್ಯ ವಿಷಯ ಆಯಮ್ಮನಿಗೆ ಗೂನು ಬೆನ್ನು, ಹೀಗಾಗಿ ಅವರು ನನ್ನ ಅಚ್ಚರಿಗೆ ಕಾರಣ, ದೈಹಿಕ ಅಂಗವಿಕಲತೆಯನ್ನು ಹೊತ್ತು ಸಹಾ ಅಸ್ಟೊಂದು ಜೀವನೋತ್ಸಾಹದಿಂದ ಬದುಕುವ ಅವರ ರೀತಿ ಎಲ್ಲ ಅಂಗವಿಕರಿಗೂ ಮತ್ತು ಚೆನ್ನಾಗಿದ್ದು, ಒಂದು ರೀತಿ ಮಾನಸಿಕವಾಗಿ, ದೈಹಿಕವಾಗಿ ಅಂಗವಿಕಲರಂತೆ ಬಾಳಿ ಬದುಕುವ ನಮ್ಮನ್ತವ್ರಿಗೂ ಅವರು ಮಾಧರಿ. ಅವರು ಈಗಲೂ ಬಸವೇಶ್ವರನಗರದ ಮಾತೃ ನರ್ಸಿಂಗ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನೊಬ್ಬ ನನ್ನ ಅಚ್ಚರಿಯ ವ್ಯಕ್ತಿ, ಅವರು ಸರಿ ಸುಮಾರು ೬೦ ರ ಇಳಿ ವಯಸಿನನವ್ರು. ಅವರು ಎಲ್ಲೋ ಒಂದು ಕಡೆ ಕ್ಲೆರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ, ಆಯಪ್ಪ ದಿನಂಪ್ರತಿ ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಸರಿ ಸುಮಾರು ೬.೩೦ ಗೆ ಮನೆಗೆ ಬರುವಾಗ ಅವರ ನಡೆ ನುಡಿ ನೋಡಿದವರಿಗೆ ಅಹ! ಜೀವನದಲ್ಲಿ ಬದುಕಿದರೆ ಈ ರೀತಿ ಗರ್ವದಿಂದ, ಬದುಕಬೇಕು ಅನ್ನಿಸುವುದು ಸುಳ್ಳಲ್ಲ. ಬೆಳಗ್ಗೆ ಮನೆಯಲ್ಲಿ ಕಾಫ್ಫೆ ತಿಂಡಿ ಸೇವಿಸಿ ಹೆಗಲಿನ ಮೇಲೆ ಒಂದು ಕಾಟನ್ ಚೀಲವನ್ನು , ಒಂದು ಕೈನಲ್ಲಿ ಚಿಕ್ಕ ಬ್ಯಾಗನ್ನು ಹಿಡಿದುಕೊಂಡು ಸಿಗರೇಟನ್ನು ಇನ್ನೊದು ಕೈ ನಲ್ಲಿ ಹಿಡಿದುಕೊಂಡು ದಂ ಹೊಡೆದುಕೊಂಡು ರಾಜ ಗಂಭಿರ್ಯದಿಂದ ಸಾಗುವ ಅವರ ಆ ನಡೆ ನೋಡಲು ಬಹು ಸೊಗಸು.

ಇದರಲ್ಲೇನು ವಿಶೇಷ ಬಹುಪಾಲು ಜನ ಹೀಗೆ ಹೋಗುತಾರೆ ಎನ್ನಬಹುದು ನೀವು.

ಅಲ್ಲೇ ಸ್ವಾಮಿ ವಿಶೇಷ,ಇರೋದು

ಇವರೂ ಸಹಾ ಅಂಗವಿಕಲ ಇವರಿಗೆ ಒಂದು ಕೈನಲ್ಲಿ 'ಮಣಿಕಟ್ಟೆ' ನ ವರೆಗೆ ಕೈ ಭಾಗ ಇಲ್ಲ .....

ಇಂತಿಪ್ಪ ಅವರು (ಈ ಮನುಷ್ಯ ಸಹಾ ಬಸವೇಶ್ವರನಗರದ ೮ನೆ ಮೇನ್ ಪಕ್ಕದ ಆಟದ ಮೈದಾನದ ಎದುರಿನ ಮನೆಯಲ್ಲಿದ್ದಾರೆ.)ದೈಹಿಕ ಅಂಗವಿಕಲತೆಯನ್ನು ಮೆಟ್ಟಿ ನಿಂತು ಸೂಪರ್ ಆಗಿ ಬದುಕುತ್ತಿರುವುದು ನನ್ನ ಈ ಬರವಣಿಗೆಗೆ ಕಾರಣ. ಇವರಂತೆ ಇನ್ನು ಅದೆಸ್ಟೋ ಜನ ನಮ್ಮ-ನಿಮ್ಮ ನಡುವೆ ಇರಬಹುದು, ನಿಮಗೂ ಅವರು ಗೊತ್ತಿರಬಹುದು, ಹಾಗಿದ್ದರೆ ಅ0ತವರನ್ನ ನಮಗೆ ನೀವೊಂದು ಲೇಖನ ಬರೆಯುವುದರ ಮೂಲಕ ಪರಿಚಯಸುತ್ತೀರಲ್ಲ?.....