ಬದುಕಿ ನೋಡಿ...

ಬದುಕಿ ನೋಡಿ...

ಕವನ

ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ

ಬದುಕಲು ಸಾವಿರ ದಾರಿಗಳಿವೆ ಬದುಕಿ ನೋಡಿ

 

ಸಾಲ ಮಾಡಿ ತೀರಿಸಲಾರದೆ ನೀನು ಸತ್ತರೆ

ನಿನ್ನ ನಂಬಿ ಬದುಕಿದವರ ಕಥೆ ಏನೋ ದೊರೆ

ದುಡಿದು ಸಾಲವನ್ನು ತೀರಿಸಿ ಬದುಕಬೇಕು

ನಿನ್ನ ನಂಬಿದವರ ಬಾಳಿಗೆ ಬೆಳಕು ನೀನಾಗಬೇಕು 

!!ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ!!

 

ಪ್ರೀತಿಸಿ ಬಿಟ್ಟುಹೋದರೆಂದು ನೀನು ಸತ್ತರೆ

ಕೇಳುವವರು ಯಾರು ನಿನ್ನ ಹೆತ್ತುಹೊತ್ತವರ ಮೊರೆ

ಪ್ರೀತಿಸಿ ಬಿಟ್ಟುಹೋದವರೆದುರು ಬೆಳೆದು ನಿಲ್ಲು

ನಿನ್ನ ಸಾಧನೆಯೇ ಅಡಗಿಸುವುದು ಅವರ ಸೊಲ್ಲು

!!ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ!!

 

ಸೋತೆನೆಂದು ನೀನು ಸಾವಿಗೆ ಶರಣಾದರೆ

ಉಳಿದವರ ಒಡಲ ಮೇಲೆ ಎಳೆದಂತೆ ಬರೆ

ಸೋಲೇ ಗೆಲುವಿನ ಮೆಟ್ಟಿಲೆಂದು ನೀನು ಅರಿತರೆ

ನೀನಾಗುವೇ ಗೆದ್ದು ಮಿನುಗುವ ತಾರೆ

!!ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ!!

 

ಕಾಯಬೇಕು ಸಾವು ತಾನಾಗಿಯೇ ಬರುವವರೆಗೆ

ಬಾಳಬೇಕು ನಮ್ಮ ಆಯಸ್ಸು ಮುಗಿಯುವವರೆಗೆ

ಸಾಧಿಸಬೇಕು ಜನರು ನಮ್ಮನ್ನು ಮರೆಯದ ಹಾಗೆ

ಹೋರಡಬೇಕು ಬೆಲೆಯ ಕೊಟ್ಟು ದೇವರ ಕರೆಗೆ

!!ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್