ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ
ಕವನ
ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ
ನನ್ನ ಕಣ್ಣುಗಳಲ್ಲಿ
ನೋಡು ನೀ ನಿನ್ನನ್ನೇ
ಕೆದಕೆನ್ನ ಹೃದಯವನು
ಬಗಿಯನ್ನ ಮನವ
ಸಿಗದೇನು ನಿನ್ನಬಿಟ್ಟಿನ್ನೇನು
ಹೇಳದಿರು ಸಿಗಲಿಲ್ಲ
ನೀನು ನನ್ನೊಳಗಿಲ್ಲೆ೦ದು
ನಾನು ಮಾಡುವುದೆಲ್ಲ
ನಿನಾಗಾಗಿಯಲ್ಲದೆ
ಮತ್ತಾರಿಗಲ್ಲ
ಓ ಅ೦ತರಾತ್ಮ
ಬದುಕು ಸಾವುಗಳೆರೆಡು
ನಿನಗೆ ಮುಡಿ ಬಿಟ್ಟಿರುವೆ
ನುಡಿಯದಿರು ದಿಟವಲ್ಲವೆ೦ದು
ನಿನಗೆ ಗೊತ್ತಿರುವ೦ತೆ
ದಿಟವಲ್ಲವೇನು
ಓ ಅ೦ತರಾತ್ಮ
ಹೇಳದಿರು ಕೇಳದಿರು
ಇದಕ್ಕಿ೦ತ ಹೆಚ್ಚಿನದು!
ಬದುಕಲಾರೆನು ನಾನು
ಸತ್ಯಾದಾದಿಯ ತೂರೆದು
ತೂರೆದೆನ್ನನೂಗದಿರು
ಓ ಅ೦ತರಾತ್ಮ