ಬನಾನ ರೈಸ್
ಬೇಕಿರುವ ಸಾಮಗ್ರಿ
ಸಣ್ಣಗೆ ಹೆಚ್ಚಿಕೊಂಡ ನೇಂದ್ರ ಬಾಳೆಹಣ್ಣಿನ ಹೋಳುಗಳು ೧/೨ ಕಪ್, ಬೆಳ್ತಿಗೆ ಅನ್ನ ೧ ಕಪ್, ಒಣಮೆಣಸು ೧, ಹಸಿ ಮೆಣಸು ೨, ಉದ್ದಿನಬೇಳೆ ೧ ಚಮಚ, ಸಾಸಿವೆ ೧ ಚಮಚ, ಎಣ್ಣೆ ೪ ಚಮಚ, ಕರಿಬೇವು ೪ ಎಸಳು, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ, ಹಸಿಮೆಣಸು ಸಿಗಿದು ಹಾಕಿ ಒಗ್ಗರಣೆ ಮಾಡಿಕೊಂಡು ಅನ್ನ ಹಾಕಿ ಮಗುಚಿ ಬೇಕಷ್ಟು ಉಪ್ಪು ಹಾಕಿ ನಂತರ ಸಣ್ಣಗೆ ಹೆಚ್ಚಿದ ಬಾಳೆಹಣ ್ಣನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬನಾನ ರೈಸ್ ತಿನ್ನಲು ರೆಡಿ.