ಬನ್ನಿ ನೆನಪುಗಳೆ...

ಬನ್ನಿ ನೆನಪುಗಳೆ...

ಕವನ

ಬನ್ನಿ ನೆನಪುಗಳೆ
ಕಾವಿಗೆ ಕೂತ ನೆನಪುಗಳೇ ಬನ್ನಿ
ಉರಿವ ಬೇಸಿಗೆಗೆ ತಂಗಾಳಿಯಾಗಿ
ಸುರಿವ ಮಳೆಗೆ ಹಿಡಿದ ಕೊಡೆಯಾಗಿ
ಕೊರೆವ ಚಳಿಗೆ ಹೊದೆವ ಕಂಬಳಿಯಾಗಿ
ಹಿತವಾಗಿ ಮುದ ತರುವಂತಿದ್ದರೆ ಬನ್ನಿ
ಕಾಡಿ ತಡಕಾಡಿ ಅರೆಜೀವವಾಗಿಸಿ
ಇದ್ದೂ ಸತ್ತಂತೆನ್ನ ಇರಿಸುವುದಾದರೆ
ಮನದ ಮೂಲೆಯಿಂದ ಮರೆಯಾಗಿ

Comments